newsfirstkannada.com

×

Video: ಮದುವೆ ಮನೆಯಲ್ಲಿ ಧೂಳೆಬ್ಬಿಸಿದ ಫೋಟೋಗ್ರಾಫರ್.. ಲಕ್ಷಾಂತರ ಜನರ ಹೃದಯ ಗೆದ್ದ ಈ ಡ್ಯಾನ್ಸ್​ನಲ್ಲಿ ಅಂತದ್ದೇನಿದೆ?

Share :

Published August 19, 2023 at 2:05pm

    ಹುಚ್ಚೆದ್ದು ಕುಣಿದ ಫೋಟೋಗ್ರಾಫರ್ ಡ್ಯಾನ್ಸ್​ಗೆ ಎಲ್ರೂ ಫಿದಾ

    ಈ ಫೋಟೋಗ್ರಾಫರ್ ರೀತಿ ಯಾರಾದ್ರೂ ಸ್ಟೆಪ್ಸ್​ ಹಾಕಬಹುದಾ?

    ಮದುವೆ ಮನೆಗೆ ಸಖತ್ ಜೋಶ್ ಕೊಟ್ಟ ಫೋಟೋಗ್ರಾಫರ್ ಡ್ಯಾನ್ಸ್

ಮದುವೆ ಎಂದ ಮೇಲೆ ಫೋಟೋಗ್ರಾಫರ್ ನವ ವಧುವರು ಸೇರಿದಂತೆ ಗೆಸ್ಟ್​ಗಳು ಕೂಡ ಫೋಟೋ ತೆಗೆಸಿಕೊಳ್ಳಬೇಕೆಂಬ ಆಸೆ ಇರುತ್ತದೆ. ಈ ಸಂಭ್ರಮದಲ್ಲಿ ಫೋಟೋಗ್ರಾಫರ್​ಗೆ ಊಟಕ್ಕೂ ಬಿಡುವಿರಲ್ಲ. ಅಷ್ಟೊಂದು ಬ್ಯುಸಿ ಆಗಿರುತ್ತಾರೆ. ಆದರೆ ಇಲ್ಲೊಬ್ಬ ಫೋಟೋಗ್ರಾಫರ್ ಮದುವೆ ಮನೆಯಲ್ಲಿ ಫೋಟೋ ಕ್ಲಿಕ್ ಮಾಡುತ್ತಲೇ ಸಖತ್ ಎಂಜಾಯ್ ಮಾಡಿದ್ದಾನೆ. ಸದ್ಯ ಈ ವಿಡಿಯೋ ನೋಡಿದ್ರೆ ಈ ರೀತಿ ಮಾಡಬಹುದಾ ಎಂದು ಅನಿಸೋದಂತೂ ಗ್ಯಾರಂಟಿ.

ಈ ವಿಡಿಯೋವನ್ನು ಪಂಜಾಬಿ ಟಚ್​ ಎಕ್ಸ್​ ಅಕೌಂಟ್​ನಲ್ಲಿ ಶೇರ್ ಮಾಡಲಾಗಿದೆ. ವಿವಾಹ ಸಮಾರಂಭದಲ್ಲಿ ಗೆಸ್ಟ್​ಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುತ್ತಾರೆ. ಹೀಗಾಗಿ ಮನರಂಜನೆಗಾಗಿ ಪಂಜಾಬಿ ಬೀಟ್ಸ್​ನ ಮ್ಯೂಸಿಕ್ ಪ್ಲೇ ಮಾಡಿರುತ್ತಾರೆ. ಗೆಸ್ಟ್​ಗಳೆಲ್ಲ ಸಖತ್ ಎಂಜಾಯ್ ಆಗಿ ಸ್ಟೆಪ್ಸ್​ ಹಾಕುತ್ತಿರುತ್ತಾರೆ ಈ ವೇಳೆ ಅಲ್ಲಿಗೆ ಬಂದ ಫೋಟೋಗ್ರಾಫರ್ ತನ್ನ ಕೈಗಳಲ್ಲಿ ಕ್ಯಾಮೆರಾ ಹ್ಯಾಂಡಲ್​​ ಮಾಡುತ್ತಾ ಗೆಸ್ಟ್​ ಜೊತೆ ಥ್ರಿಲ್ಲಿಂಗ್​ ಆಗಿ ಡ್ಯಾನ್ಸ್ ಮಾಡಿದ್ದಾರೆ.

ಆದಿಯಾನ್ ಧೋಹ್ ಕೆ ಪೈಯಾನ್ ಝಂಝ್ರಾ ಲಾಂಗ್ ಮೇರ್ ಲಷ್ಕರೆ ಎನ್ನುವ ಪಂಜಾಬಿ ಸಾಂಗ್​ಗೆ ಕ್ಯಾಮೆರಾ ಮ್ಯಾನ್, ಗೆಸ್ಟ್​ ಚೆನ್ನಾಗಿಯೇ ಡ್ಯಾನ್ಸ್ ಮಾಡಿದ್ದಾರೆ. ಕೈನಲ್ಲಿ ಕ್ಯಾಮೆರಾ ಹಿಡಿದುಕೊಂಡು ಸ್ಟೆಪ್ಸ್ ಹಾಕಿರುವುದು ನೋಡುಗರಿಗೆ ಅಚ್ಚರಿ ಮೂಡಿಸುತ್ತಿದೆ.

ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಫೋಟೋಗ್ರಾಫರ್ ನೆಟ್ಟಿಗರ ಹೃದಯ ಗೆದ್ದಿದ್ದಾರೆ. ಇಲ್ಲಿವರೆಗೂ ಒಂದೂವರೆ ಲಕ್ಷಕ್ಕೂ ಅಧಿಕ ವೀವ್ಸ್​ ಕಂಡಿರುವ ಈ ವಿಡಿಯೋಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ಸ್​ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಮದುವೆ ಮನೆಯಲ್ಲಿ ಧೂಳೆಬ್ಬಿಸಿದ ಫೋಟೋಗ್ರಾಫರ್.. ಲಕ್ಷಾಂತರ ಜನರ ಹೃದಯ ಗೆದ್ದ ಈ ಡ್ಯಾನ್ಸ್​ನಲ್ಲಿ ಅಂತದ್ದೇನಿದೆ?

https://newsfirstlive.com/wp-content/uploads/2023/08/DANCE.jpg

Load More