ಪೊಲೀಸರು ಯಾಕೆ ಬಂಧಿಸಿದ್ದರು..?
ಜಾಮೀನಿಗೆ ಅವಕಾಶ ಇದ್ದರೂ ಯಾಕೆ ಜೈಲಿನಲ್ಲಿಯೇ ಇದ್ದರು..?
ಸೊರಗಿದ ದಂಪತಿ ಕಂಡು ಕುಟುಂಬಸ್ಥರು ಏನ್ಮಾಡಿದ್ರು ಗೊತ್ತಾ..?
ಬೆಂಗಳೂರು: ಅಪರೂಪದ ಪ್ರಕರಣ ಒಂದರಲ್ಲಿ ಪಶ್ಚಿಮ ಬಂಗಾಳದ ದಂಪತಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಬರೋಬ್ಬರಿ 301 ದಿನ ಜೈಲು ಶಿಕ್ಷೆ ಅನುಭವಿಸಿದ ಪ್ರಸಂಗ ಬೆಳಕಿಗೆ ಬಂದಿದೆ. ಪಲಾಶಾಧಿಕಾರ್, ಶುಕ್ಲಾ ಜೈಲುವಾಸ ಅನುಭವಿಸಿದ ದಂಪತಿ.
ಪೊಲೀಸರು ಯಾಕೆ ಬಂಧಿಸಿದ್ದರು..?
ಕೊಳಗೇರಿ ಒಂದರಲ್ಲಿ ಅಕ್ರಮವಾಗಿ ನೆಲೆಸಿದ್ದ ಈ ದಂಪತಿಯನ್ನು ರಾಜ್ಯದ ಪೊಲೀಸ್ ಅಧಿಕಾರಿಗಳು 2022 ಜುಲೈನಲ್ಲಿ ಬಂಧಿಸಿದ್ದರು. ಅನುಮಾನಿತ ವ್ಯಕ್ತಿಗಳೆಂದು ಪೊಲೀಸ್ ಅಧಿಕಾರಿಗಳು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಮೂಲತಃ ಪಶ್ಚಿಮ ಬಂಗಾಳದವರು ಎಂದು ತಿಳಿದುಬಂದಿತ್ತು.
ಯಾಕೆ ಜೈಲಿನಲ್ಲಿಯೇ ಉಳಿದುಕೊಂಡಿದ್ದರು..?
ಬಂಧನಕ್ಕೆ ಒಳಗಾದ ಬಳಿಕ ಈ ದಂಪತಿಗೆ ತಮ್ಮ ಕುಟುಂಬವನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಜಾಮೀನು ಕೂಡ ಸಿಗಲಿಲ್ಲ. ಜಾಮೀನಿಗೆ 75 ಸಾವಿರದ ಬಾಂಡ್ ಹಾಗೂ ಸ್ಥಳೀಯ ವ್ಯಕ್ತಿಗಳ ಗ್ಯಾರಂಟಿ ಸಹಿ ಬೇಕಾಗಿತ್ತು. ಇದನ್ನ ಹೊಂದಿಸಲು ದಂಪತಿಗೆ ಆಗಿರಲಿಲ್ಲ. ಅಲ್ಲದೇ ಯಾರೂ ಸಹ ದಂಪತಿಗೆ ಬಾಂಡ್ ನೀಡಲು ಮುಂದೆ ಬಂದಿರಲಿಲ್ಲ.
ಅದಕ್ಕೆ ಪೊಲೀಸರು ಏನ್ಮಾಡಿದ್ರು..?
ಪಶ್ಚಿಮ ಬಂಗಾಳದವರು ಅನ್ನೋದನ್ನು ಅರಿತ ಹಿರಿಯ ಅಧಿಕಾರಿಗಳು, ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ದಂಪತಿ ಸ್ವಗ್ರಾಮಕ್ಕೆ ಪೊಲೀಸ್ ಅಧಿಕಾರಿಗಳ ತಂಡವನ್ನು ಕಳುಹಿಸಿದ್ದರು. ಪಶ್ಚಿಮ ಬಂಗಾಳದ ಜಮಾಲ್ಪುರದ ಸ್ಥಳೀಯ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಶೀಲನೆ ನಡೆಸಿ, ಕುಟುಂಬಸ್ಥರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.
ಮುಂದೆ ಏನಾಯ್ತು..?
ಇಷ್ಟೆಲ್ಲ ಆದ ಬಳಿಕ ಕುಟುಂಬಸ್ಥರಿಗೆ ಜಾಮೀನಿಗಾಗಿ ವಕೀಲರನ್ನು ನೇಮಿಸಲು ಅವಕಾಶ ಸಿಕ್ಕಿತು. ಅದರಂತೆ ಕೋರ್ಟ್ನಲ್ಲಿ ವಿಚಾರಣೆ ನಡೆದು ಏಪ್ರಿಲ್ 28 ರಂದು ಕೋರ್ಟ್ ಜಾಮೀನು ನೀಡಿತ್ತು. ಇದೀಗ ದಂಪತಿ ಸ್ವಗ್ರಾಮಕ್ಕೆ ಹೊಗಿದೆ. ಒಂದು ವರ್ಷ ಜೈಲು ವಾಸ ಅನುಭವಿಸಿ ಸೊರಗಿದ ದಂಪತಿ ಕಂಡು ಕುಟುಂಬಸ್ಥರು ನೊಂದು ಕಣ್ಣೀರಿಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