newsfirstkannada.com

ಸದ್ಯದಲ್ಲೇ ವೀಕೆಂಡ್​ ವಿತ್​ ರಮೇಶ್​​ ಶುರು; ಗೆಸ್ಟ್​ ಯಾರು ಗೊತ್ತಾ?

Share :

25-02-2023

    ವೀಕೆಂಟ್ ವಿಥ್ ಕನ್ನಡದ ಜನಪ್ರಿಯ ರಿಯಾಲಿಟಿ ಶೋ

    ಮತ್ತೆ ಈ ರಿಯಾಲಿಟಿ ಶೋ ಪ್ರಸಾರವಾಗುವ ಬಗ್ಗೆ ಮಾಹಿತಿ ನೀಡಿರುವ ಝೀ ಕನ್ನಡ ವಾಹಿನಿ

    ಡಾಲಿ ಧನಂಜಯ್, ರಿಷಬ್ ಶೆಟ್ಟಿ ಜೀವನ ಅನಾವರಣ ಸಾಧ್ಯತೆ

ಕನ್ನಡದ ಎಲ್ಲಾ ಕ್ಷೇತ್ರದ ಸಾಧಕರನ್ನ ಸಂಭ್ರಮಿಸೋ ವೇದಿಕೆ ಇದು. ಅವರ ಜೀವನದ ಪಯಣವನ್ನ ಅವರಿಗೆ ಹೆಮ್ಮೆಯಿಂದ ತೋರಿಸುವ ವೇದಿಕೆ ಇದು. ಅವರ ಜೀವನದ ಕಾಲಘಟ್ಟದ ಸ್ನೇಹಿತರನ್ನ ಕಣ್ಮುಂದೆ ತರುವ ವೇದಿಕೆ ಇದು. ಅದೇ ನಮ್ಮ ನಿಮ್ಮೆಲ್ಲರ ನೆಚ್ಚಿನ ವೀಕೆಂಡ್ ರಿಯಾಲಿಟಿ ಶೋ ವಿಕೇಂಡ್ ವಿಥ್ ರಮೇಶ್.

ಸ್ಯಾಂಡಲ್​​​​ವುಡ್​ ಖ್ಯಾತ ನಟ ರಮೇಶ್ ಅರವಿಂದ್ ಅವರ ಸಾರಥ್ಯದಲ್ಲಿ ಅದ್ಭುತವಾಗಿ ಮೂಡಿ ಬರುವ ರಿಯಾಲಿಟಿ ಶೋ. ಇಲ್ಲಿ ಎಲ್ಲಾ ಕ್ಷೇತ್ರದ ರಿಯಲ್ ಹಿರೋ- ಹಿರೋಹಿನ್​ಗಳನ್ನ ಸೆಲೆಬ್ರೇಟ್ ಮಾಡಲಾಗತ್ತೆ. ಸದ್ಯದಲ್ಲೇ ಎಲ್ಲರ ನೆಚ್ಚಿನ ವಿಕೇಂಡ್ ವಿಥ್ ರಮೇಶ್ ಸೀಸನ್​​ 5 ನಿಮ್ಮನ್ನು ರಂಜಿಸಲು ಬರ್ತಿದೆ. ಜೀ ಕನ್ನಡ ವಾಹಿನಿಯ ಬ್ಯೂಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರು ಈ ರಿಯಾಲಿಟಿ ಶೋ ಬರುವ ಬಗ್ಗೆ ಹಿಂಟ್ ಕೊಟ್ಟಿದ್ದಾರೆ.

ಇನ್ನು, ಈ ಜನಪ್ರಿಯ ರಿಯಾಲಿಟಿ ಶೋಗೆ ಇಬ್ಬರು ಸ್ಟಾರ್​​ ನಟರು ಬರುತ್ತಿದ್ದಾರೆ ಎನ್ನಲಾಗಿದೆ. ಈ ಸಾಧಕರ ಸೀಟ್​ನ ಮೊದಲ ಸಂಚಿಕೆಯಲ್ಲಿ ಸ್ಯಾಂಡಲ್​ವುಡ್​​​ ಖ್ಯಾತ ನಟ ರಿಷಬ್ ಶೆಟ್ಟಿ ಬರಲಿದ್ದು, 2ನೇ ಸಂಚಿಕೆಯಲ್ಲಿ ಡಾಲಿ ಧನಂಜಯ್ ಬರಲಿದ್ದಾರಂತೆ. ಇದೀಗ ಕಳೆದ ಸೋಮವಾರ ಪ್ರೋಮೊ ಶೂಟಿಂಗ್ ಮಾಡಲಾಗಿದೆ. ವೀಕೆಂಡ್ ವಿತ್ ರಮೇಶ್ ಸೀಸನ್​​ 5 ಬರೋದು ಪಕ್ಕ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸದ್ಯದಲ್ಲೇ ವೀಕೆಂಡ್​ ವಿತ್​ ರಮೇಶ್​​ ಶುರು; ಗೆಸ್ಟ್​ ಯಾರು ಗೊತ್ತಾ?

https://newsfirstlive.com/wp-content/uploads/2023/02/ramesh-2.jpg

Load More