ತಾಳಿ ಕಟ್ಟುವ ವೇಳೆ ರಶ್ಮಿಕಾ ಕಣ್ಣಂಚಲಿ ಜಾರಿದ ನೀರು

ಟಾಲಿವುಡ್‌ನ ಬಹುನಿರೀಕ್ಷಿತ ತಾರಾಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇದೀಗ ಅಧಿಕೃತವಾಗಿ ಸತಿ-ಪತಿಯಾಗಿದ್ದಾರೆ. ನಿನ್ನೆ ರಾಜಸ್ಥಾನದ ಉದಯಪುರದಲ್ಲಿ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ.

ಮದುವೆ ಫೋಟೋ ಹಂಚಿಕೊಂಡ ವಿರೋಶ್

ಮದುವೆಯ ಬೆನ್ನಲ್ಲೇ ನವಜೋಡಿ ತಮ್ಮ ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಮದುವೆಯ ಅಧಿಕೃತ ಫೋಟೋಗಳನ್ನು (Official Wedding Pictures) ಹಂಚಿಕೊಂಡಿದ್ದು, ಇಂಟರ್ನೆಟ್‌ನಲ್ಲಿ ಸಂಚಲನ ಸೃಷ್ಟಿಸಿವೆ.

ವಿಜಯ್ ದೇವರಕೊಂಡ ಭಾವುಕ

ವಿಜಯ್ ದೇವರಕೊಂಡ ಅವರು ರಶ್ಮಿಕಾ ಜೊತೆಗಿನ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡು ಅತ್ಯಂತ ಭಾವುಕವಾಗಿ ಹಾಗೂ ಮುದ್ದಾಗಿ ಬರೆದುಕೊಂಡಿದ್ದಾರೆ. ಒಂದು ದಿನ ನಾನು ಅವಳನ್ನು ತುಂಬಾ ಮಿಸ್ ಮಾಡಿಕೊಂಡೆ. ಅವಳು ನನ್ನ ಜೊತೆಗಿದ್ದರೆ ನನ್ನ ದಿನ ಇನ್ನೂ ಚೆನ್ನಾಗಿರುತ್ತಿತ್ತು ಎನಿಸಿತು.

ಅವಳು ಬೇಕೇ ಬೇಕು ಎನಿಸಿತು-ದೇವರಕೊಂಡ

ಊಟ ಮಾಡುವಾಗ ಅವಳು ನನ್ನ ಎದುರು ಕುಳಿತಿದ್ದರೆ ಆ ಊಟಕ್ಕೆ ಮತ್ತಷ್ಟು ಅರ್ಥವಿರುತ್ತಿತ್ತು. ವರ್ಕೌಟ್ ಮಾಡುವಾಗ ಅವಳಿದ್ದರೆ ಅದು ಶಿಕ್ಷೆಯಂತೆ ಕಾಣದೆ ಮೋಜಿನಿಂದ ಕೂಡಿರುತ್ತಿತ್ತು ಎನಿಸಿತು. ನಾನು ಎಲ್ಲೇ ಇದ್ದರೂ, ನನಗೆ ಮನೆಯೆಂಬ ನೆಮ್ಮದಿ ಮತ್ತು ಶಾಂತಿ ಸಿಗಲು ಅವಳು ಬೇಕೇ ಬೇಕು ಎನಿಸಿತು. ಹಾಗಾಗಿ, ನಾನು ನನ್ನ ಬೆಸ್ಟ್ ಫ್ರೆಂಡ್ ಅನ್ನು ನನ್ನ ಹೆಂಡತಿಯನ್ನಾಗಿ ಮಾಡಿಕೊಂಡೆ... 26.02.2026 ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ.

ವಿಜಯ್ ದೇವರಕೊಂಡ ಭಾವುಕ

ವಿಜಯ್ ದೇವರಕೊಂಡ ಅವರು ರಶ್ಮಿಕಾ ಜೊತೆಗಿನ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡು ಅತ್ಯಂತ ಭಾವುಕವಾಗಿ ಹಾಗೂ ಮುದ್ದಾಗಿ ಬರೆದುಕೊಂಡಿದ್ದಾರೆ. ಒಂದು ದಿನ ನಾನು ಅವಳನ್ನು ತುಂಬಾ ಮಿಸ್ ಮಾಡಿಕೊಂಡೆ. ಅವಳು ನನ್ನ ಜೊತೆಗಿದ್ದರೆ ನನ್ನ ದಿನ ಇನ್ನೂ ಚೆನ್ನಾಗಿರುತ್ತಿತ್ತು ಎನಿಸಿತು.

