ವಿಂಡೀಸ್ ಟಿ20 ಸರಣಿಗೆ ಭಾರತ ತಂಡ ಪ್ರಕಟ
ಅಳೆದ ತೂಗಿ ತಂಡ ಪ್ರಕಟಿಸಿರೋ ಸಲೆಕ್ಷನ್ ಕಮಿಟಿ
ಪವರ್ ಹಿಟ್ಟರ್ ತಿಲಕ್ ವರ್ಮಾಗೆ ಫಸ್ಟ್ ಚಾನ್ಸ್
ಮುಂಬರೋ ವೆಸ್ಟ್ಇಂಡೀಸ್ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾ ಪ್ರಕಟಗೊಂಡಿದೆ. ಆಯ್ಕೆ ಸಮಿತಿ ಬಲಿಷ್ಠ ತಂಡವನ್ನ ಅನೌನ್ಸ್ ಮಾಡಿದೆ. ಹಾಗಾದ್ರೆ ವಿಂಡೀಸ್ ಟಿ20 ಸರಣಿಯಲ್ಲಿ ಟಿಕೆಟ್ ಪಡೆದಿರೋ ಆ ಕಲಿಗಳು ಯಾರು?
ಅಜಿತ್ ಅಗರ್ಕರ್ ಮೊನ್ನೆಯಷ್ಟೇ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ನೇಮಕಗೊಂಡಿದ್ರು. ಆಗಲೇ ಟೀಮ್ ಇಂಡಿಯಾದ ಇನ್ಚಾರ್ಜ್ ತೆಗೆದುಕೊಂಡಿದ್ದಾರೆ. ಆಗಸ್ಟ್ 3 ರಿಂದ ಆರಂಭಗೊಳ್ಳಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಏಕದಿನ ಮತ್ತು ಟೆಸ್ಟ್ನಂತೆ ಚುಟುಕು ಸರಣಿಯಲ್ಲಿ ಹಿರಿಯರಿಗೆ ಕೊಕ್ ನೀಡಿ, ಯಂಗ್ಸ್ಟರ್ಸ್ ಮಣೆ ಹಾಕಿ ಸರ್ಪ್ರೈಸ್ ನೀಡಿದ್ದಾರೆ.
ಜುಲೈ 12 ರಿಂದ ವಿಂಡೀಸ್ ಪ್ರವಾಸ ಆರಂಭಗೊಳ್ಳಲಿದ್ದು, ಜೂನ್ 23 ರಂದು ಏಕದಿನ ಮತ್ತು ಟೆಸ್ಟ್ ಸರಣಿಗೆ ಏಕಕಾಲಕ್ಕೆ ತಂಡವನ್ನ ಪ್ರಕಟಿಸಲಾಗಿತ್ತು. ಆದರೆ ಟಿ20ಗೆ ತಂಡವನ್ನ ಅನೌನ್ಸ್ ಮಾಡಿರ್ಲಿಲ್ಲ. ಅಗರ್ಕರ್ ಚೀಫ್ ಸೆಲೆಕ್ಟರ್ ಆದ ಮರುದಿನವೇ 15 ಸದಸ್ಯರ ತಂಡವನ್ನ ಪ್ರಕಟಿಸಿ, ಕೆಲ ಆಟಗಾರರಿಗೆ ಶಾಕ್ ನೀಡಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಯುವ ಆಟಗಾರರಿಗೆ ಚಾನ್ಸ್ ನೀಡಿ ಭವಿಷ್ಯದಲ್ಲಿ ಯಂಗ್ ಇಂಡಿಯಾ ಕಟ್ಟುವ ಸಂದೇಶ ರವಾನಿಸಿದೆ.
ಟಿ20 ಸರಣಿಗೆ ಟೀಮ್ ಇಂಡಿಯಾ
ವಿಂಡೀಸ್ ಟಿ20 ಸರಣಿಗೆ ಪ್ರಕಟಿಸಲಾದ ತಂಡದಲ್ಲಿ ಕಿಂಗ್ ಕೊಹ್ಲಿ ಹಾಗೂ ಕ್ಯಾಪ್ಟನ್ ರೋಹಿತ್ ಶರ್ಮಾರನ್ನ ಮತ್ತೆ ಕಡೆಗಣಿಸಲಾಗಿದೆ. ಅಲ್ಲಿಗೆ ಭವಿಷ್ಯದಲ್ಲಿ ಇಬ್ಬರಿಗೆ ಚಾನ್ಸ್ ನೀಡಲ್ಲ ಅನ್ನೋ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಕೊಹ್ಲಿ-ರೋಹಿತ್ ಜೋಡಿ 2022ರ ಟಿ20 ವಿಶ್ವಕಪ್ ಬಳಿಕ ತಂಡದಿಂದ ಹೊರಬಿದಿದ್ದಾರೆ.
ಪವರ್ ಹಿಟ್ಟರ್ ತಿಲಕ್ ವರ್ಮಾಗೆ ಫಸ್ಟ್ ಚಾನ್ಸ್
ಸರ್ಪ್ರೈಸ್ ಎಲಿಮೆಂಟ್ನಲ್ಲಿ ಐಪಿಎಲ್ ಸೂಪರ್ ಸ್ಟಾರ್ ತಿಲಕ್ ವರ್ಮಾಗೆ ಮೊದಲ ಬಾರಿ ಟಿ20 ತಂಡದಲ್ಲಿ ಸ್ಥಾನ ನೀಡಲಾಗಿದೆ. ಇನ್ನು ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದ ಯಶಸ್ವಿ ಜೈಸ್ವಾಲ್ ಹಾಗೂ ವೇಗಿ ಮುಖೇಶ್ ಕುಮಾರ್ಗೆ ಚುಟುಕು ತಂಡದಲ್ಲು ಸ್ಥಾನ ನೀಡಲಾಗಿದೆ.
ಸ್ಯಾಮ್ಸನ್ ಕಮ್ಬ್ಯಾಕ್, ಜಡೇಜಾಗೆ ರೆಸ್ಟ್
ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದ ಸಂಜು ಸ್ಯಾಮ್ಸನ್ ಟಿ20ಯಲ್ಲೂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವರ್ಷ ಶ್ರೀಲಂಕಾ ವಿರುದ್ಧ ಬಿಗ್ ಹಿಟ್ಟರ್ ಸ್ಯಾಮ್ಸನ್ ಕೊನೆ ಟಿ20 ಪಂದ್ಯವನ್ನಾಡಿದ್ರು. ಇವರ ಜೊತೆ ರವಿ ಬಿಷ್ನೋಯಿಗೂ ಕಮ್ಬ್ಯಾಕ್ ಮಾಡಿದ್ದಾರೆ. ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾಗೆ ವಿಂಡೀಸ್ ಟಿ20 ಸರಣಿಯಿಂದ ರೆಸ್ಟ್ ನೀಡಲಾಗಿದೆ. ಇವರ ಜೊತೆ ವೇಗಿ ಮೊಹಮ್ಮದ್ ಶಮಿಗೆ ಆಯ್ಕೆ ಸಮಿತಿ ವಿಶ್ರಾಂತಿ ನೀಡಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್