newsfirstkannada.com

ಪಶ್ಚಿಮ ಬಂಗಾಳ ಪಂಚಾಯತಿ ಚುನಾವಣೆ; ಭಾರೀ ಹಿಂಸಾಚಾರ; 19 ಮಂದಿ ಸಾವು

Share :

09-07-2023

  ಪಶ್ಚಿಮ ಬಂಗಾಳದ 3ನೇ ಹಂತದ ಪಂಚಾಯತಿ ಚುನಾವಣೆ

  ಮತದಾನದ ಮುಗಿದ ಮೇಲೂ ಮುಂದುವರಿದ ಹಿಂಸಾಚಾರ

  ತೃಣಮೂಲ ಕಾಂಗ್ರೆಸ್​​ ಕಾರ್ಯಕರ್ತ ಸೇರಿ 19 ಮಂದಿ ಸಾವು

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆದ 3ನೇ ಹಂತದ ಪಂಚಾಯತಿ ಚುನಾವಣೆಗೆ ಮತದಾನ ಮುಕ್ತಾಯವಾಗಿದೆ. ಮತದಾನ ಮುಗಿದ ಬಳಿಕವೂ ಹಿಂಸಾಚಾರ ಮುಂದುವರಿದಿದೆ. ಈ ಹಿಂಸಾಚಾರದಲ್ಲಿ ಇದುವರೆಗೂ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​​ ಕಾರ್ಯಕರ್ತರು ಸೇರಿದಂತೆ ಕನಿಷ್ಟ 19 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಇನ್ನು, ಮತದಾನ ಆರಂಭಕ್ಕೂ ಮನ್ನವೇ ಟಿಎಂಸಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದರು. ಮಾತಿಗೆ ಮಾತು ಬೆಳೆದು ಹೊಡೆದಾಟ ಮಾಡಿಕೊಂಡಿದ್ದ ಸ್ಥಳೀಯರ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದರು.

ಒಂದೆಡೆ ಫಲಿಮಾರಿ ಗ್ರಾಮ ಪಂಚಾಯಿತಿ ಬಿಜೆಪಿ ಮತಗಟ್ಟೆ ಏಜೆಂಟ್ ಮಾಧಬ್ ಬಿಸ್ವಾಸ್ ಅವರನ್ನು ಹತ್ಯೆ ಮಾಡಲಾಗಿತ್ತು. ಇನ್ನೊಂದೆಡೆ ಪರಗಣ ಜಿಲ್ಲೆಯ ಕದಂಬಗಚಿ ಪ್ರದೇಶದಲ್ಲಿ ಸ್ವತಂತ್ರ ಅಭ್ಯರ್ಥಿ ಒಬ್ಬರನ್ನು ಕೊಂದು ಹಾಕಿದ್ದರು. ಈ ಹತ್ಯೆಗಳನ್ನು ಖಂಡಿಸಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಸ್ಥಳೀಯರು ಬೀದಿಗಿಳಿದು ಪ್ರತಿಭಟಿಸಿದ್ದರು.

ಕೇವಲ ಬಿಜೆಪಿ ಮಾತ್ರವಲ್ಲ ಕಪಾಸ್‌ದಂಗ ಎಂಬ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಟಿಎಂಸಿ ಕಾರ್ಯಕರ್ತ ಬಾಬರ್ ಅಲಿ ಎಂಬುವರನ್ನು ಕೊಂದಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿದ್ದ ಟಿಎಂಸಿ, ನಮ್ಮ ಪಕ್ಷದ ಮೂವರು ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಇದಕ್ಕೆ ಬಿಜೆಪಿ, ಸಿಪಿಐ(ಎಂ) ಮತ್ತು ಕಾಂಗ್ರೆಸ್‌ ಕಾರಣ ಎಂದು ಆರೋಪಿಸಿದೆ.

ಮತಗಟ್ಟೆಗಳ ಬಳಿ ಭಾರೀ ಹಿಂಸಾಚಾರ

ಮತಗಟ್ಟೆಗಳ ಬಳಿ ಭಾರೀ ಹಿಂಸಾಚಾರ ನಡೆದ ಕಾರಣ ಮತದಾನ ಪ್ರಕ್ರಿಯೆಯನ್ನು ಕೆಲಕಾಲ ಸ್ಥಗಿತ ಮಾಡಲಾಗಿತ್ತು. ಹಿಂಸಾಚಾರ ಹಿನ್ನೆಲೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ರಾಜ್ಯಪಾಲ ಸಿವಿ ಆನಂದ ಬೋಸ್ ಕೂಡ ಪ್ರತ್ಯೇಕ ಸಭೆಗಳನ್ನು ನಡೆಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಶ್ಚಿಮ ಬಂಗಾಳ ಪಂಚಾಯತಿ ಚುನಾವಣೆ; ಭಾರೀ ಹಿಂಸಾಚಾರ; 19 ಮಂದಿ ಸಾವು

https://newsfirstlive.com/wp-content/uploads/2023/07/Punchayat-Elections.jpg

Load More