ಭಾರತ-ವೆಸ್ಟ್ ಇಂಡೀಸ್ 2ನೇ ಏಕದಿನ ಪಂದ್ಯ
1-1 ಅಂತರದಲ್ಲಿ ಏಕದಿನ ಸರಣಿ ಸಮಬಲ
ಕೇವಲ 181 ರನ್ಗಳಿಗೆ ಭಾರತ ಆಲೌಟ್..!
ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇವೆ ಸಾಕು ಅಂದವರಿಗೆಲ್ಲಾ ನಿನ್ನೆ ಉತ್ತರ ಸಿಕ್ಕಿದೆ. ಅನುಭವಿಗಳ ಅಲಭ್ಯತೆಯಲ್ಲಿ ಕಣಕ್ಕಿಳಿದ ಯಂಗ್ ಟೀಮ್ ನಿನ್ನೆ ಕಂಗಾಲಾಯ್ತು. ಮ್ಯಾಚ್ ಸಿಚ್ಯುವೇಶನ್ ಅನ್ನೇ ಅರ್ಥ ಮಾಡಿಕೊಳ್ಳದೆ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿದ್ರೆ, ಬೌಲರ್ಗಳು ವಿಕೆಟ್ ಕಬಳಿಸಲು ಪರದಾಡಿದ್ರು. ಪರಿಣಾಮ ಟೀಮ್ ಇಂಡಿಯಾ ಸೋಲಿನ ಮುಖಭಂಗ ಅನುಭವಿಸ್ತು.
ಟೀಮ್ ಇಂಡಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ವೆಸ್ಟ್ ಇಂಡೀಸ್ ಕಮ್ಬ್ಯಾಕ್ ಮಾಡ್ತು. ಮೊದಲ ಏಕದಿನದಲ್ಲಿ ಹೀನಾಯ ಸೋಲುಂಡಿದ್ದ ವಿಂಡೀಸ್, 2ನೇ ಏಕದಿನದಲ್ಲಿ ಭರ್ಜರಿ ಗೆಲುವು ದಾಖಲಿಸಿತು. 6 ವಿಕೆಟ್ಗಳ ಗೆಲುವಿನೊಂದಿಗೆ ಸರಣಿಯಲ್ಲಿ 1-1ರ ಸಮಭಲ ಸಾಧಿಸಿತು.
ಶುಭ್ಮನ್-ಕಿಶನ್ ಡಿಸೆಂಟ್ ಆರಂಭ
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ಡಿಸೆಂಟ್ ಆರಂಭ ಪಡದುಕೊಳ್ತು. ಎಚ್ಚರಿಕೆಯ ಆಟವಾಡಿದ ಶುಭ್ಮನ್ ಗಿಲ್, ಇಶಾನ್ ಕಿಶನ್ ಉತ್ತಮ ಆರಂಭ ಒದಗಿಸಿದ್ರು. ಆದ್ರೆ, ಬಿಗ್ಸ್ಕೋರ್ಗಳಿಸುವಲ್ಲಿ ಎಡವಿದ ಗಿಲ್, 34 ರನ್ಗಳಿಸಿ ನಿರ್ಗಮಿಸಿದ್ರು. ಅರ್ಧಶತಕ ಸಿಡಿಸಿದ ಕಿಶನ್ 55 ರನ್ಗಳಿಸಿ ನಿರ್ಗಮಿಸಿದ್ರು.
ಮಿಡಲ್ ಆರ್ಡರ್ ಬ್ಯಾಟರ್ಗಳ ಪೆವಿಲಿಯನ್ ಪರೇಡ್
ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ ಬೆನ್ನಲ್ಲೇ, ಟೀಮ್ ಇಂಡಿಯಾದ ಪೆವಿಲಿಯನ್ ಪರೇಡ್ ಆರಂಭವಾಯ್ತು. ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ರು. ರವೀಂದ್ರ ಜಡೇಜಾ ಆಟವೂ ವಿಂಡೀಸ್ ಬೌಲರ್ಗಳ ಮುಂದೆ ನಡೆಯಲಿಲ್ಲ.
181 ರನ್ಗಳಿಗೆ ಟೀಮ್ ಇಂಡಿಯಾ ಆಲೌಟ್.!
