ಆಟಗಾರರ 'ರಿವರ್ಸ್ ಗೇರ್' ಆಟ, ದಂಗಾದ ಬಿಸಿಸಿಐ.!
IPL ಮಾರ್ಕೆಟ್ ಬೀಳುವ ಭಯದಲ್ಲಿ ಬಿಸಿಸಿಐ, ಯಾಕೆ?
ರಾಯಡು ರಿಟೈರ್ಮೆಂಟ್ನಿಂದ ಬಿಸಿಸಿಐಗೆ ಫುಲ್ ಶಾಕ್
ಮಹತ್ವದ ಬೆಳವಣಿಗೆಯೊಂದರಲ್ಲಿ ಖಡಕ್ ನಿರ್ಧಾರ ಕೈಗೊಳ್ಳೋಕೆ ಬಿಸಿಸಿಐ ಮುಂದಾಗಿದೆ. ಈ ನಿರ್ಧಾರ ಕೈಗೊಳ್ಳದಿದ್ರೆ ಐಪಿಎಲ್ನ ಮಾರ್ಕೆಟ್ ಬಿದ್ದೋಗುತ್ತೆ ಅನ್ನೋ ಆತಂಕ ಬಾಸ್ಗಳನ್ನ ಕಾಡ್ತಿದೆ. ಬಿಸಿಸಿಐ ಏನಾದ್ರೂ ಕಠಿಣ ನಿರ್ಧಾರ ತೆಗೆದುಕೊಂಡ್ರೆ, ಆಟಗಾರರ ಹೊಟ್ಟೆ ಮೇಲೆ ಹೊಡೆದಂತಾಗುತ್ತೆ. ಅಷ್ಟಕ್ಕೂ BCCI ಅಧಿಕಾರಿಗಳು ಕೈಗೊಳ್ಳೋಕೆ ಹೊರಟಿರೋ ನಿರ್ಧಾರ ಯಾವುದು.? ಯಾಕಾಗಿ.?
ಬಿಸಿಸಿಐ ವಿಶ್ವ ಶ್ರೀಮಂತ ಕ್ರಿಕೆಟ್ ಬೋರ್ಡ್. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಕೂಡ ಬಿಸಿಸಿಐನ ಹಾಕಿದ ಗೆರೆಯನ್ನ ದಾಟಲ್ಲ ಅನ್ನೋದು ಎಲ್ಲರಿಗೂ ತಿಳಿದಿರೋ ಓಪನ್ ಸೀಕ್ರೆಟ್. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ವಿಶ್ವ ಕ್ರಿಕೆಟ್‌ನ ಪವರ್ ಹೌಸ್ ಅಂದ್ರೂ ತಪ್ಪಾಗಲ್ಲ. ಇದಕ್ಕೆಲ್ಲಾ ಕಾರಣ ಒನ್ಸ್ ಅಗೇನ್ ಶ್ರೀಮಂತ ಕ್ರಿಕೆಟ್ ಸಂಸ್ಥೆ ಅನ್ನೋ ಟ್ಯಾಗ್ಲೈನ್.
ಪವರ್ ಹೌಸ್ ಬಿಸಿಸಿಐಗೆ ಶುರುವಾಯ್ತು ಆತಂಕ.!
ಐಸಿಸಿಯ ಬಹುದೊಡ್ಡ ಪಾಲುದಾರ ಆಗಿರುವ ಬಿಸಿಸಿಐಗೆ ಈಗ ಹೊಸದೊಂದು ಟೆನ್ಶನ್ ಶುರುವಾಗಿದೆ. ಎಷ್ಟರ ಮಟ್ಟಿಗೆ ಅಂದ್ರೆ, ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು ಅನ್ನೋ ಬಿಸಿಸಿಐ ಬಂದು ಬಿಟ್ಟಿದೆ. ಪರೋಕ್ಷವಾಗಿ ವಿಶ್ವ ಕ್ರಿಕೆಟ್ನ್ನ ಆಳ್ತಿದ್ದ ಬಿಸಿಸಿಐ ಅಧಿಕಾರಿಗಳು ಇಷ್ಟು ಚಿಂತೆಗೆ ದೂಡಿರೋದು ಬೇರಾರೂ ಅಲ್ಲ, ನಮ್ಮ ಆಟಗಾರರೇ.
ಭಾರತೀಯ ಕ್ರಿಕೆಟ್ಗೆ ಗುಡ್ ಬೈ, ಫಾರಿನ್ ಲೀಗ್ಗೆ ಜೈ.!
