ದೀಪಿಕಾ ಪಡುಕೋಣೆ ಮಗಳ ಮುಖ ಮೊದಲ ಬಾರಿಗೆ ಬಹಿರಂಗ; So Cute

ದೀಪಿಕಾ ಪಡುಕೋಣೆ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಇದೀಗ ಅವರು ತಮ್ಮ ಮುದ್ದಿನ ಮಗಳ ಮುಖವನ್ನು ಬಹಿರಂಗಪಡಿಸಿದ್ದಾರೆ. ಪತಿ ರಣವೀರ್ ಸಿಂಗ್ ಮತ್ತು ಮಗಳು ದುವಾ ಜೊತೆಗೆ ಫೋಟೋ ಶೂಟ್ ಮಾಡಿಸಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ದುವಾ ಪಡುಕೋಣೆ ಸಿಂಗ್

ದೀಪಿಕಾ ದಂಪತಿ ಮಂಗಳವಾರ ತಮ್ಮ ಮಗಳು ದುವಾ ಪಡುಕೋಣೆ ಸಿಂಗ್ ಅವರ ಮುಖವನ್ನು ಬಹಿರಂಗಪಡಿಸಿದ್ದಾರೆ.

ಸ್ಮೈಲ್ ಎಂದ ರಣವೀರ್ ಸಿಂಗ್

ದೀಪಿಕಾ ಮತ್ತು ದುವಾ ಇಬ್ಬರೂ ಮೆರೂನ್ ಬಣ್ಣದ ಉಡುಪು ಧರಿಸಿದ್ದರೆ, ರಣವೀರ್ ಸಿಂಗ್ ಬಿಳಿ ಕುರ್ತಾ ಪೈಜಾಮ ಧರಿಸಿ ಫೋಟೋಗೆ ಸ್ಮೈಲ್ ನೀಡಿದ್ದಾರೆ.

ಕಳೆದ ವರ್ಷ ಮಗು ಜನನ

ದೀಪಿಕಾ ಮತ್ತು ರಣವೀರ್​​ ದಂಪತಿಗೆ ಸೆಪ್ಟೆಂಬರ್ 8, 2024 ರಂದು ಮಗು ಜನಿಸಿದೆ. ಈ ಜೋಡಿ 2018 ರಲ್ಲಿ ವಿವಾಹ ಆಗಿದೆ. ದೀಪಾವಳಿಯಲ್ಲಿ ಮಗಳ ಹೆಸರು ದುವಾ ಪಡುಕೋಣೆ ಸಿಂಗ್ ಎಂದು ಜಗತ್ತಿಗೆ ಪರಿಚಯಿಸಿದ್ದಾರೆ.

ದುವಾ ಎಂದರೆ ಏನು..?

ದುವಾ: ಎಂದರೆ ಪ್ರಾರ್ಥನೆ. ಏಕೆಂದರೆ ಅವಳು ನಮ್ಮ ಪ್ರಾರ್ಥನೆಗಳಿಗೆ ಸಿಕ್ಕ ಉತ್ತರ. ನಮ್ಮ ಹೃದಯಗಳು ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿವೆ ಎಂದು ದೀಪಿಕಾ ಬರೆದುಕೊಂಡಿದ್ದಾರೆ.

ಅನನ್ಯಾ ಪಾಂಡೆ ಕಾಮೆಂಟ್

ದೀಪಿಕಾ ಪೋಸ್ಟ್​ಗೆ ‘ಓ ದೇವರೇ 😍😍😍😍😍😍.." ಎಂದು ಅನನ್ಯಾ ಪಾಂಡೆ ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಗಳು ಮುದ್ದಾಗಿದ್ದಾಳೆ ಎಂದು ಕಾಮೆಂಟ್ ಮಾಡ್ತಿದ್ದಾರೆ.

ದೀಪಿಕಾ ಕೊನೆಯ ಬಾರಿಗೆ ಕಲ್ಕಿ 2898 AD ಮತ್ತು ಜವಾನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅಟ್ಲೀ ಮತ್ತು ಅಲ್ಲು ಅರ್ಜುನ್ ಅವರ ಮುಂಬರುವ ಚಿತ್ರದಲ್ಲಿ ನಟಿಸಲಿದ್ದಾರೆ. ಶಾರುಖ್ ಖಾನ್ ಜೊತೆಗೂ ನಟಿಸಲಿದ್ದಾರೆ.