3 ಬೌಂಡರಿ ಸಿಡಿಸಿ ಭರವಸೆ ಹುಟ್ಟು ಹಾಕಿದ ಸೂರ್ಯ ಕುಮಾರ್ ಯಾದವ್ ಕೂಡ ನಿರಾಸೆ ಮೂಡಿಸಿದ್ರು. 24 ರನ್ಗಳಿಗೆ ಸೂರ್ಯನ ಆಟ ಅಂತ್ಯವಾದ್ರೆ, ಶಾರ್ದೂಲ್ ಠಾಕೂರ್ 16 ರನ್ಗಳಿಸಿ ನಿರ್ಗಮಿಸಿದ್ರು. ಉಮ್ರಾನ್ ಮಲಿಕ್, ಮುಕೇಶ್ ಕುಮಾರ್ ವಿಂಡೀಸ್ ಬೌಲರ್ಗಳಿಗೆ ಸವಾಲಾಗಲಿಲ್ಲ. ಅಂತಿಮವಾಗಿ 181 ರನ್ಗಳಿಗೆ ಟೀಮ್ ಇಂಡಿಯಾ ಆಲೌಟ್ ಆಯ್ತು.
ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸಿದ ಶಾರ್ದೂಲ್.!
181 ರನ್ಗಳ ಸುಲಭದ ಟಾರ್ಗೆಟ್ ಬೆನ್ನತ್ತಿದ ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆದುಕೊಳ್ತು. ಉತ್ತಮ ಜೊತೆಯಾಟವಾಡ್ತಿದ್ದ ಕೈಲ್ ಮೆಯರ್ಸ್, ಬ್ರೆಂಡನ್ ಕಿಂಗ್ ಜೋಡಿಗೆ ಬ್ರೇಕ್ ಹಾಕುವಲ್ಲಿ ಶಾರ್ದೂಲ್ ಠಾಕೂರ್ ಯಶಸ್ವಿಯಾದ್ರು. 9ನೇ ಓವರ್ನಲ್ಲಿ ಆರಂಭಿಕರಿಬ್ಬರಿಗೂ ಶಾರ್ದೂಲ್ ಗೇಟ್ಪಾಸ್ ನೀಡಿದ್ರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಲಿಕ್ ಅಥನಾಜೆಗೂ ಶಾರ್ದೂಲ್, ಪೆವಿಲಿಯನ್ ದಾರಿ ತೋರಿಸಿದ್ರು.
ಕ್ಯಾಪ್ಟನ್ ಹೋಪ್-ಕಾರ್ಟಿ ಛಲದ ಹೋರಾಟ.!
ಬಂದಷ್ಟೇ ವೇಗವಾಗಿ ಶಿಮ್ರಾನ್ ಹೆಟ್ಮೆಯರ್ಗೆ ಪೆವಿಲಿಯನ್ ದಾರಿ ತೋರಿಸುವಲ್ಲಿ ಕುಲ್ದೀಪ್ ಯಾದವ್ ಯಶಸ್ಸಿಯಾದ್ರು. ಆದ್ರೆ, ಆ ಬಳಿಕ ಜೊತೆಯಾದ ನಾಯಕ ಶಾಯ್ ಹೋಪ್, ಕೀಸಿ ಕಾರ್ಟಿ ಭಾರತೀಯ ಬೌಲರ್ಗಳನ್ನ ಕಾಡಿದ್ರು. ಅದ್ಬುತ ಇನ್ನಿಂಗ್ಸ್ ಕಟ್ಟಿದ ಹೋಪ್ ಅರ್ಧಶತಕ ಸಿಡಿಸಿ ಅಬ್ಬರಿಸಿದ್ರೆ, ಕಾರ್ಟಿ ಅಜೇಯ 48 ರನ್ ಸಿಡಿಸಿದ್ರು. ಅಂತಿಮವಾಗಿ 4 ವಿಕೆಟ್ ಕಳೆದುಕೊಂಡು 40.5 ಓವರ್ಗಳಲ್ಲಿ ವಿಂಡೀಸ್ ಗುರಿ ಮುಟ್ಟಿತು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್