ಭಾರತೀಯ ಕ್ರಿಕೆಟಿಗರು ಈಗ ವಿದೇಶಿ ಲೀಗ್ಗಳಲ್ಲಿ ಆಡಬೇಕು ಅಂದ್ರೆ, ನಿವೃತ್ತಿ ಘೋಷಿಸೋದು ಕಡ್ಡಾಯಮಾಡಲಾಗಿದೆ. ಇಲ್ಲದಿದ್ರೆ, NOC ಸಿಗಲ್ಲ. ಹೀಗಾಗಿ ಕಡಿಮೆ ಅವಕಾಶಗಳನ್ನ ಪಡೆದುಕೊಳ್ತಿರೋ ಆಟಗಾರರ ಎಲ್ಲ ಮಾದರಿಯ ಕ್ರಿಕೆಟ್ಗೆ ಗುಡ್ ಬೈ ಹೇಳಿ ಫಾರಿನ್ ಲೀಗ್ಗಳಲ್ಲಿ ಆಡಲು ಮುಂದಾಗ್ತಿದ್ದಾರೆ. ಇದಕ್ಕೆ ಲೇಟೆಸ್ಟ್ ಎಕ್ಸಾಂಪಲ್ ಅಂಬಟಿ ರಾಯುಡು. ಈ ಬಾರಿ ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ರಿಟೈರ್ಮೆಂಟ್ ಘೋಷಿಸಿದ ರಾಯಡು ಫೈನಲ್ ಮುಗಿದ ಮರುದಿನವೇ ಫಾರಿನ್ ಲೀಗ್ನಲ್ಲಿ ಆಡೋದನ್ನ ಘೋಷಿಸಿದ್ರು. ಇದೇ ನೋಡಿ ಬಿಸಿಸಿಐ ದಂಗು ಬಡಿಸಿರೋ ವಿಚಾರ.
ಕಠಿಣ ನಿಯಮ ಜಾರಿಗೆ ತರಲು ಬಿಸಿಸಿಐ ಸಿದ್ದ.!
ಬಿಸಿಸಿಐನ ಆತಂಕ ಹೆಚ್ಚಿಸಿರೋದ್ರ ಹಿಂದಿನ ಕಾರಣ ಐಪಿಎಲ್. ಮುಂದೆ ಭಾರತದ ಪ್ರಮುಖ ಆಟಗಾರರು ಕೂಡ ಇದೇ ರೀತಿಯ ನಿರ್ಧಾರ ಕೈಗೊಂಡು ವಿದೇಶಿ ಲೀಗ್ಗಳತ್ತ ಮುಖ ಮಾಡಿದ್ರೆ, ಐಪಿಎಲ್ ಮಾರ್ಕೆಟ್ ಬೀಳಲಿದೆ. ಹೀಗಾಗಿ ಬಾಸ್ಗಳು ಕಠಿಣ ನಿಯಮ ಜಾರಿಗೆ ಮುಂದಾಗಿದ್ದಾರೆ.
ವಿದೇಶಿ ಲೀಗ್ಗಳಲ್ಲೂ IPL ಫ್ರಾಂಚೈಸಿಗಳ ಕಾರು ಬಾರು.!
ಬಹುತೇಕ ವಿದೇಶಿ ಲೀಗ್ಗಳಲ್ಲಿ ಐಪಿಎಲ್ ಫ್ರಾಂಚೈಸಿ ಮಾಲೀಕರು ತಂಡವನ್ನ ಹೊಂದಿದ್ದಾರೆ. ಮೇಜರ್ ಲೀಗ್ ಕ್ರಿಕೆಟ್, ಸೌತ್ ಆಫ್ರಿಕಾ ಟಿ20, ಕೆರಬಿಯನ್ ಪ್ರೀಮಿಯರ್ ಲೀಗ್ ಹಾಗೂ ಇಂಟರ್ ನ್ಯಾಷನಲ್ ಟಿ20ಗಳಲ್ಲಿ ಐಪಿಎಲ್ ಫ್ರಾಂಚೈಸಿಗಳು ಒಡೆತನದ ತಂಡಗಳಿವೆ. ಆ ಟೂರ್ನಿಗಳಲ್ಲೂ ದೊಡ್ಡ ಮಟ್ಟದ ಲಾಭ ನಿರೀಕ್ಷೆ ಮಾಡ್ತಿರೋ ಫ್ರಾಂಚೈಸಿಗಳು, ಐಪಿಎಲ್ನಲ್ಲಿ ತಮ್ಮ ತಂಡದ ಸ್ಟಾರ್ಗಳಾಗಿದ್ದ ಆಟಗಾರರನ್ನ ಆ ಟೂರ್ನಿಗಳಲ್ಲೂ ಬಳಸಿಕೊಳ್ಳೋ ಪ್ಲಾನ್ ರೂಪಿಸಿದೆ.
