ವೈಷ್ಣವಿ ಗೌಡ ‘ಸೀತಾರಾಮ’ ಸೀರಿಯಲ್ ನಂತರ ಯಾವ್ದೇ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಿಲ್ಲ. ಪ್ರಸ್ತುತ ಮ್ಯಾರೀಡ್ ಲೈಫ್ನಲ್ಲಿ ಎಂಜಾಯ್ ಮಾಡ್ತಿದ್ದಾರೆ.
ವೈಷ್ಣವಿ ಗೌಡ ಅವರು ತಮ್ಮ ಮೊದಲ ಕರ್ವಾ ಚೌತ್ ಆಚರಿಸಿದ್ದಾರೆ.
ವೈಷ್ಣವಿ, ಹನಿ ನೀರು ಕುಡಿಯದೆ ಇಡೀ ದಿನ ಉಪವಾಸ ಮಾಡಿ, ಸಂಜೆ 6 ಗಂಟೆ ಸುಮಾರಿಗೆ ವ್ರತ ಮಾಡಿದ ಎಲ್ಲಾ ಹೆಣ್ಮಕ್ಕಳು ಸೇರಿ ಶ್ರದ್ಧೆಯಿಂದ ಪೂಜೆ ಮಾಡಿದ್ದಾರೆ.
ಚಂದ್ರನ ದರ್ಶನದವರೆಗೂ ಕಾದು, ಚಂದ್ರನಿಗೆ ಪೂಜೆ ಸಲ್ಲಿಸಿದ ನಂತರ ಜಾಳಿಗೆ ಮೂಲಕ ಪತಿಯ ಮೊಗವನ್ನ ನೋಡಿದ್ದಾರೆ.
ಪತಿ ಅನುಕೂಲ್ ಮಿಶ್ರಾ ನೀರು ಕುಡಿಸಿ, ಸಿಹಿ ತಿನ್ನಿಸಿದ್ದಾರೆ.
ಕೆಂಪು ಬಣ್ಣದ ಸೀರೆಯಲ್ಲಿ ಮುದ್ದಾಗಿ ಕಾಣ್ತಿದ್ದ ನಟಿ, ನನ್ನ ಮೊದಲ ಕರ್ವಾ ಚೌತ್, ಪ್ರೀತಿ, ನಂಬಿಕೆಯನ್ನು ಆಚರಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.