ನೆಮ್ಮದಿ ಮತ್ತು ಶಾಂತಿ ಸಿಗಲು ಅವಳು ಬೇಕು

ಊಟ ಮಾಡುವಾಗ ಅವಳು ನನ್ನ ಎದುರು ಕುಳಿತಿದ್ದರೆ ಆ ಊಟಕ್ಕೆ ಮತ್ತಷ್ಟು ಅರ್ಥವಿರುತ್ತಿತ್ತು. ವರ್ಕೌಟ್ ಮಾಡುವಾಗ ಅವಳಿದ್ದರೆ ಅದು ಶಿಕ್ಷೆಯಂತೆ ಕಾಣದೆ ಮೋಜಿನಿಂದ ಕೂಡಿರುತ್ತಿತ್ತು ಎನಿಸಿತು. ನಾನು ಎಲ್ಲೇ ಇದ್ದರೂ, ನನಗೆ ಮನೆಯೆಂಬ ನೆಮ್ಮದಿ ಮತ್ತು ಶಾಂತಿ ಸಿಗಲು ಅವಳು ಬೇಕೇ ಬೇಕು ಎನಿಸಿತು. ಹಾಗಾಗಿ, ನಾನು ನನ್ನ ಬೆಸ್ಟ್ ಫ್ರೆಂಡ್ ಅನ್ನು ನನ್ನ ಹೆಂಡತಿಯನ್ನಾಗಿ ಮಾಡಿಕೊಂಡೆ... 26.02.2026 ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ.

ಗಂಡನ ಪರಿಚಯಿಸುತ್ತಿದ್ದೇನೆ-ರಶ್ಮಿಕಾ

ಇನ್ನು ರಶ್ಮಿಕಾ ಮಂದಣ್ಣ ಕೂಡ ತಮ್ಮ ಪತಿಗೆ ವಿಶೇಷವಾಗಿ ಸಾಥ್ ನೀಡಿದ್ದು, ಉದ್ದನೆಯ ಪೋಸ್ಟ್ ಹಾಕಿದ್ದಾರೆ. ‘ಹಾಯ್ ಮೈ ಲವ್ಸ್, ನನ್ನ ಗಂಡ, ಮಿಸ್ಟರ್ ವಿಜಯ್ ದೇವರಕೊಂಡ ಅವರನ್ನು ನಿಮಗೆ ಪರಿಚಯಿಸುತ್ತಿದ್ದೇನೆ! ನಿಜವಾದ ಪ್ರೀತಿ ಎಂದರೆ ಏನೆಂದು ನನಗೆ ಕಲಿಸಿದ ವ್ಯಕ್ತಿ ಇವರು.

ಎರಡು ಸಂಪ್ರದಾಯದಂತೆ ಮದುವೆ

ಉದಯಪುರದಿಂದ 50 ಕಿ.ಮೀ ದೂರದಲ್ಲಿರುವ ಐಷಾರಾಮಿ ಹೋಟೆಲ್ ‘ಐಟಿಸಿ ಮೆಮೆಂಟೋಸ್'ನಲ್ಲಿ (ITC Mementos) ಈ ಮದುವೆ ನಡೆದಿದೆ. ಬೆಳಗ್ಗೆ 10:10ಕ್ಕೆ ವಿಜಯ್ ಅವರ ತೆಲುಗು ಸಂಪ್ರದಾಯದಂತೆ ಮದುವೆ ನಡೆದಿದೆ.

ಮತ್ತೊಮ್ಮೆ ವಿವಾಹ

ಸಂಜೆ ರಶ್ಮಿಕಾ ಅವರ ಮೂಲವಾದ ಕೊಡವ (ಕೂರ್ಗ್) ಸಂಪ್ರದಾಯದಂತೆ ಮತ್ತೊಮ್ಮೆ ವಿವಾಹ ಶಾಸ್ತ್ರಗಳು ನಡೆದಿವೆ. ಮದುವೆಯ ಸಂಭ್ರಮದ ನಡುವೆಯೂ ಈ ಜೋಡಿ, ಹೋಟೆಲ್ ಹೊರಗೆ ಕಾಯುತ್ತಿದ್ದ ಪಾಪರಾಜಿಗಳಿಗೆ (ಫೋಟೋಗ್ರಾಫರ್‌ಗಳಿಗೆ) ಸಿಹಿ ಹಂಚಿ ಖುಷಿ ಪಟ್ಟಿದ್ದಾರೆ.