newsfirstkannada.com

ಮಮತಾ ಬ್ಯಾನರ್ಜಿ ಪ್ರಯಾಣಿಸ್ತಿದ್ದ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ.. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ದೀದಿ

Share :

28-06-2023

  ರಾಜಕೀಯ ಕಾರ್ಯಕ್ರಮ ಮುಗಿಸಿ ಬರುವಾಗ ಬ್ಯಾಡ್​ ಟೈಂ

  ಪೈಲೆಟ್​ ಜಾಗೃತಿಯಿಂದ ತಪ್ಪಿದ ಭಾರೀ ಅನಾಹುತ

  ​SSKM ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಮಮತಾ

ಕೋಲ್ಕತ್ತಾ: ಕೆಟ್ಟ ಹವಾಮಾನದಿಂದ ಹೆಲಿಕಾಪ್ಟರ್​ ಅನ್ನು ತುರ್ತು ಭೂಸ್ಪರ್ಶ ಮಾಡಿದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದಾರೆ. ಕೋಲ್ಕತ್ತಾದಲ್ಲಿನ SSKM ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬಳಿಕ ತಮ್ಮ ನಿವಾಸಕ್ಕೆ ತೆರಳಿದ್ದಾರೆ.

ನಿನ್ನೆ ಸಿಎಂ ಮಮತಾ ಬ್ಯಾನರ್ಜಿ ಅವರು ಹೆಲಿಕಾಪ್ಟರ್​ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಹವಾಮಾನ ವೈಪರಿತ್ಯದಿಂದಾಗಿ ಹೆಲಿಕಾಪ್ಟರ್​ ಅನ್ನು ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿ ಬರುವ ಸಿಲಿಗುರಿ ಬಳಿಯ ಸೆವೋಕ್ ಏರ್​ಫೋರ್ಸ್​ ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಈ ವೇಳೆ ಸಿಎಂ ಅವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಅಲ್ಲಿನ ಆರ್ಮಿ ಅಧಿಕಾರಿಗಳನ್ನು ಭೇಟಿ ಮಾಡಿದ ಬಳಿಕ ಅವರನ್ನು ಕಾರಿನ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆ ಬಳಿ ಬಂದಾಗ ವೀಲ್​ ಚೇರ್​ ತರಲಾಯಿತು. ಆದ್ರೆ ಸಿಎಂ ಅದನ್ನು ನಿರಾಕರಿಸಿ ನಡೆದುಕೊಂಡೆ ಹೋಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.

ಈ ಬಗ್ಗೆ ಮಾತನಾಡಿದ ಸಿಎಂ ಮಮತಾ ಅವರು, ಇಂಡಿಯನ್​ ಆರ್ಮಿಗೆ ಥ್ಯಾಂಕ್ಸ್ ಹೇಳಿದರು. ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶದಿಂದಾಗಿ ನಾನು ಆಕಸ್ಮಿಕವಾಗಿ ಈ ಏರ್​ಬೇಸ್​ಗೆ ಬರಬೇಕಾಯಿತು. ಇದು ಹೆಮ್ಮೆಯ ವಿಷಯದ ಜೊತೆ ನನಗೊಲಿದ ಭಾಗ್ಯ. ಹೆಚ್ಚಿನ ಕಾಳಜಿ ವಹಿಸಿದ್ದಕ್ಕಾಗಿ ಅವರಿಗೆ ಕೃತಜ್ಞಳಾಗಿದ್ದೇನೆ. ಭಾರತಕ್ಕಾಗಿ ದುಡಿಯುವ ಇಂತಹ ಯೋಧರನ್ನು ಭೇಟಿ ಮಾಡಿದ್ದಕ್ಕೆ ಖುಷಿಯಾಗುತ್ತಿದೆ. ದೇಶದ ಗಡಿಗಳಲ್ಲಿ ನಿತ್ಯ ಕಾರ್ಯವಹಿಸುವ ಸೇನೆಯ ಎಲ್ಲ ಸಿಬ್ಬಂದಿಗೆ ಧನ್ಯವಾದಗಳು ಎಂದಿದ್ದಾರೆ.

ಮುಂಬರುವ ಪಂಚಾಯತ್​ ಎಲೆಕ್ಷನ್​ ಹಿನ್ನೆಲೆಯಲ್ಲಿ ಜಲ್ಪೈಗುರಿ ಜಿಲ್ಲೆಯಲ್ಲಿ ರಾಜಕೀಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದನ್ನು ಮುಗಿಸಿ ಕೋಲ್ಕತ್ತಾಗೆ ಹೆಲಿಕಾಪ್ಟರ್​ನಲ್ಲಿ ವಾಪಸ್ ಆಗುವಾಗ ಮೋಡ ಮುಸುಕಿದ ವಾತಾವರಣ ಉಂಟಾಗಿ ಮಳೆ ಬಂದಿದೆ. ಹೀಗಾಗಿ ಪೈಲೆಟ್​ ಹೆಲಿಕಾಪ್ಟರ್​ ಭೂಸ್ಪರ್ಶ ಮಾಡಬೇಕಾಗಿ ಬಂತು ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಮತಾ ಬ್ಯಾನರ್ಜಿ ಪ್ರಯಾಣಿಸ್ತಿದ್ದ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ.. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ದೀದಿ

https://newsfirstlive.com/wp-content/uploads/2023/06/CM_MAMTHA_BANARGY.jpg

Load More