/newsfirstlive-kannada/media/post_attachments/wp-content/uploads/2024/11/TAMANNA-BHATIA.jpg)
ತಮ್ಮನ್ನಾ ಭಾಟಿಯಾ ಹಾಗೂ ವಿಜಯ ವರ್ಮ್ ಇತ್ತೀಚೆಗೆ ಸಾರ್ವಜನಿಕ ಸಭೆಗಳಲ್ಲಿ ಒಟ್ಟಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಈ ಜೋಡಿ ತಮ್ಮ ಬಾಂಧವ್ಯವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲಿದೆ ಎನ್ನುವ ಮಾತುಗಳು ದೊಡ್ಡದಾಗಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ಬರುತ್ತಿರುವ ವರದಿಗಳು ಈ ಜೋಡಿ ತಮ್ಮದೇ ಆದ ಒಂದು ಕನಸಿನ ಮನೆಯನ್ನು ಹುಡುಕುತ್ತಿದೆಯಂತೆ. ಅಲ್ಲಿಯೇ ಒಟ್ಟಾಗಿ ವಾಸ ಮಾಡುವ ಕನಸನ್ನು ಕೂಡ ಕಾಣುತ್ತಿದೆಯಂತೆ.
ಇದನ್ನೂ ಓದಿ:ಒಂದು ಸಾಂಗ್‌ಗೆ 3 ಕೋಟಿ, ಬಂಗಲೆ, ಐಷಾರಾಮಿ ಕಾರು, ಸ್ಟುಡಿಯೋ; ಎ.ಆರ್ ರೆಹಮಾನ್ ಆಸ್ತಿ ಎಷ್ಟು ಕೋಟಿ ಗೊತ್ತಾ?
ಒಟ್ಟಾಗಿ ವಸ ಮಾಡುವುದು ಅಂದ್ರೆ ಅದು ಮದುವೆಯೇ, ಹೌದು ಈ ಜೋಡಿ ಹಸೆಮಣೆ ಏರಲು ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಳ್ಳುತ್ತಿದೆ ಎಂದು ಸುದ್ದಿಗಳು ಹರಿದಾಡುತ್ತಿವೆ. ತೆಲುಗು ಭಾಷೆಯ ಪತ್ರಿಕೆಯೊಂದು ವರದಿ ಮಾಡಿರುವ ಪ್ರಕಾರ ಹಾಲುಗಲ್ಲದ ಸುಂದರಿ ತಮ್ಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಬರುವ ವರ್ಷ ಅಂದ್ರೆ 2025ರಲ್ಲಿ ಮದುವೆಯಾಗುವುದು ಪಕ್ಕಾ ಅಂತಾಗಿದೆಯಂತೆ. ಅದಕ್ಕೆ ಬೇಕಾದ ತಯಾರಿಯೆಲ್ಲವೂ ಈಗಿನಿಂದಲೇ ನಡೆದಿದೆಯಂತೆ ಲ್ಯಾವಿಶ್ ಅಪಾರ್ಟ್​ಮೆಂಟ್​​ವೊಂದರಲ್ಲಿ ಸರಿಯಾದ ಮನೆಯನ್ನು ಹುಡುಕುವುದರಲ್ಲಿ ಈ ಜೋಡಿ ನಿರತವಾಗಿದೆ ಎಂದು ಹೇಳಲಾಗಿದೆ.
ಆದ್ರೆ ತಮ್ಮನ್ನಾ ಭಾಟಿಯಾ ಆಗಲಿ, ವಿಜಯ್ ವರ್ಮಾ ಆಗಲಿ ಈ ಒಂದು ಸುದ್ದಿಯನ್ನು ನಿಜವೆಂದೂ ಹೇಳಿಲ್ಲ, ಸುಳ್ಳೆಂದೂ ತಳ್ಳಿಯೂ ಕೂಡ ಹಾಕಿಲ್ಲ. ಕೇವಲ ಮೌನ ಕಾಯ್ದುಕೊಂಡಿದ್ದಾರೆ. ಇಲ್ಲಿಯವರೆಗೂ ಅವರ ಮದುವೆಯ ಬಗ್ಗೆ ಎಲ್ಲಿಯೂ ಕೂಡ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ ಸದ್ಯ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಈ ಜೋಡಿಯ ಅಭಿಮಾನಿಗಳಲ್ಲಿ ಒಂದು ಕುತೂಹಲವನ್ನಂತು ಸೃಷ್ಟಿ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us