ಆ 2 ಪ್ರಾಬ್ಲಮ್ಸ್ಗೆ ಬಗೆಹರಿದ್ರೆ ಭಾರತ ಪರ್ಫೆಕ್ಟ್
ಏಷ್ಯಾಕಪ್ನಿಂದ ಭಾರತಕ್ಕೆ ಆದ ಲಾಭವೇನು?
ಆಸಿಸ್ ಸರಣಿಯಲ್ಲಿ ಮಾಡಬೇಕಿರೋದೇನು?
ಮೋಸ್ಟ್ ಎಕ್ಸೈಟೆಡ್ ಏಕದಿನ ವಿಶ್ವಕಪ್ ಆರಂಭಕ್ಕೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಟೀಮ್ ಇಂಡಿಯಾದ ದಶಕದಿಂದ ಐಸಿಸಿ ಟ್ರೋಫಿ ಬರ ಎದುರಿಸ್ತಿದೆ. ಕಪ್ ಗೆಲ್ಲುವ ನಿಟ್ಟಿನಲ್ಲಿ ಮೆಗಾ ಟೂರ್ನಿಗೆ ರೋಹಿತ್ ಶರ್ಮಾ ಪಡೆಯ ಸಿದ್ಧತೆ ಹೇಗಿರಬೇಕು? ಇದಕ್ಕೆ ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾಕಪ್ನಿಂದ ಟೂರ್ನಿಯಲ್ಲಿ ಆನ್ಸರ್ ಸಿಕ್ಕಿದೆ.
ಟೀಮ್ ಇಂಡಿಯಾ ಏಷ್ಯಾಕಪ್ನಲ್ಲಿ ಬ್ರಿಲಿಯಂಟ್ ಪರ್ಫಾಮೆನ್ಸ್ ನೀಡಿ 8ನೇ ಬಾರಿ ಟ್ರೋಫಿ ಗೆದ್ದು ಚರಿತ್ರೆ ಸೃಷ್ಟಿಸಿತು. ಈ ವಿಕ್ಟರಿ ಏಕದಿನ ವಿಶ್ವಕಪ್ ಮುನ್ನ ತಂಡದಲ್ಲಿ ಮೋಟಿವೇಶನ್ ತುಂಬಿದೆ. ಜತೆಗೆ ಹಲವು ಪ್ರಶ್ನೆಗಳಿಗೆ ಆನ್ಸರ್ ಸಿಕ್ಕಿದ್ದು, ವಿಶ್ವಕಪ್ ಸಿದ್ಧತೆಯ ಹಾದಿ ಮತ್ತಷ್ಟು ಈಸಿಯಾಗಿದೆ. ಏಷ್ಯಾಕಪ್ ಗೆಲುವಿನಿಂದ ಯಾವೆಲ್ಲಾ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಅನ್ನೋದರ ವಿವರ ಇಲ್ಲಿದೆ.
ಕೆ.ಎಲ್ ರಾಹುಲ್ ಕಂಪ್ಲೀಟ್ ಫಿಟ್
ಏಷ್ಯಾಕಪ್ ಟೂರ್ನಿಗೂ ಮುನ್ನ ಕೆ.ಎಲ್ ರಾಹುಲ್ ಫಿಟ್ನೆಸ್ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡ ರಾಹುಲ್ ತಮ್ಮ ಬಗೆಗೆ ಎದ್ದಿದ್ದ ಎಲ್ಲಾ ಪ್ರಶ್ನೆಗಳಿಗೆ ತಿಲಾಂಜಲಿ ಇಟ್ಟಿದ್ದಾರೆ. ವಿಕೆಟ್ ಕೀಪಿಂಗ್ ಜೊತೆ ಬ್ಯಾಟಿಂಗ್ನಲ್ಲಿ ಮೆರಿಟ್ನಲ್ಲಿ ಪಾಸಾಗಿದ್ದಾರೆ. ಪಾಕ್ ವಿರುದ್ಧ ಫೆಂಟಾಸ್ಟಿಕ್ ಸೆಂಚುರಿ ಸಿಡಿಸಿದ್ರೆ ಲಂಕಾ ಹಾಗೂ ಬಾಂಗ್ಲಾ ವಿರುದ್ಧ ಇಂಪಾರ್ಟೆಂಟ್ ಇನ್ನಿಂಗ್ಸ್ ಕಟ್ಟಿ ಸೈ ಅನ್ನಿಸಿಕೊಂಡ್ರು.
