ಮಂಜು ಬಾಳಲ್ಲಿ ಖುಷಿ.. ಯಾರು ಈ ಹುಡುಗಿ..?

ಬಿಗ್ ಬಾಸ್ ಖ್ಯಾತಿಯ ಉಗ್ರಂ ಮಂಜು ಬಾಳಲ್ಲಿ ಪ್ರೀತಿ ಚಿಗೂರು ಒಡದಿದೆ. ಸರಳವಾಗಿ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡ್ಕೊಂಡಿದ್ದಾರೆ ಮಂಜು. ಅವರ ಭಾವಿ ಪತ್ನಿ ಸಂಧ್ಯಾ ಖುಷಿಯ ಸೂಪರ್ ಫೋಟೋಗಳು ಹೀಗಿವೆ..

ಸಂಧ್ಯಾ ಖುಷಿ..

ಉಗ್ರಂ ಮಂಜು ಮದುವೆಯಾಗುತ್ತಿರುವ ಹುಡುಗಿ ಯಾರು ಎನ್ನುವ ಪ್ರಶ್ನೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಉಗ್ರಂ ಮಂಜು ಕೈ ಹಿಡಿಯುತ್ತಿರುವ ಹುಡುಗಿ ಹೆಸರು ಸಂಧ್ಯಾ ಖುಷಿ. ಆಸ್ಪತ್ರೆ ಒಂದರಲ್ಲಿ Transplant Coordinator ಆಗಿ ಕೆಲಸ ಮಾಡ್ತಿದ್ದಾರೆ.

ದೇವಸ್ಥಾನಕ್ಕೆ ಭೇಟಿ

ಅಷ್ಟೇ ಅಲ್ಲ ಇವರು ಮಾಡಲ್ ಕೂಡ ಹೌದು. 39 ವರ್ಷದ ಮಂಜುನಾಥ್ ಗೌಡ ವರಿಸಲಿದ್ದಾರೆ ಸಂಧ್ಯಾ. ನಿಶ್ಚಿತಾರ್ಥ್ ಕ್ಕೂ ಮೊದಲೇ ಈ ಜೋಡಿ ಹಲವು ದೇವಸ್ಥಾನಕ್ಕೆ ಭೇಟಿ ಕೊಟ್ಟಿದೆ. ಜೊತೆಯಾಗಿ ಸುತ್ತಾಡಿದ್ದಾರೆ.

ಪ್ರೇಮ ವಿವಾಹ..?

ಇದು ಪ್ರೇಮ ವಿವಾಹ ಎನ್ನಲಾಗ್ತಿದೆ. ಈ ಸಂಬಂಧ ಅವರಿಗೆ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಬಿಗ್ ಬಾಸ್ ಸೀಸನ್​ 11ರಲ್ಲಿ ಮ್ಯಾಕ್ಸ್​ ಮಂಜು ಸ್ಪರ್ಧಿಯಾಗಿದ್ದರು. ಕೊನೆವರೆಗೂ ಪೈಪೋಟಿ ಕೊಟ್ಟಿದ್ದರು.

ಶುಭ ಹಾರೈಕೆಗಳು..

ಬಿಗ್ ಬಾಸ್​ನಲ್ಲಿ ಮಗ ಮದುವೆ ಬಗ್ಗೆ ತಂದೆ ಪ್ರಸ್ತಾಪ ಮಾಡಿದ್ದರು. ಅದರಂತೆ ಮಂಜು ಅವರ ನಿಶ್ಚಿತಾರ್ಥ ಆಗಿದ್ದು ಇನ್ನೇನು ವಿವಾಹ ಸಂಭ್ರಮವೊಂದು ಬಾಕಿ ಇದೆ.

ಇದನ್ನೂ ಸದ್ಯದಲ್ಲೇ ಅವರು ಅಪ್​ಡೇಟ್ ಕೊಡಬಹುದು. ನಮ್ಮ ಕಡೆಯಿಂದಲೂ ಜೋಡಿಗೆ ಶುಭ ಹಾರೈಕೆಗಳು.