newsfirstkannada.com

ವಿಶ್ವಕಪ್​ ಪಂದ್ಯಗಳಲ್ಲಿ ಭಾರತ ಈ ಸಾಧನೆ ಮಾಡಲು ಕನ್ನಡಿಗನೂ ಕಾರಣ.. ಇವರ ಬಗ್ಗೆ ಕೊಹ್ಲಿ ಹೇಳಿದ್ದೇನು?

Share :

25-10-2023

  ಈಸಿಯಾಗಿ ಕಿವೀಸ್​ ಫಾಸ್ಟ್ ಬೌಲರ್ಸ್​ನ ಎದುರಿಸಿದ್ದು ಹೇಗೆ..?

  ವಿದೇಶಿ ಸರಣಿಗಳನ್ನು ಗೆಲ್ಲುವುದರಲ್ಲಿ ಕನ್ನಡಿಗ ಪಾತ್ರ ಅಪಾರ

  ಸೌತ್​ ಆಫ್ರಿಕಾದ ರಬಾಡರನ್ನ ಮೀರಿಸುತ್ತೆ ಕನ್ನಡಿಗನ ಬೌಲಿಂಗ್!

ನ್ಯೂಜಿಲೆಂಡ್ ಎದುರು ಟೀಮ್ ಇಂಡಿಯಾ ಗೆಲುವು ಸಾಧಿಸಿರುವದು ಖುಷಿ ಕೊಟ್ಟಿದೆ. ಕಿವೀಸ್ ವೇಗದ ದಾಳಿಯನ್ನ ಭಾರತೀಯರು ಸಮರ್ಥವಾಗಿ ಎದುರಿಸಿದ್ದಾರೆ. ಹಾಗಾದ್ರೆ, ಟೀಮ್ ಇಂಡಿಯಾ ಪ್ಲೇಯರ್ಸ್ ಅಷ್ಟು ಈಸಿಯಾಗಿ ಕಿವೀಸ್​ ಫಾಸ್ಟ್ ಬೌಲರ್ಸ್​ನ ಎದುರಿಸಿದ್ದು ಹೇಗೆ?

ನ್ಯೂಜಿಲೆಂಡ್ ಎದುರಿನ ಹೈವೋಲ್ಟೇಜ್​ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಗೆದ್ದಾಗಿದೆ. ಕಿವೀಸ್ ಮಿಸೆಲ್​​ಗಳ ದಾಳಿಯನ್ನ ಸಮರ್ಥವಾಗಿ ಪುಟಿಗಟ್ಟಿ ವಿಜಯ ಪತಾಕೆಯನ್ನೂ ಹಾರಿಸಿದ್ದಾಗಿದೆ. 20 ವರ್ಷಗಳ ಕೊರಗಿಗೆ ಬ್ರೇಕ್​ ಹಾಕಿದೆ. ಈ ಗೆಲುವಿನೊಂದಿಗೆ ಟೀಮ್​ ಇಂಡಿಯಾ ಸೆಮೀಸ್​​ನತ್ತ ಹೆಜ್ಜೆ ಇಟ್ಟಿದೆ. ಅಷ್ಟಕ್ಕೂ, ನ್ಯೂಜಿಲೆಂಡ್​ ದೈತ್ಯ ವೇಗಿಗಳನ್ನು ಸುಲಲಿತವಾಗಿ ಟೀಮ್ ಇಂಡಿಯಾ ಎದುರಿಸಿದ್ದು ಹೇಗೆ.? ಈ ಪ್ರಶ್ನೆ ಸದ್ಯ ಎಲ್ಲರನ್ನೂ ಕಾಡ್ತಿದೆ.

ರಘು ಬಗ್ಗೆ ಹೇಳುತ್ತಿರುವ ವಿರಾಟ್

ಟೀಮ್ ಇಂಡಿಯಾ ಸಕ್ಸಸ್ ಹಿಂದೆ ವೀರ ಕನ್ನಡಿಗ.!

