ಚಂದ್ರ ಮತ್ತು ಪಾಕಿಸ್ತಾನ ಎರಡೂ ಒಂದೇ.. ಅದು ಹೇಗೆ ಗೊತ್ತಾ?
ಭಾರತದ ಚಂದ್ರಯಾನ-3 ಯಶಸ್ಸಿನ ಬಗ್ಗೆ ಕೇಳಿದ್ದಕ್ಕೆ ಖಡಕ್ ಉತ್ತರ
‘ಚಂದ್ರಯಾನ-3 ಅಲ್ಲಿರುವ ಎಲ್ಲಾ ಪ್ಯಾಸೇಂಜರ್‌ಗಳಿಗೆ ಸೆಲ್ಯೂಟ್’
ಇಸ್ರೋ ವಿಜ್ಞಾನಿಗಳ ಚಂದ್ರಯಾನ-3 ಯಶಸ್ಸು ಇಡೀ ವಿಶ್ವವೇ ಭಾರತದತ್ತ ತಿರುಗುವಂತೆ ಮಾಡಿದೆ. ಭಾರತದ ಸಾಧನೆಗೆ ಎಲ್ಲರೂ ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಸಂಭ್ರಮದ ಕ್ಷಣದಲ್ಲೇ ಪಾಕಿಸ್ತಾನದ ವ್ಯಕ್ತಿಯೊಬ್ಬ ಕೊಟ್ಟ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ. ಭಾರತದ ಚಂದ್ರಯಾನ-3 ಯಶಸ್ಸಿನ ಬಗ್ಗೆ ಕೇಳಿದ ಪ್ರಶ್ನೆಗೆ ಆ ವ್ಯಕ್ತಿ ಥಟ್ ಅಂತಾ ಡೈಲಾಗ್ ಹೊಡೆದು ನೆಟ್ಟಿಗರು ಹುಬ್ಬೇರುವಂತೆ ಮಾಡಿದ್ದಾನೆ.
ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸೇಫ್ ಲ್ಯಾಂಡ್ ಆಗುತ್ತಿದ್ದಂತೆ ಸ್ಥಳೀಯ ಯುಟ್ಯೂಬರ್ ಪಾಕ್ ಪ್ರಜೆ ಅಭಿಪ್ರಾಯ ಕೇಳಲು ಮುಂದಾಗಿದ್ದಾರೆ. ಈ ವೇಳೆ ಉತ್ತರಿಸಿದ ವ್ಯಕ್ತಿಯೊಬ್ಬ ನಾವು ಈಗಾಗಲೇ ಚಂದ್ರನ ಮೇಲೆ ವಾಸಿಸುತ್ತಿದ್ದೇವೆ ಅಲ್ವಾ ಎಂದಿದ್ದಾರೆ. ಚಂದ್ರ ಮತ್ತು ಪಾಕಿಸ್ತಾನ ಎರಡೂ ಒಂದೇ. ಇಲ್ಲೂ ನೀರಿಲ್ಲ ಅಲ್ಲೂ ಇಲ್ಲ. ಇಲ್ಲೂ ಗ್ಯಾಸ್, ವಿದ್ಯುತ್ ಸೌಲಭ್ಯವಿಲ್ಲ. ಅಲ್ಲೂ ಕೂಡ ಗ್ಯಾಸ್, ವಿದ್ಯುತ್ ಸಂಪರ್ಕ ಇಲ್ಲ. ಹೀಗಾಗಿ ಚಂದ್ರ ಹಾಗೂ ಪಾಕಿಸ್ತಾನ ಎರಡೂ ಕೂಡ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿವೆ ಎಂದು ಖಡಕ್ ಆಗಿ ಹೇಳಿದ್ದಾರೆ. ಪಾಕ್ ಪ್ರಜೆಯ ಈ ಉತ್ತರಕ್ಕೆ ಪಕ್ಕದಲ್ಲಿದ್ದವರೆಲ್ಲಾ ಬಿದ್ದು, ಬಿದ್ದು ನಕ್ಕರೆ, ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ.
