newsfirstkannada.com

ಸ್ವರ್ಗವೇ ಧರೆಗಿಳಿಸಿದ ಮದುವೆ ವೈಭೋಗ; 200 ಕೋಟಿ ಖರ್ಚು ಮಾಡಿ ಬೆಚ್ಚಿ ಬೀಳಿಸಿದ ಭೂಪ; ಯಾರಿವನು?

Share :

16-09-2023

    ಮದುವೆಗಾಗಿ 42 ಕೋಟಿ ರೂಪಾಯಿ ಐಷಾರಾಮಿ ಹೋಟೆಲ್ ಬುಕ್ಕಿಂಗ್

    ಅದ್ಧೂರಿ ಕಲ್ಯಾಣಕ್ಕೆ 5,000 ಕೋಟಿ ರೂ. ವ್ಯವಹಾರ ಮಾಡಿದ ಅನುಮಾನ

    ಈ ಅದ್ಧೂರಿ ಮದುವೆಯ ಸ್ಟೋರಿ ಓದಿದ್ರೆ ಶಾಕ್​ ಆಗೋದು ಗ್ಯಾರಂಟಿ

ಹುಟ್ಟು, ಸಾವು ಮತ್ತು ಮದುವೆ ಈ ಮೂರು ದೇವರ ಇಚ್ಛೆ ಅನ್ನೋ ಮಾತಿದೆ. ಮದುವೆ ಅನ್ನೋದು ಋಣಾನುಬಂಧ. ಈ ಸಂಬಂಧವು ಎರಡು ಜೀವಗಳನ್ನು ಒಂದು ಮಾಡುತ್ತದೆ. ಇದು ಜೀವನದ ಅತ್ಯಂತ ಮಹತ್ವದ ಗಳಿಗೆಯೂ ಹೌದು. ಒಂದು ಹೆಣ್ಣು ಹಾಗೂ ಗಂಡು ಮದುವೆಯಾಗುವ ಮೂಲಕ ತಮ್ಮ ಸುಂದರವಾದ ಜೀವನವನ್ನು ಆರಂಭಿಸುತ್ತಾರೆ. ಉದ್ಯಮಿ ಲಕ್ಷ್ಮಿ ಮಿತ್ತಲ್ ಮತ್ತು ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮನೆಯ ಮದುವೆಯಂತೆ ಇಲ್ಲೊಂದು ಕುಟುಂಬ ಒಂದಲ್ಲ, ಎರಡಲ್ಲ ಬರೋಬ್ಬರಿ ₹200 ಕೋಟಿ ರೂಪಾಯಿ ಖರ್ಚು ಮಾಡಿ ಅದ್ಧೂರಿಯಾಗಿ ಮದುವೆ ಮಾಡಿದ್ದಾರೆ.