ಈ ರಘುನೇ ಟೀಮ್ ಇಂಡಿಯಾ ಸಕ್ಸಸ್​ ಹಿಂದಿನ ಸೀಕ್ರೆಟ್. ನೆಟ್ಸ್​ನಲ್ಲಿ ಟೀಮ್ ಇಂಡಿಯಾದ ಎಲ್ಲ ಆಟಗಾರರಿಗಿಂತ ಹೆಚ್ಚು ಕಠಿಣ ಪರಿಶ್ರಮ ಪಡೋ ಶ್ರಮಜೀವಿ ಈತ. ಘಾತಕ ವೇಗಕ್ಕೆ ಇಂದು ಟೀಮ್ ಇಂಡಿಯಾ ಎದೆಯೊಡ್ಡಿ ನಿಲ್ತಿದೆ ಅಂದ್ರೆ, ಅದಕ್ಕೆ ಕಾರಣ ಕನ್ನಡಿಗ ರಘು. ನೆಟ್ಸ್​​ನಲ್ಲಿ ಬ್ಯಾಟ್ಸ್​ಮನ್​​​ಗಳ ಅಗತ್ಯಕ್ಕೆ ತಕ್ಕಂತೆ ಥ್ರೋಡೌನ್ ಮಾಡೋ ರಘು ಸುರಿಸುವ ಬೆವರು ಇಂದು ಸಕ್ಸಸ್​​ನ ಗಿಫ್ಟ್​ ನೀಡಿದೆ.

ಕಿಂಗ್​​ ಕೊಹ್ಲಿಯ ಯಶಸ್ಸಿನ ಹಿಂದಿನ ಶಕ್ತಿ ರಘು..!

ಟೀಮ್ ಇಂಡಿಯಾದ ಅಸಲಿ ಶಕ್ತಿಯೇ ಥ್ರೋಡೌನ್ ಸ್ಪೆಷಲಿಸ್ಟ್​ ರಾಘವೇಂದ್ರ. ಉತ್ತರ ಕನ್ನಡ ಜಿಲ್ಲೆಯ ಕುಮಟಾದ ರಾಘವೇಂದ್ರ, ಕ್ರಿಕೆಟ್ ಸರ್ಕಲ್​​ನಲ್ಲಿ ರಘು ಅಂತಾನೇ ಫೇಮಸ್. ಟೀಮ್ ಇಂಡಿಯಾದ ಥ್ರೋಡೌನ್ ಸ್ಪೆಷಲಿಸ್ಟ್ ಆಗಿರುವ ರಘು, ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಬ್ಯಾಟ್ಸ್​​ಮನ್​ಗಗಳ ಸಕ್ಸಸ್ ಹಿಂದಿನ ಶಕ್ತಿ. ಸೈಡ್ ಆರ್ಮ್ ಸಾಧನದ ಮೂಲಕ ಗಂಟೆಗೆ 150 ಕಿಲೋ ಮೀಟರ್​ಗೂ ಅಧಿಕ ವೇಗದಲ್ಲಿ ಬೌಲಿಂಗ್ ಮಾಡುವ ರಘು, ನಮ್ಮ ಬ್ಯಾಟ್ಸ್​​ಮನ್​ಗಳು ವೇಗದ ಬೌಲರ್​​ಗಳನ್ನು ಸಮರ್ಥವಾಗಿ ಎದುರಿಸಲು ನೆರವಾಗುತ್ತಿದ್ದಾರೆ. ಇದನ್ನ ಸ್ವತಃ ವಿರಾಟ್​ ಕೊಹ್ಲಿ ಹೇಳಿಕೊಂಡಿದ್ದಾರೆ.

ನಾನು ಈ ಹಿಂದೆ ರಘು ಬಗ್ಗೆ ಸಾಕಷ್ಟು ಬಾರಿ ಹೇಳಿದ್ದೇನೆ. ಇವರೇ ನಮ್ಮ ಯಶಸ್ಸಿನ ಹಿಂದಿನ ನಿಜವಾದ ಶಕ್ತಿಗಳು. ಇವರು ನೆಟ್ಸ್​​ನಲ್ಲಿ ಪ್ರತೀ ದಿನ 145 kmph, 150 kmph ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ನಮಗೆ ಸವಾಲೊಡ್ಡುತ್ತಾರೆ. ಇವರ ಕಾರಣದಿಂದ ಪ್ರಾಕ್ಟೀಸ್ ಸೆಷನ್ ಅತ್ಯಂತ ತೀವ್ರತೆಯಿಂದ ಕೂಡಿರುತ್ತದೆ. ನಮ್ಮನ್ನು ಪಂದ್ಯಕ್ಕೆ ಸಿದ್ಧಗೊಳಿಸುತ್ತಾರೆ. ನನ್ನ ಯಶಸ್ಸಿನಲ್ಲಿ ಇವರು ದೊಡ್ಡ ಪಾತ್ರ ನಿಭಾಯಿಸಿದ್ದಾರೆ. ಹೀಗಾಗಿ ಜನರಿಗೆ ಇವರ ಮುಖಗಳ ಪರಿಚಯವಿರಬೇಕು.

ವಿರಾಟ್​ ಕೊಹ್ಲಿ, ಭಾರತದ ಆಟಗಾರ

ಆಟಗಾರರ ಸಹಾಯಕ್ಕೆ ಸದಾ ಸಿದ್ಧ ನಮ್ಮ ರಘು..!

