ಚಾರು ಹೊಸ ಪೋಸು.. ಗೊಂಬೆಯಂತೆ ಮುದ್ದು ಮುದ್ದು ಈ ಮೌನ..!

ರಾಮಾಚಾರಿ ನಟಿ ಮೌನ ಗುಡ್ಡೆಮನೆಗೆ ಸೀರೆ ಮೇಲೆ ಅಪಾರ ಒಲವು. ಸೀರೆನ ಸಿಕ್ಕಾಪಟ್ಟೆ ಲವ್​ ಮಾಡ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.

ಫ್ಯಾನ್ಸ್ ಫಿದಾ..!

ಈ ಬಾರಿ ಅವರು ಡಿಫರೆಂಟ್‌ ಡ್ರೇಸಿಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಸೀರೆ ಸ್ಟೈಲ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಡಿಫರೆಂಟ್‌ ಲುಕ್‌

ರಾಮಾಚಾರಿ ನಟಿ ಮೌನ ಗುಡ್ಡೆಮನೆ ಸೀರೆ ಮೇಲೆ ಸೀರಿಯಲ್​ ನೋಡೋ ಹೆಣ್ಮಕ್ಕಳ ಕಣ್ಣು ನೆಟ್ಟಿರುತ್ತೆ. ಸದ್ಯ ಡಿಫರೆಂಟ್‌ ಲುಕ್‌ ನೀಡುವ ಸೀರೆ ಸ್ಟೈಲಿಂಗ್‌ನಲ್ಲಿ ಮಿಂಚ್ತಿದ್ದಾರೆ ನಟಿ.

ಸೀರೆಯಲ್ಲಿ ಹೆಚ್ಚು ಆಕರ್ಷಣೆ

ಆಕರ್ಷಕ ಸೀರೆಯಲ್ಲಿ ಕಂಗೋಳಿಸೋ ಮೌನಾ ಲುಕ್​ಗೆ ಅಭಿಮಾನಿಗಳು ಹೆಚ್ಚು. ಸೀರೆ ತಗೊಳ್ಳುವಾಗ ಮೌನಾ ಸೀರೆ ತೋರಿಸಿ, ರಾಮಾಚಾರಿ ಸೀರಿಯಲ್‌ ನಟಿಯ ಸೀರೆ ಕೊಡಿ ಎಂದು ಕೇಳ್ತಾರಂತೆ ಹೆಣ್ಮಕ್ಕಳು. ಆ ಮಟ್ಟಿಗೆ ಅವರು ಉಡುವ ಸೀರೆಗಳು ಜನಪ್ರಿಯತೆ ಪಡೆದಿವೆ.

ಮೌನ ಹೊಸ ಅವತಾರ

ಸದ್ಯ ಟ್ರೆಡಿಷನಲ್‌ ಚೆಕ್ಸ್ ಪ್ಯಾಟರ್ನ್‌ನ ಡಬ್ಬಲ್‌ ಕಲರ್‌ ಸೀರೆ ಉಟ್ಟು, ಮೂಗಿಗೆ ಸೆಪ್ಟಮ್‌ ರಿಂಗ್‌ ಧರಿಸಿದ್ದು ಮೌನಾ ಅಂದ ಹೆಚ್ಚಿಸಿದೆ.

ಗೊಂಬೆಯಂತೆ ಮುದ್ದು ಮುದ್ದು

ಕೊಂಚ ದಪ್ಪಾ ಆಗಿರೋ ಮೌನಾ ಗೊಂಬೆಯಂತೆ ಮುದ್ದಾಗಿ ಕಾಣಿಸ್ತಿದ್ದಾರೆ. ಸಂಪ್ರದಾಯಕ್ಕೆ ಸ್ಟೈಲ್​ ಬೇರಸಿ ಕ್ಯಾಮರಾಗೆ ಪೋಸ್​ ಕೊಟ್ಟಿದ್ದಾರೆ ನಟಿ.