newsfirstkannada.com

ಎ.ಆರ್. ರೆಹಮಾನ್ ಸಂಗೀತ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ವಾ? ಅಸಲಿಗೆ ಅಂದು ನಡೆದಿದ್ದೇನು?

Share :

12-09-2023

    ಲೈವ್ ಆರ್ಕೆಸ್ಟ್ರಾಗಳಿಗೆ ನಾವು ಹೋಗೋದಿಲ್ಲ ಎಂದು ನೆಟ್ಟಿಗರ ಆಕ್ರೋಶ

    ಸೋಷಿಯಲ್ ಮೀಡಿಯಾದಲ್ಲಿ ತೇಲಾಡುತ್ತಿದೆ ಆಕ್ರೋಶ ಭರಿತ ಸಂದೇಶ

    ಅಷ್ಟಕ್ಕೂ ಆಸ್ಕರ್ ವಿನ್ನರ್​ ರೆಹಮಾನ್ ಗಾನ ಜಾತ್ರೆಯಲ್ಲಿ ಆಗಿದ್ದೇನು..?

ಚೆನ್ನೈ: ನಾವು ಕಳೆದ ಮೂವತ್ತು ವರ್ಷದಿಂದ ಅವರ ಸಂಗೀತಕ್ಕೆ ಅಭಿಮಾನಿ. ಆದ್ರೆ ಇನ್ಮುಂದೆ ಅವರ ಸಿನಿಮಾಗಳ ಹಾಡುಗಳನ್ನ ಕೇಳೋದಿಲ್ಲ. ಆ ವ್ಯಕ್ತಿಯ ಹಾಡುಗಳ ಲೈವ್ ಆರ್ಕೆಸ್ಟ್ರಾಗಳಿಗೆ ನಾವು ಹೋಗೋದಿಲ್ಲ. ತುಂಬಾ ಬೇಸರವಾಗಿದೆ ನಮಗೆ. ಈ ರೀತಿ ಆಕ್ರೋಶ ಸಂದೇಶಗಳು ಮ್ಯೂಸಿಕ್ ಡೈರೆಕ್ಟರ್ ಎ.ಆರ್ ರೆಹಮಾನ್ ವಿರುದ್ಧ ಕೇಳಿ ಬಂದಿದೆ. ಎ.ಆರ್.ರೆಹಮಾನ್ ಈ ಹೆಸರು ಸಿನಿಮಾ ಸಂಗೀತ ಲೋಕದಲ್ಲಿ ಟ್ರೆಂಡಿಂಗ್ ನೇಮ್.

ಇವತ್ತಿಗೂ ಈ ಮ್ಯಾಜಿಕಲ್ ಕಂಪೋಸರ್ ಹಾಡುಗಳು ಮ್ಯೂಸಿಕ್ ಲೋಕದ ಮೈಲ್ ಸ್ಟೋನ್ಸ್. ಇಂತಹ ಮ್ಯಾಜಿಕಲ್ ಕಂಪೋಸರ್ ಸಂಗೀತ ಕಾರ್ಯಕ್ರಮ ಇಡೀ ವರ್ಲ್ಡ್​ನಲ್ಲೇ ಫೇಮಸ್ ಆಗಿದ್ದಾರೆ. ಎ.ಆರ್ ಟೀಮ್ ಸಂಗೀತಗೋಷ್ಠಿಗೆ ಬರ್ತಿದೆ ಅಂತ ಗೊತ್ತಾದ್ರೆ ಸಾಕು ಸಾವಿರಾರು ಪ್ರೇಮಿಗಳು ಅಲ್ಲಿ ಜಮಾಯಿಸಿರುತ್ತಾರೆ.

ಅದೆಷ್ಟೋ ಟಿಕೆಟ್ ಬೆಲೆ ಆಗಿರಲಿ ಚೌಕಾಸಿ ಮಾಡದೆ ಟಿಕೆಟ್ ಕೊಂಡುಕೊಂಡು ಸಾಲಿನಲ್ಲೇ ಕುಳಿತುಕೊಂಡು ತಲೆ ಆಡಿಸೋಕೆ ರೆಡಿಯಾಗಿ ಬಿಡ್ತಾರೆ. ಎ.ಆರ್.ರೆಹಮಾನ್ ಕಳೆದ 20 ವರ್ಷದಿಂದ ವಿಶ್ವಾದ್ಯಂತ ಸಾವಿರಾರು ಲೈವ್ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆದರೆ ಎಲ್ಲಿಯೂ ಅಪಸ್ವರಗಳು ಜನರಿಂದ ಕೇಳಿ ಬಂದಿರಲಿಲ್ಲ. ಅಪರೂಪದಲ್ಲಿ ಅಪರೂಪ ಎಂಬುವಂತೆ ಎ.ಆರ್.ರೆಹಮಾನ್ ಅವರ ಲೈವ್ ಕಾರ್ಯಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

30 ವರ್ಷದಿಂದ ರೆಹಮಾನ್ ಮೇಲೆ ಇದ್ದ ಅಭಿಮಾನ ಸತ್ತು ಹೋಗಿದೆ. ಇನ್ಮುಂದೆ ರೆಹಮಾನ್ ಅವರ ಕಾರ್ಯಕ್ರಮಕ್ಕೆ ನಾವು ಬರೋದಿಲ್ಲ. ರೆಹಮಾನ್ ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇರೋದಿಲ್ಲ. ಹಿಂಗೆ ನಾನಾ ರೀತಿಯ ಆಕ್ರೋಶ ಬರಿತ ಸಂದೇಶಗಳು ಸೋಷಿಯಲ್ ಮೀಡಿಯಾದಲ್ಲಿ ತೇಲಾಡುತ್ತಿವೆ. ಇದಕ್ಕೆ ಕಾರಣ ಕಳೆದ ಭಾನುವಾರ ರಾತ್ರಿ ನಡೆದ ಕಾರ್ಯಕ್ರಮ ಅವ್ಯವಸ್ಥೆ.

