Wow! ಬಿಗ್​ಬಾಸ್ ಬೆಡಗಿ.. ರಿಷಾ ಗೌಡ ತುಂಬಾನೇ ಸುಂದರಿ..!

ಬಿಗ್​ಬಾಸ್​ ಮನೆಯಲ್ಲಿ ರಿಷಾ ಗೌಡ ಸಖತ್ ಹವಾ ಕ್ರಿಯೇಟ್ ಮಾಡಿದ್ದಾರೆ. ಹಾಗಿದ್ದರೆ ಯಾರು ಈ ರಿಷಾ ಗೌಡ? ಅವರ ಹಿನ್ನೆಲೆ ಏನು? ಅನ್ನೋ ಮಾಹಿತಿ ಇಲ್ಲಿದೆ..

ಸಿನಿಮಾಗಳಲ್ಲಿ ಆ್ಯಕ್ಟಿಂಗ್

ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ರಿಷಾ ಗೌಡ ಬಿಗ್​ಬಾಸ್​ ಮನೆಗೆ ಎಂಟ್ರಿ ನೀಡಿದ್ದಾರೆ. ರಿಷಾ ಗೌಡ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟಿ.

ಕ್ರೀಡಾಪಟು ಆಗುವ ಆಸೆ

ರಿಷಾ ಗೌಡ ಕ್ರೀಡಾಪಟು ಆಗಬೇಕೆಂಬ ಕನಸು ಹೊತ್ತಿದ್ದವರು. ಅವರು ಸ್ಪಿರಂಟರ್ ಆಗಿದ್ದರು. ವೇಗದ ಓಟಗಾರ್ತಿ. ದೊಡ್ಡ ಕ್ರೀಡಾಪಟು ಆಗಬೇಕೆಂಬ ಕನಸು ಕಂಡಿದ್ದರು.

ಸ್ಪೋರ್ಟ್ಸ್​​ಗೆ ಬೈಬೈ

ರಿಷಾ ಗೌಡಗೆ ಇಂಜುರಿ ಒಂದು ಆಯ್ತಂತೆ. ಲಿಗಮೆಂಟ್ ಫ್ರ್ಯಾಕ್ಚರ್ ಆಗಿದ್ದಕ್ಕೆ ಅವರು ಕ್ರೀಡೆ ಬಿಡಬೇಕಾಯ್ತಂತೆ. ಪಿಯುಸಿಯಲ್ಲಿ ಒಳ್ಳೆಯ ಅಂಕಗಳು ಬಂದಿದ್ದರಿಂದ ಕ್ರೀಡೆ ಬಿಟ್ಟರಂತೆ

ನಟಿಸಿದ ಚಿತ್ರಗಳು

2 ವರ್ಷದ ಹಿಂದೆ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ‘ಆಸ್ಟಿನ್​​ ನ ಮಹಾನ್ ಮೌನ’, ‘ಬೆಂಗಳೂರು ಇನ್’, ‘ಜೂನಿಯರ್’, ‘ಗ್ಯಾಂಗ್​​ಸ್ಟರ್ ಆಫ್ ರಾಜಧಾನಿ’ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಭಯಂಕರ ಕೋಪ

ರಿಷಾ ಗೌಡಗೆ ಹೆಚ್ಚು ಕೋಪ ಬರುತ್ತೆ ಎಂದು ಅವರೇ ಹೇಳಿಕೊಂಡಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ ಗಿಲ್ಲಿ ಹಾಗೂ ಚಂದ್ರಪ್ರಭ ಜೊತೆ ತುಂಬಾನೇ ಆಪ್ತರಾಗಿದ್ದಾರೆ..