newsfirstkannada.com

World Cup: ಇಸ್ರೇಲ್ ರಾಯಭಾರಿ ಕಚೇರಿಯಿಂದ ನೀವು ಭಾರತ ತಂಡದ 15 ವಿಶೇಷ ಜೆರ್ಸಿ ಗೆಲ್ಲಬಹುದು.. ಹೇಗೆ?

Share :

18-11-2023

    ನಾಳೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್ ಫೈನಲ್

    ವಿಶೇಷ 15 ಜೆರ್ಸಿ ಕೊಡುವುದಾಗಿ ಘೋಷಿಸಿದ ರಾಯಭಾರಿ

    ವಿಶ್ವಕಪ್ ಗೆಲ್ಲುವ ಫೆವರೀಟ್ ಟೀಮ್ ಎಂದರೆ ಭಾರತ

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ವಿಶ್ವಕಪ್ ಫೈನಲ್ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಎಲ್ಲ ತಂಡಗಳನ್ನು ಹಿಂದಿಕ್ಕಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಫೈನಲ್​​ಗೆ ತಲುಪಿದ್ದು ನಾಳೆ ಮಧ್ಯಾಹ್ನ ವರ್ಲ್ಡ್​​​ಕಪ್​ಗಾಗಿ ಬಿಗ್ ಪೈಪೋಟಿ ನಡೆಸಲಿವೆ.  ಭಾರತದಲ್ಲಿನ ಇಸ್ರೇಲ್ ರಾಯಭಾರಿ ನೌರ್ ಗಿಲೋನ್ ಟೀಮ್​ ಇಂಡಿಯಾಗೆ ಸಪೋರ್ಟ್ ಮಾಡಿ ವಿಡಿಯೋವೊಂದು ರಿಲೀಸ್ ಮಾಡಿದ್ದಾರೆ.

ಟೀಂ ಇಂಡಿಯಾಗೆ ರಾಯಭಾರಿ ನೌರ್ ಗಿಲೋನ್ ಬೆಂಬಲ ವ್ಯಕ್ತಪಡಿಸಿ, ಕ್ರಿಕೆಟ್ ಅಭಿಮಾನಿಗಳಿಗೆ ವಿಶಿಷ್ಟ ಬಹುಮಾನ ನೀಡುವುದಾಗಿ ಹೇಳಿದ್ದಾರೆ. ಪಂದ್ಯ ವೀಕ್ಷಣೆಗೆ ಆಗಮಿಸುವ ಅಭಿಮಾನಿಗಳು ತುಂಬಾ ಒಳ್ಳೆಯ ಡಿಸೈನ್​ ಇರುವ ಜೆರ್ಸಿಯನ್ನು ಹಾಕಿಕೊಂಡು ಬರಬೇಕು. ಇದನ್ನು ರಾಯಭಾರಿ ಕಚೇರಿಯೊಂದಿಗೆ ಹಂಚಿಕೊಂಡಿರಬೇಕು. ಅಂತವರಿಗೆ ಟೀಮ್​ ಇಂಡಿಯಾದ 15 ಪ್ಲೇಯರ್ಸ್​ ಧರಿಸಿದಂತಹ ವಿಶೇಷ ಜೆರ್ಸಿಗಳನ್ನು ನೀಡಲಾಗುವುದು. ಇವು ಇಸ್ರೇಲ್-ಭಾರತದ ನಡುವಿನ ಸಂಬಂಧವನ್ನು ಪ್ರದರ್ಶಿಸುವ ಜೆರ್ಸಿಗಳು ಆಗಿರುತ್ತವೆ ಎಂದಿದ್ದಾರೆ.

X ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ನೌರ್​​ ಗಿಲೋನ್​​, ‘ವಿಶ್ವಕಪ್ ಫೈನಲ್​ ಬಗ್ಗೆ ರಾಯಭಾರ ಕಚೇರಿಯಲ್ಲಿ ತುಂಬಾ ಉತ್ಸುಕವಾಗಿದೆ. ಅತ್ಯಂತ ಸೃಜನಶೀಲವಾಗಿ ಜೆರ್ಸಿಯನ್ನು ವಿನ್ಯಾಸಗೊಳಿಸಿದವರಿಗೆ 15 ಜೆರ್ಸಿಗಳನ್ನು ಕಳುಹಿಸುತ್ತೇವೆ. ಕಲಾತ್ಮಕ ಕ್ರಿಕೆಟ್ ಹಬ್ಬ ಪ್ರಾರಂಭವಾಗಲಿ. ಚಕ್ ದೇ ಇಂಡಿಯಾ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

World Cup: ಇಸ್ರೇಲ್ ರಾಯಭಾರಿ ಕಚೇರಿಯಿಂದ ನೀವು ಭಾರತ ತಂಡದ 15 ವಿಶೇಷ ಜೆರ್ಸಿ ಗೆಲ್ಲಬಹುದು.. ಹೇಗೆ?

https://newsfirstlive.com/wp-content/uploads/2023/11/ROHITH.jpg

Load More