ನೆಟ್ಸ್​ನಲ್ಲಿ ಮಿಚೆಲ್ ಸ್ಟಾರ್ಕ್, ಕಗಿಸೊ ರಬಾಡಗಿಂತ ಶರವೇಗವಾಗಿ ಬೌಲಿಂಗ್ ಮಾಡುವ ರಘು, ಟೀಮ್ ಇಂಡಿಯಾವನ್ನು ಸೇರಿಕೊಂಡದ್ದು 2011ರಲ್ಲಿ. ಅಂದಿನಿಂದ ಇಂದಿನವರೆಗೂ ತಂಡದ ಯಶಸ್ಸಿನಲ್ಲಿ ರಘು ನಿರ್ಣಾಯಕ ಪಾತ್ರವಹಿಸುತ್ತಿದ್ದಾರೆ. ಇಂಗ್ಲೆಂಡ್, ದಕ್ಷಿಣ ಆಫ್ರಿಕಾಗಳಲ್ಲಿ ಟೆಸ್ಟ್ ಗೆಲುವು, ಏಕದಿನ ಸರಣಿ ಜಯಭೇರಿ, ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲುವಲ್ಲಿ ರಘು ಕೊಡುಗೆಯನ್ನು ಮರೆಯುವಂತಿಲ್ಲ. ಅಷ್ಟೇ ಅಲ್ಲದೆ, 2015ರ ವಿಶ್ವಕಪ್​​ನಲ್ಲೂ ತಂಡದಲ್ಲಿದ್ದ ರಘು ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸುವಲ್ಲಿ ನೆರವಾಗಿದ್ದರು.

ವಿರಾಟ್ ಕೊಹ್ಲಿ ಮತ್ತು ಗಿಲ್

ಆಟಗಾರರು ಮಧ್ಯರಾತ್ರಿ ಅಭ್ಯಾಸಕ್ಕೆ ಕರೆದರೂ ಮೈದಾನದಲ್ಲಿ ಹಾಜರಿರುವ ರಘು, ಈಗ ಟೀಮ್ ಇಂಡಿಯಾದ ಅವಿಭಾಜ್ಯ ಅಂಗವಾಗಿ ಬಿಟ್ಟಿದ್ದಾರೆ. ಸಚಿನ್​, ದ್ರಾವಿಡ್​, ಗಂಗೂಲಿ ಇದ್ದ ಕಾಲದಲ್ಲಿ ಟೀಮ್​ ಇಂಡಿಯಾ ಡ್ರೆಸ್ಸಿಂಗ್​ ರೂಮ್​ ಎಂಟ್ರಿ ಕೊಟ್ಟ ರಘು, ಈಗಲೂ ತಂಡದೊಂದಿಗೆ ಇದ್ದಾರೆ. ಕ್ಯಾಪ್ಟನ್​, ಕೋಚ್​, ಪ್ಲೇಯರ್ಸ್​ ಎಲ್ಲ ಬದಲಾಗಿದ್ದಾರೆ. ಆದ್ರೆ, ರಘು ತಂಡದಲ್ಲೇ ಉಳಿದಿದ್ದಾರೆ.

ಫಾಸ್ಟ್​ ಬೌಲರ್ಸ್​ ಎದುರಿಸಲು ಟೀಮ್​ ಇಂಡಿಯಾ ಆಟಗಾರರು ಹಿಂಜರಿಯುತ್ತಾರೆ ಅನ್ನೋ ಮಾತಿದ್ದ ಕಾಲವೊಂದಿತ್ತು. ಈಗ ಕಾಲವೂ ಬದಲಾಗಿದೆ. ಆ ಮಾತೂ ಬದಲಾಗಿದೆ. ಇದಕ್ಕೆಲ್ಲ ಕಾರಣ ರಘು. ನಿಜಕ್ಕೂ ಕನ್ನಡಿಗರೆಲ್ಲ ಹೆಮ್ಮ ಪಡಬೇಕಾದ ವಿಚಾರ ಇದು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಶ್ವಕಪ್​ ಪಂದ್ಯಗಳಲ್ಲಿ ಭಾರತ ಈ ಸಾಧನೆ ಮಾಡಲು ಕನ್ನಡಿಗನೂ ಕಾರಣ.. ಇವರ ಬಗ್ಗೆ ಕೊಹ್ಲಿ ಹೇಳಿದ್ದೇನು?

https://newsfirstlive.com/wp-content/uploads/2023/10/VIRAT_RAGHU.jpg

Load More