Meanwhile, the Sense of Humor of Pakistani People are always top class. This on Chandrayaan pic.twitter.com/Y127YPeyIv
— Joy (@Joydas) August 23, 2023
ಇನ್ನು, ಚಂದ್ರಯಾನ 2 ಬಗ್ಗೆ ಗೇಲಿ ಮಾಡಿದ್ದ ಪಾಕಿಸ್ತಾನದ ಮಾಜಿ ಸಚಿವ ಫವಾದ್ ಹುಸೇನ್ ಕೂಡ ಭಾರತವನ್ನು ಅಭಿನಂದಿಸಿದ್ದಾರೆ. ಚಂದ್ರಯಾನ- 2ರ ಲ್ಯಾಂಡಿಂಗ್ ಯೋಜನೆ ವಿಫಲವಾದಾಗ ಭಾರತವನ್ನು ಹೀಯಾಳಿಸಿದ್ದರು. ಈಗ ಅದೇ ವ್ಯಕ್ತಿ ಚಂದ್ರಯಾನ-3 ಲ್ಯಾಂಡಿಂಗ್ ಕ್ಷಣವನ್ನು ನೇರ ಪ್ರಸಾರ ಮಾಡುವಂತೆ ಒತ್ತಾಯಿಸಿದ್ದರು.
ಇದನ್ನೂ ಓದಿ: ಜೈ ಹೋ ಇಸ್ರೋ.. ಮುಗಿಲು ಮುಟ್ಟಿದ ಸಂಭ್ರಮಾಚರಣೆ.. ಅಂದು ಗೇಲಿ ಮಾಡಿದ್ದವರೆಲ್ಲಾ ಇಂದು ಗಪ್‌ಚುಪ್!
‘ಚಂದ್ರಯಾನ-3ರಲ್ಲಿ ಪ್ಯಾಸೇಂಜರ್ ಪ್ರಯಾಣ’
ಪಾಕಿಸ್ತಾನದಲ್ಲಿದ್ದವರಿಗೆ ಭಾರತದ ಇಸ್ರೋ ಸಾಧನೆಯ ಮಹತ್ವ ಚೆನ್ನಾಗಿ ಅರ್ಥವಾಗಿದೆ. ಈ ಮಧ್ಯೆ ರಾಜಸ್ಥಾನದ ಕ್ರೀಡಾ ಸಚಿವ ಅಶೋಕ್ ಚಂದನಾ ನೀಡಿರೋ ಹೇಳಿಕೆ ಕೂಡ ವೈರಲ್ ಆಗಿದೆ. ಚಂದ್ರಯಾನ-3 ಸೇಫ್ ಲ್ಯಾಂಡ್ ಆಗುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಅಶೋಕ್ ಚಂದನಾ, ನಾವು ಚಂದ್ರಯಾನ-3 ಅಲ್ಲಿ ಪ್ರಯಾಣಿಸಿರುವ ಎಲ್ಲಾ ಪ್ಯಾಸೇಂಜರ್‌ಗಳಿಗೆ ಸೆಲ್ಯೂಟ್ ಮಾಡುತ್ತೇವೆ ಎಂದಿದ್ದರು. ಚಂದ್ರಯಾನ-3ರಲ್ಲಿ ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಅನ್ನು ಮಾತ್ರ ಕಳುಹಿಸಲಾಗಿತ್ತು. ಚಂದ್ರಯಾನ-3ರ ಮಿಷನ್‌ನಲ್ಲಿ ಯಾವುದೇ ಪ್ಯಾಸೇಂಜರ್‌ಗಳು ಇಲ್ಲ ಅನ್ನೋದೇ ಈ ಸಚಿವರಿಗೆ ಗೊತ್ತಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