ಮಿಡಲ್ ಆರ್ಡರ್ ಪ್ರಾಬ್ಲಮ್ಗೆ ಸಿಗ್ತು ಸೆಲ್ಯೂಷನ್
ಏಷ್ಯಾಕಪ್ ಮೊದಲು ಮಿಡಲ್ ಆರ್ಡರ್ನಲ್ಲಿ ಯಾರಾಡ್ತಾರೆ? ಹೇಗೆ ಆಡ್ತಾರೆ ? ಅನ್ನೋ ಪ್ರಶ್ನೆ ಗೊಂದಲ ಮನೆಮಾಡಿತ್ತು. ಈಗ ಎಲ್ಲದಕ್ಕೂ ಕ್ಲಾರಿಟಿ ಸಿಕ್ಕಿದೆ. ರಾಹುಲ್ 4 ಮತ್ತು 5ನೇ ಸ್ಲಾಟ್ನಲ್ಲಿ ಇಂಪ್ರೆಸ್ಸಿವ್ ಆಟವಾಡಿದ್ರು. ಕಿಶನ್ ಕೂಡ ಬೊಂಬಾಟ್ ಪರ್ಫಾಮೆನ್ಸ್ ನೀಡಿದ್ರು. ಒಂದು ವೇಳೆ ಶ್ರೇಯಸ್ ಅಯ್ಯರ್ ಫಿಟ್ ಆದರೆ ಕಿಶನ್ಗೆ ಬೆಂಚ್ ಗತಿಯಾಗಲಿದೆ. ಯಾಕಂದ್ರೆ ರಾಹುಲ್ ವಿಕೆಟ್ ಕೀಪರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ಸಾಲಿಡ್ ಫಾರ್ಮ್ನಲ್ಲಿ ಜಸ್ಪ್ರೀತ್ ಬೂಮ್ರಾ
ಸ್ಟಾರ್ ಬೌಲರ್ ಜಸ್ಪ್ರೀತ್ ಬೂಮ್ರಾ ಫಿಟ್ನೆಸ್ ಕೂಡ ಚರ್ಚೆಗೆ ಕಾರಣವಾಗಿತ್ತು. ಲಾಂಗ್ಟೈಮ್ ಬಳಿಕ ಒನ್ಡೇ ಮರಳಿದ ಯಾರ್ಕರ್ ಸ್ಪೆಷಲಿಸ್ಟ್ ಬ್ಯಾಕ್ ವಿತ್ ಬ್ಯಾಂಗ್ ಮಾಡಿದರು. ಕಂಪ್ಲೀಟ್ ಫಿಟ್ ಆ್ಯಂಡ್ ಫೈನ್ ಬೂಮ್ರಾ ಆಡಿದ 3 ಪಂದ್ಯಗಳಿಂದ 4 ವಿಕೆಟ್ ಕಬಳಿಸಿ ಶೈನ್ ಆದರು. ಅಲ್ಲಿಗೆ ಕೀ ಬೌಲರ್ ಐಯಮ್ ರೆಡಿ ಅನ್ನೋ ಸ್ಟ್ರಾಂಗ್ ಮೆಸೇಜ್ ರವಾನಿಸಿದ್ದಾರೆ.
ಕುಲ್ದೀಪ್ ಯಾದವ್ ಬೊಂಬಾಟ್ ಪರ್ಫಾಮೆನ್ಸ್
ಜೆನ್ಯೂನ್ ಸ್ಪಿನ್ನರ್ ಕುಲ್ದೀಪ್ ಯಾದವ್ಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಕುಲ್ದೀಪ್ ಏಷ್ಯಾಕಪ್ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಬದ್ಧವೈರಿ ಪಾಕ್ ಎದುರು 5 ವಿಕೆಟ್ ಪಡೆದು ಟ್ರ್ಯಾಪ್ ಮಾಡಿದ್ರು. 10 ವಿಕೆಟ್ ಕಬಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.
ಟಾಪ್ ಮೂರು ಬ್ಯಾಟ್ಸ್ಮನ್ಗಳಿಂದ ಟಾಪ್ ಆಟ..!
ಭಾರತದ ಬಿಗ್ಗೆಸ್ಟ್ ಸ್ಟ್ರೆಂಥ್ ಟಾಪ್ ಆರ್ಡರ್. ಟೂರ್ನಿಗೂ ಮುನ್ನ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳ ಅಸ್ಥಿರ ಪ್ರದರ್ಶನ ತಂಡಕ್ಕೆ ದೊಡ್ಡ ತೆಲನೋವು ಆಗಿತ್ತು. ಕ್ಯಾಪ್ಟನ್ ರೋಹಿತ್ 3 ಹಾಫ್ ಸೆಂಚುರಿ ಸಿಡಿಸಿ ಲಯಕ್ಕೆ ಮರಳಿದರು. ಕಿಂಗ್ ಕೊಹ್ಲಿ-ಶುಭ್ಮನ್ ಗಿಲ್ ಹಾಗೂ ಕೆ.ಎಲ್ ರಾಹುಲ್ ತಲಾ ಒಂದು ಶತಕ ಬಾರಿಸಿ ಹಳೇ ರಿದಮ್ ಕಂಡುಕೊಂಡರು. ಡೆಫಿನೆಟ್ಲಿ ಏಷ್ಯಾಕಪ್ನಲ್ಲಿ ಭಾರತ ಹಲವು ಪ್ರಶ್ನೆಗಳಿಗೆ ಆನ್ಸರ್ ಕಂಡುಕೊಂಡಿದೆ. ಆದರೆ ಅಕ್ಷರ್ ಪಟೇಲ್ ಹಾಗೂ ಶ್ರೇಯಸ್ ಅಯ್ಯರ್ ಫಿಟ್ನೆಸ್ ಟಾಪಿಕ್ ಬಿಟ್ಟು, ವಿಶ್ವಕಪ್ ಮುನ್ನ ಇವರ ಕಥೆ ಏನಾಗುತ್ತೆ? ಉತ್ತರಕ್ಕಾಗಿ ಸ್ವಲ್ಪ ದಿನ ಕಾಯಲೇಬೇಕಷ್ಟೇ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್