ಮಂತ್ರ ಮಾಂಗಲ್ಯ, ಸುಹಾನ ಸರಳ ವಿವಾಹ

ಸರಿಗಮಪ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ಗಾಯಕಿ ಸುಹಾನ ಸೈಯದ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

Photo Credit : Instagram

ಸುಹಾನ - ನಿತಿನ್ ಕಲ್ಯಾಣ

ನಿತಿನ್ ಎಂಬ ರಂಗಭೂಮಿ ಕಲಾವಿದನ ಸುಹಾನ ಪ್ರೀತಿಸುತ್ತಿದ್ದು, ಈಗ ಅಂತರ್ ಧರ್ಮೀಯ ವಿವಾಹವಾಗುತ್ತಿದ್ದಾರೆ.

Photo Credit : instagram

ವಿಶೇಷವೆಂದರೆ ಕುವೆಂಪು ಮಂತ್ರ ಮಾಂಗಲ್ಯದ ಆಶಯದಂತೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

Photo Credit : instagram

ಪ್ರೀತಿ ವಿಶ್ವದ ಭಾಷೆ

ಹೃದಯದಿಂದ ಹೊರಹೊಮ್ಮಿದ ಈ ಪ್ರೇಮ ಕಾವ್ಯವು ದೇವರ ವಿರಚಿತ. ಶ್ರೀ ಕುವೆಂಪುರವರ ಮಂತ್ರ ಮಾಂಗಲ್ಯದ ಆಶಯದಂತೆ ಜೊತೆಯಾಗಲಿರುವ ಸುಹಾನ ಮತ್ತು ನಿತಿನ್

ಸರಿಗಮಪ ಮೂಲಕ ಜನಪ್ರಿಯತೆ..

ಸರಿಗಮಪ ಸೀಸನ್ 13 ರ ಸ್ಪರ್ಧೆಯಾಗಿದ್ದ ಸುಹಾನಾ ಗಾಯಕಿಯಾಗಿ ವೃತ್ತಿಜೀವನ ಆರಂಭಿಸಿದ್ರು. ಶೋ ನಲ್ಲಿ ಹಾಡಿದ ಹಲವು ಗೀತೆಗಳ ಮೂಲಕ ಸಾಕಷ್ಟು ಚರ್ಚೆಗೆ ಗ್ರಾಸರಾಗಿದ್ರು.

Photo Credit : instagram

ಪ್ರೀತಿಯ ಗುಟ್ಟು ರಟ್ಟು

ಮದುವೆಗೆ ಸಜ್ಜಗಿರೋ ಸುಹಾನಾ ತಮ್ಮ ಪ್ರೀತಿಯ ಗುಟ್ಟು ಬಿಚ್ಚಿಟ್ಟಿದ್ದಾರೆ. ಬಹುಕಾಲದ ಗೆಳೆಯ ನಿತಿನ್ ಎಂಬುವವರನ್ನ ವರಿಸಲಿದ್ದಾರೆ ಸುಹಾನಾ.

16 ವರ್ಷದ ಪ್ರೀತಿ

ನಿತಿನ್ ಶಿವಾಂಶ್. ರಂಗಭೂಮಿ ಕಲಾವಿದ. ಪ್ರಸಿದ್ಧ ರಂಗ ತರಬೇತಿ ಕೇಂದ್ರ ನೀನಾಸಂನಲ್ಲಿ ತರಬೇತಿ ಪಡೆದಿದ್ದಾರೆ. ಇವರದ್ದು ಪ್ರೇಮ ವಿವಾಹ. 16 ವರ್ಷಗಳ ಸುದೀರ್ಘ ಸ್ನೇಹ ಪ್ರೀತಿ ಕಾರಣ ವಾಗಿದೆ.

Photo Credit : instagram

ಜೀವಿಯ ನಿರೀಕ್ಷೆ ಪ್ರೇಮಕ್ಕಾಗಿಯೇ

ಪರಸ್ಪರ ಪ್ರೀತಿ ಇದೆ ಸಾಕು. ನಮ್ಮ ನಂಬಿಕೆಗಳು ಮುಂದುವರಿಯಲಿದೆ, ಬದಲಾಗುವ ಅವಶ್ಯಕತೆ ಇಲ್ಲ. ಪ್ರತಿ ಜೀವಿಯ ನಿರೀಕ್ಷೆ ಪ್ರೇಮಕ್ಕಾಗಿಯೇ, ಪ್ರೇಮಕ್ಕೆ ಕಾರಣ ಇಲ್ಲ. ಈ ಪ್ರೇಮ ಅನಂತ ದೂರದ ಸುಧೀರ್ಘ ಪ್ರಯಾಣ ಎನ್ನುತ್ತಾರೆ ಸುಹಾನಾ.

Photo Credit : instagram

ಸುಹಾನಾ ಸಯ್ಯದ್ ಹಾಗೂ ನಿತಿನ್ ಶಿವಾನಂಶುಗೆ ಶುಭಾಶಯಗಳ ಮಹಪೂರವೇ ಹರಿದು ಬರ್ತಿದೆ.