ಇದನ್ನು ಓದಿ: ರಾಕಿಂಗ್​ ಸ್ಟಾರ್​ ಫ್ಯಾನ್ಸ್​​ಗೆ ಗುಡ್​ನ್ಯೂಸ್​​;​ ಯಶ್​19 ಚಿತ್ರಕ್ಕೆ ಹೀರೋಯಿನ್​ ಇವರೇನಾ..?

ಚೆನ್ನೈನ ಪಣೆಯೂರ್​ನ ಮರಕ್ಕುಮಾ ನೆಂಜಮ್​ನಲ್ಲಿ ಕಳೆದ ಭಾನುವಾರ ರಾತ್ರಿ ಎ.ಆರ್ ರೆಹಮಾನ್ ಲೈವ್ ಕಾನ್​​ಸೆಟ್ ಆಯೋಜನೆ ಆಗಿತ್ತು. ಒಂದಲ್ಲಾ ಎರಡಲ್ಲಾ ಒಟ್ಟು 50 ಸಾವಿರ ಜನ ಸೇರಿದ್ದರು. ಮಳೆ ಬೇರೆ ಜೊತೆಗೆ ನಾನು ಬರ್ತಿನಿ ನೋಡೋಕೆ ಅಂತ. ಅದರಲ್ಲಿ ಎಷ್ಟೋ ಜನ ಟಿಕೆಟ್​ ಇಲ್ಲದೆ ನುಗ್ಗಿದ್ದರು. ಆದ್ರೆ ಟಿಕೆಟ್​ ಹಿಡಿದು ಒಳಗೆ ಬರೋರಿಗೆ ಎಂಟ್ರಿಯೂ, ಮ್ಯೂಸಿಕ್ ಕೇಳುವ ಸೌಭಾಗ್ಯವೂ ಇಲ್ಲ. ಇತ್ತ ರಕ್ಷಣೆ ಕೊರತೆ, ತಳ್ಳಟಾ, ರಕ್ಷಣೆ ಇಲ್ಲದೆ ಹೆಣ್ಣುಮಕ್ಕಳ ಕಿರುಚಾಟ ಉಂಟಾಗಿದೆ.

ಮರಕ್ಕುಮಾ ನೆಂಜಮ್ ನಡೆದ ಎ.ಆರ್.ಆರ್ ಲೈವ್ ಕಾನ್​ಸೆಟ್ ಅವ್ಯವಸ್ಥೆಯ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿರೋ ಕಾರಣ ರೆಹಮಾನ್ ಮೌನರಾಗ ಬಿಟ್ಟು ಪ್ರತಿಕ್ರಿಯೆ ರಾಗವನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಡಿದ್ದಾರೆ. ಒಳ್ಳೆಯ ಕಾರ್ಯಕ್ರಮ ಕೊಡೋದು ನನ್ನ ಗುರಿ. ಆದ್ರೆ ವ್ಯವಸ್ಥೆ ಸರಿಯಾಗದೆ ಇರೋದಕ್ಕೆ ನಾನು ಕಾರಣನಾ? ನಿಮಗೆ ನೋವವಾಗಿದ್ದರೆ ಕ್ಷಮಿಸಿ, ನಿಮ್ಮ ಟಿಕೆಟ್​ ವಿವರವನ್ನ ನಮ್ಮ ತಂಡಕ್ಕೆ ಕಳುಹಿಸಿಕೊಡಿ. ಅಮೌಂಟ್ ರಿಟರ್ನ್ ಆಗುವಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಆಸ್ಕರ್ ವಿನ್ನರ್​ ರೆಹಮಾನ್ ಗಾನ ಜಾತ್ರೆ ಇಷ್ಟು ದಿನ ಸಾಂಗ್​​ಗಳಿಂದ ಸೌಂಡ್ ಮಾಡ್ತಾ ಇತ್ತು. ಆದ್ರೆ ಈಗ ಅವವ್ಯಸ್ಥೆಯಿಂದ ಸದ್ದು ಮಾಡಿದೆ. ನಿರೀಕ್ಷೆಗೂ ಮೀರಿದ ಜನ ಬಂದ್ರೆ, ಆಯೋಜಕರು ಸಾರಿಯಾದ ವ್ಯವಸ್ಥೆ ಮಾಡದೆ ಹೋದರೆ ಪಾಪ ರೆಹಮಾನ್ ಏನ್ ಮಾಡೋಕೆ ಆಗುತ್ತೆ. ಇನ್ನೂ ಮುಂದೆ ಆದರೂ ಆಯೋಜಕರು ಕೊಂಚ ಹೆಚ್ಚಿನ ಜಾಗ್ರತೆಯಿಂದ ಕಾರ್ಯಕ್ರಮ ಆಯೋಜನೆ ಮಾಡಿದ್ರೆ ಯಾರಿಗೂ ತೊಂದರೆ ಆಗೋದಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎ.ಆರ್. ರೆಹಮಾನ್ ಸಂಗೀತ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ವಾ? ಅಸಲಿಗೆ ಅಂದು ನಡೆದಿದ್ದೇನು?

https://newsfirstlive.com/wp-content/uploads/2023/09/ar-rehaman-1.jpg

Load More