ಪಾರು ಸುಂದರಿ ಮೋಕ್ಷಿ ಸಖತ್ ಕ್ಯೂಟ್.. ‘​ಅರ್ಥ ಆಯ್ತಾ..’ ?

ಪಾರು ಸೀರಿಯಲ್​ನ ಸುಂದರಿ ಸಖತ್ ಫಿಟ್​ ಆಗಿದ್ದಾರೆ. ಬಿಗ್​ ಬಾಸ್ ನಂತರ ಮೋಕ್ಷಿತಾ ಗ್ಲ್ಯಾಮರ್​ ಹೆಚ್ಚಿದ್ದು, ಬರ್ತ್​ ಡೇ ಸಂಭ್ರಮಕ್ಕೆ ಕ್ಯೂಟ್​ ಫೋಟೋಶೂಟ್ ಮಾಡಿಸಿದ್ದಾರೆ.

ಮೋಕ್ಷಿ ಬರ್ತಡೇ

ಮೋಕ್ಷಿತಾ ಪೈ ಇತ್ತಿಚೀಗೆ ಬರ್ತ್​ ಡೇ ಸೆಲಿಬ್ರೇಟ್​ ಮಾಡಿಕೊಂಡಿದ್ದಾರೆ. ಬ್ಯೂಟಿಫುಲ್​ ಫೋಟೋಶೂಟ್ ಮೂಲಕ ಹೊಸ ವಸಂತವನ್ನ ಸಂಭ್ರಮಿಸಿದ್ದಾರೆ.

ಬಿಗ್​ ಬಾಸ್ ಮನೆಯಲ್ಲಿ ಸ್ವಾಭಿಮಾನಿ ಮೋಕ್ಷಿ ಅಂತಲೇ ಫೇಮಸ್​ ಆಗಿದ್ರು. ಇದೇ ಹೆಸರಲ್ಲೇ ಸಾಕಷ್ಟು ಅಭಿಮಾನಿಗಳನ್ನ ಸಂಪಾದಿಸಿದ್ದಾರೆ.

'ಅರ್ಥ ಆಯ್ತಾ’

ಅಭಿಮಾನಿಗಳು ಹಲವು ಸ್ಪೆಷಲ್​ ಗಿಫ್ಟ್​ಗಳನ್ನ ಮೋಕ್ಷಿತಾಗೆ ಕಳುಹಿಸಿದ್ದಾರೆ. ವಿಶೇಷತೆ ಅಂದ್ರೇ ಬಿಗ್​ ಬಾಸ್​ ಮನೆಯಲ್ಲಿ ಹೆಚ್ಚಾಗಿ ಮೋಕ್ಷಿತಾ ಬಳಸುತ್ತಿದ್ದ ಪದ 'ಅರ್ಥ ಆಯ್ತಾ' ಎಂಬುದ್ದನ್ನ ಹೈಲೈಟ್​ ಮಾಡಿದ್ದಾರೆ.

ನನ್ನ ಹುಟ್ಟುಹಬ್ಬವನ್ನ ಕಳೆದ ವರ್ಷ ಬಿಗ್​ ಬಾಸ್​ ಮನೆಯಲ್ಲಿ ಆಚರಿಸಿದ್ದೆ. ಫ್ಯಾಮಿಲಿನ ತುಂಬಾ ಮಿಸ್​ ಮಾಡ್ಕೊಂಡಿದ್ದೆ. ಈ ಬಾರಿ ಆ ಪ್ರೀತಿ, ಅಭಿಮಾನಿ ಡಬಲ್​ ಆಗಿದ್ದು, ತುಂಬಾ ತುಂಬಾ ಖುಷಿಯಾಗಿದೆ. ನಿಮ್ಮ ಪ್ರೀತಿ, ಹಾರೈಕೆ, ಪ್ರೋತ್ಸಾಹಕ್ಕೆ ನಾನು ಚಿರಋಣಿ ಎಂದಿದ್ದಾರೆ

ವಿಶೇಷವಾಗಿ ಶ್ರೀಸತ್ಯನಾರಾಯಣ ಹಾಗೂ ಮಹಾಲಕ್ಷ್ಮೀ ಪೂಜೆ ಮಾಡಿಸಿದ್ದಾರೆ. ಮನೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ನೀತು ವನಜಾಕ್ಷಿ, ಮಾನಸಿ ಜೋಶಿ ಸೇರಿದಂತೆ ಆತ್ಮಿಯರು ಭಾಗಿಯಾಗಿದ್ದರು.