ಪ.ಬಂಗಾಳದಲ್ಲಿ ಓರ್ವ BJP ಕಾರ್ಯಕರ್ತನ ಗುಂಡಿಟ್ಟು ಹತ್ಯೆ
ಚುನಾವಣೆ ಪ್ರಕ್ರಿಯೆ ಶುರವಾದಗಿಂದ ಅನೇಕ ಸಾವು-ನೋವು
ಬಿಜೆಪಿ-ಟಿಎಂಸಿ ಗಲಾಟೆಯಲ್ಲಿ CPIM ಕಾರ್ಯಕರ್ತ ಕೂಡ ಸಾವು
ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಪಂಚಾಯತ್ ಚುನಾವಣೆ ರಣಾಂಗಣವಾಗಿ ಮಾರ್ಪಟ್ಟಿದೆ. ಟಿಎಂಸಿ ಹಾಗೂ ಬಿಜೆಪಿ ನಡುವಿನ ಗಲಾಟೆಯಲ್ಲಿ ಒಟ್ಟು 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಚುನಾವಣಾ ನಾಮಿನೇಷನ್ ಪ್ರಕ್ರಿಯೆ ಶುರುವಾದಾಗಿದ್ದ ನಿರಂತರವಾಗಿ ಹಿಂಸಾಚಾರ ನಡೆಯುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಇವತ್ತು ನಡೆದ ಭಾರೀ ಹಿಂಸಾಚಾರದಲ್ಲಿ ಒಟ್ಟು 7 ಮಂದು ಜೀವ ಬಿಟ್ಟಿದ್ದು ಈ ಸಂಬಂಧ ತನಿಖೆ ನಡೆಯುತ್ತಿದೆ. ಇನ್ನು ಮಲ್ದಾದಲ್ಲಿ ಕಚ್ಚಾ ಬಾಂಬ್ ದಾಳಿ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ.
ಮೃತರಲ್ಲಿ ನಾಲ್ವರು ಟಿಎಂಸಿ ಕಾರ್ಯಕರ್ತರಾಗಿದ್ದಾರೆ. ಕೂಚ್ ಬೆಹರ್ನಲ್ಲಿ ಓರ್ವ ಬಿಜೆಪಿ ಕಾರ್ಯಕರ್ತನನ್ನು ಹೊಡೆದು ಸಾಯಿಸಲಾಗಿದೆ. ಇವತ್ತು ಕೋಲ್ಕತ್ತಾದಲ್ಲಿ ನಡೆದ ಗಲಾಟೆಯಲ್ಲಿ ಸಿಪಿಐಎಂ ಕಾರ್ಯಕರ್ತ ಸಾವನ್ನಪ್ಪಿದ್ದಾನೆ. ಈ ಮೂಲಕ ಪಶ್ಚಿಮ ಬಂಗಾಳದ ಚುನಾವಣೆಯು ಹಿಂಸಾಚಾರಕ್ಕೆ ದಾರಿ ಮಾಡಿಕೊಟ್ಟಿದೆ. ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಾರ್ಟಿ ನಡುವಿನ ರಾಜಕೀಯ ತಿಕ್ಕಾಟ ಮತ್ತೊಂದು ಸ್ವರೂಪ ಪಡೆದುಕೊಂಡಿದೆ.
ಚುನಾವಣೆಯಲ್ಲಿ TMC ಕಾರ್ಯಕರ್ತರು ಮೃತರ ಹೆಸರಿನಲ್ಲಿ ಬೋಗಸ್ ವೋಟ್ ಮಾಡುತ್ತಿದ್ದಾರೆಂದು ಬಿಜೆಪಿ ಆರೋಪಿದೆ. ಮೇದಿನಿಪುರ ಜಿಲ್ಲೆಯ ನಂದಿಗ್ರಾಮ್ ಬ್ಲಾಕ್ನಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸಿ ಪರಿಸ್ಥಿತಿ ನಿಯಂತ್ರಿಸುವಂತೆ ಆಗ್ರಹಿಸಿದ್ದಾರೆ. ಕೇಂದ್ರ ಪಡೆಗಳನ್ನು ನಿಯೋಜಿಸುವವರೆಗೂ ಚುನಾವಣೆಯನ್ನು ಬಹಿಷ್ಕರಿಸೋದಾಗಿ ಬಿಜೆಪಿ ಎಚ್ಚರಿಸಿದೆ. ಗಲಭೆ ಹಿನ್ನೆಲೆ ಪ್ರತಿ ಬೂತ್ನಲ್ಲೂ ಕೇಂದ್ರ ಪಡೆ ನಿಯೋಜಿಸುವಂತೆ ಕೊಲ್ಕತ್ತಾ ಹೈಕೋರ್ಟ್ ಆದೇಶ ಹೊರಡಿಸಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