ಇದನ್ನು ಓದಿ: ಡಿಮ್ಯಾಂಡಪ್ಪೋ ಡಿಮ್ಯಾಂಡ್..​​ ಪೇಪರ್​ ಗಣಪನಿಗೆ ಫುಲ್​ ಡಿಮ್ಯಾಂಡ್​​

ಮಹದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ನ ಸೌರಭ್ ಚಂದ್ರಕರ್ ಅವರು ತಮ್ಮ ಮದುವೆಗೆ ಬರೋಬ್ಬರಿ ₹200 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಈ ಅದ್ಧೂರಿ ಮದುವೆಗೆ ಬಾಲಿವುಡ್ ಖ್ಯಾತ ನಟ ಹಾಗೂ ನಟಿಯರು ಹಾಜರಿದ್ದರು. ಈ ಅದ್ಧೂರಿ ಮದುವೆಗಾಗಿ 42 ಕೋಟಿ ರೂಪಾಯಿಗೆ ಐಷಾರಾಮಿ ಹೋಟೆಲ್ ಬುಕ್​ ಮಾಡಲಾಗಿತ್ತು. ಇದರ ಜೊತೆಗೆ ಮದುವೆಗೆ ಬಂದ ಅತಿಥಿಗಳನ್ನು ಕೊಂಡೊಯ್ಯಲು ನಾಗ್ಪೂರ್​ನಿಂದ ಯುಎಇಗೆ ಎರಡು ಪ್ರೈವೆಟ್ ಜೆಟ್ ವಿಮಾನ ಬುಕ್ಕಿಂಗ್ ಮಾಡಲಾಗಿತ್ತು. ₹112 ಕೋಟಿ ರೂಪಾಯಿ ವೆಚ್ಚದಲ್ಲಿ Mr.R-1 ಎಂಬ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಗೆ ಜವಾಬ್ದಾರಿಯನ್ನು ಕೊಟ್ಟಿತ್ತು. ಮಹದೇವ್​ ಆನ್​ಲೈನ್​ ಬೆಟ್ಟಿಂಗ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಇಡಿ ಅಧಿಕಾರಿಗಳು ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು 417 ಕೋಟಿ ರೂಪಾಯಿ ಮೌಲ್ಯದ ಸಂಪತ್ತನ್ನು ವಶಪಡಿಸಿಕೊಂಡಿದೆ. ಈ ಬಗ್ಗೆ ಜಾರಿ ನಿರ್ದೇಶನಾಲಯ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.

ರಾಯ್ಪುರ್, ಭೂಪಾಲ್, ಮುಂಬೈ, ಮತ್ತು ಕೊಲ್ಕತ್ತಾ ಸೇರಿದಂತೆ ನಗರದ ಹಲವು ಕಡೆ ಮಹದೇವ್​ ಆ್ಯಪ್​ನೊಂದಿಗೆ ಸಂಪರ್ಕ ಹೊಂದಿದ್ದರಂತೆ. ಹೀಗಾಗಿ ಈ ಬಗ್ಗೆ ಇಡಿ ಅಧಿಕಾರಿಗಳಿಗೆ ಅಕ್ರಮ ಹಣ ವರ್ಗಾವಣೆ ಜಾಲದ ಬಗ್ಗೆ ಅನುಮಾನ ಮೂಡಿತ್ತು. ಹೀಗಾಗಿ ಇದೇ ಸಂದರ್ಭದಲ್ಲಿ ಇಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾಗ ಭಾರಿ ಪ್ರಮಾಣದ ನಗದು, ಆಭರಣ ಮತ್ತಿತರ ವಸ್ತುಗಳು ಕಂಡು ಬಂದಿದೆ. ಸದ್ಯ ನಗದು, ಆಭರಣ ಜಪ್ತಿ ಮಾಡಲಾಗಿದ್ದು ಕಾರ್ಯಚರಣೆ ನಡೆಸುತ್ತಿದ್ದಾರೆ.

ED ತನಿಖೆ ವೇಳೆ ಮಹದೇವ್​ ಆ್ಯಪ್​ ದುಬೈನಿಂದ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದು ಬಂದಿದೆ. ಸೌರಭ್​ ಚಂದ್ರಕರ್​ ಮತ್ತು ರವಿ ಉಪ್ಪಲ್​ ನಿರ್ಮಿಸಿದ ಈ ಕಂಪನಿಯು ಹೊಸ ಹೊಸ ಬಳಕೆದಾರರನ್ನು ಆ್ಯಪ್​ಗೆ ಸೇರಿಸಲು, ಬ್ಯಾಂಕ್​ ಖಾತೆಗಳನ್ನು ಬಳಸಿಕೊಂಡು ಅಕ್ರಮ ಹಣ ವರ್ಗಾವಣೆ​ ಮಾಡಲು ಆನ್​ಲೈನ್​ ಬುಕ್​ ಬೆಟ್ಟಿಂಗ್​ ಆ್ಯಪ್ ಬಳಸುತ್ತಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ವರ್ಗವೇ ಧರೆಗಿಳಿಸಿದ ಮದುವೆ ವೈಭೋಗ; 200 ಕೋಟಿ ಖರ್ಚು ಮಾಡಿ ಬೆಚ್ಚಿ ಬೀಳಿಸಿದ ಭೂಪ; ಯಾರಿವನು?

https://newsfirstlive.com/wp-content/uploads/2023/09/marrige.jpg

Load More