ಈ ಸೀಸನ್ನ ಐಪಿಎಲ್ ಅಂತ್ಯದ ಬಳಿಕ ನಿವೃತ್ತಿ ಘೋಷಿಸಿದ ಅಂಬಟಿ ರಾಯುಡು, ಮೇಜರ್ ಲೀಗ್ ಕ್ರಿಕೆಟ್ನಲ್ಲಿ ಸಿಎಸ್ಕೆ ಫ್ರಾಂಚೈಸಿ ಒಡೆತನದ ಟೆಕ್ಸಾಸ್ ಸೂಪರ್ ಕಿಂಗ್ಸ್ ಸೇರಿದ್ದಾರೆ. ರಾಬಿನ್ ಉತ್ತಪ್ಪ ಹಾಗೂ ಯೂಸೂಫ್ ಪಠಾಣ್ ಐಎಲ್ಟಿ20 ಲೀಗ್ನಲ್ಲಿ ಕಳೆದ ವರ್ಷ ಆಡಿದ್ರು. ಇದು ಹೀಗೆ ಮುಂದುವರೆದ್ರೆ, ಉಳಿದ ಆಟಗಾರರು ಇದೇ ಹಾದಿ ತುಳಿದ್ರೆ, ಬಿಸಿಸಿಐ ಆದಾಯಕ್ಕೆ ಕೊಕ್ಕೆ ಬೀಳಲಿದೆ.
ಗುಡ್ ಬೈ ಹೇಳಿದ್ರೂ 1 ವರ್ಷ ಆಡಂಗಿಲ್ಲ..?
ಆಟಗಾರರು ವಿದೇಶಿ ಲೀಗ್ಗಳತ್ತ ಮುಖ ಮಾಡ್ತಿರೋದನ್ನ ಗಮನಿಸಿರೋ ಬಾಸ್ಗಳು ಇದೀಗ, ಕಠಿಣ ನಿಯಮವನ್ನ ರೂಪಿಸಿದ್ದಾರೆ. ಭಾರತೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ರೂ 1 ವರ್ಷಗಳ ಕಾಲ ಯಾವುದೇ ಲೀಗ್ ಆಡುವಂತಿಲ್ಲ ಅನ್ನೋ ನಿಯಮ ಜಾರಿಗೆ ತರಲು ಮುಂದಾಗಿದ್ದಾರೆ. ಜುಲೈ 7ರಂದು ನಡೆಯೋ ಅಪೆಕ್ಸ್ ಕೌನ್ಸಿಲ್ ಮೀಟಿಂಗ್ನ ಪ್ರಮುಖ ಅಜೆಂಡಾ ಇದೇ ಆಗಿದ್ದು, ಸಭೆಯ ಒಪ್ಪಿಗೆ ಪಡೆದು ಜಾರಿಗೆ ತರೋ ಸಾಧ್ಯತೆ ದಟ್ಟವಾಗಿದೆ.
ಆಟಗಾರರು ಆದಾಯದ ಕಥೆ ಏನು.?
ಇಲ್ಲಿ ಅವಕಾಶ ಸಿಗ್ತಿಲ್ಲ.. ಬೇರೆಡೆ ಆಡಿ ಬದುಕೋಕು ಬಿಡ್ತಾ ಇಲ್ಲ.. ಅನ್ನೋದು ಆಟಗಾರರ ಅಳಲು ಆಗಿದೆ. ಸದ್ಯ ಭಾರತೀಯ ಕ್ರಿಕೆಟ್ನಲ್ಲಿ ಇರೋ ಪೈಪೋಟಿ ಹಲವು ಆಟಗಾರರು ಕಳೆದು ಹೋಗಿದ್ದಾರೆ. ಅವರಲ್ಲಿ ಕ್ರಿಕೆಟ್ ಆಡೋ ಕನಸು ಜೀವಂತವಾಗಿದ್ರೂ, ಅವಕಾಶ ಸಿಗ್ತಿಲ್ಲ. ಅಂತವರಿಗೆಲ್ಲ ಫಾರಿನ್ ಲೀಗ್ಗಳು ವರದಾನವಾಗಿದ್ವು. ಆದ್ರೆ, ಬಿಸಿಸಿಐ ತರಲು ಹೊರಟಿರೋ ಹೊಸ ನಿಯಮ ಆಟಗಾರರ ಹೊಟ್ಟೆ ಮೇಲೆ ಹೊಡೆತಂದಾಗುತ್ತೆ ಅನ್ನೋ ಮಾತುಗಳು ಸದ್ಯ ಕೇಳಿ ಬರ್ತಿವೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