Advertisment

ಮುರುಘಾಶ್ರೀ ವಿರುದ್ಧ ಕಾನೂನು ಹೋರಾಟ.. ಸಂತ್ರಸ್ತರು, ಒಡನಾಡಿ ಸಂಸ್ಥೆ ಮುಂದಿನ ಆಯ್ಕೆಗಳೇನು?

author-image
admin
Updated On
ಮುರುಘಾಶ್ರೀ ವಿರುದ್ಧ ಕಾನೂನು ಹೋರಾಟ.. ಸಂತ್ರಸ್ತರು, ಒಡನಾಡಿ ಸಂಸ್ಥೆ ಮುಂದಿನ ಆಯ್ಕೆಗಳೇನು?
Advertisment
  • ಪೋಕ್ಸೋ ಕೇಸ್​ನಲ್ಲಿ 164 ಹೇಳಿಕೆಯ ಜಡ್ಜ್​ಮೆಂಟ್ ಉಲ್ಲೇಖಕ್ಕೆ ಚಿಂತನೆ
  • ಹೈಕೋರ್ಟ್‌ ಆದೇಶದ ಸರ್ಟಿಫೈಡ್ ಕಾಪಿ ಪಡೆಯಲಿರುವ ಸಂತ್ರಸ್ತರು
  • ಟ್ರಯಲ್ ಕೋರ್ಟ್ ಒಪ್ಪಿದ್ರೆ ಸ್ವಾಮೀಜಿ ರಿಲೀಸ್ ಆಗೋ ಸಾಧ್ಯತೆ ಇದ್ಯಾ?

ಬೆಂಗಳೂರು: ಅಪ್ರಾಪ್ತೆಯರಿಗೆ ಲೈಂಗಿಕ ದೌರ್ಜನ್ಯ ನೀಡಿದ ಪೋಕ್ಸೋ ಕೇಸ್‌ನಲ್ಲಿ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರು ಬಂಧನದಲ್ಲಿದ್ದಾರೆ. ನಿನ್ನೆ ಮುರುಘಾಶ್ರೀಗೆ ಒಂದು ಪ್ರಕರಣದಲ್ಲಿ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಆದ್ರೆ ಮತ್ತೊಂದು ಪೋಕ್ಸೋ ಕೇಸ್‌ನಲ್ಲಿ ಬೇಲ್ ಸಿಗೋವರೆಗೂ ಮುರುಘಾ ಶರಣರಿಗೆ ಬಿಡುಗಡೆಯ ಭಾಗ್ಯವಿಲ್ಲ.

Advertisment

ಮುರುಘಾ ಶ್ರೀಗಳಿಗೆ ಜಾಮೀನು ಸಿಕ್ಕ ಮೇಲೆ ಸಂತ್ರಸ್ತರು ಹಾಗೂ ಅಪ್ರಾಪ್ತೆಯರ ಪರವಾಗಿ ಹೋರಾಟ ನಡೆಸುತ್ತಿರುವ ಒಡನಾಡಿ ಸಂಸ್ಥೆ ಮುಂದಿನ ಹೋರಾಟ ಏನು ಅನ್ನೋದು ಕುತೂಹಲ ಕೆರಳಿಸಿದೆ. ಹೈಕೋರ್ಟ್‌ ಜಾಮೀನು ಸಿಕ್ಕ ಮಾಹಿತಿಯನ್ನು ಪಡೆದಿರುವ ಒಡನಾಡಿ ಸಂಸ್ಥೆ ಶ್ರೀಗಳ ವಿರುದ್ಧ ತಮ್ಮ ಹೋರಾಟ ಮುಂದುವರೆಸಲು ನಿರ್ಧಾರ ಮಾಡಿದೆ.

ಪೋಕ್ಸೋ ಕೇಸ್‌ನಲ್ಲಿ ಜಾಮೀನು ಮಂಜೂರು ಮಾಡಿರೋ ಹೈಕೋರ್ಟ್‌ ಆದೇಶದ ಸರ್ಟಿಫೈಡ್ ಕಾಪಿಯನ್ನು ಇಂದು ಸಂತ್ರಸ್ತರು ಪಡೆಯಲಿದ್ದಾರೆ. ಇದಾದ ಬಳಿಕ ಸ್ವಾಮೀಜಿ ವಿರುದ್ಧ ಕಾನೂನು ಹೋರಾಟ ಮುಂದುವರಿಸೋ ಸಾಧ್ಯತೆ ಇದೆ.

publive-image

ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲು ಚಿಂತನೆ

ಸಾಮಾನ್ಯವಾಗಿ ಕ್ರಿಮಿನಲ್ ಕೇಸ್​ನಲ್ಲಿ ಜಾಮೀನು ಅರ್ಜಿ ಮೇಲ್ಮನವಿಗೆ ಅವಕಾಶವಿಲ್ಲ. ಆದರೆ ಆರ್ಟಿಕಲ್ 136 ಅಡಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು. ಸುಪ್ರೀಂಕೋರ್ಟ್‌ಗೆ SLP ಅಂದ್ರೆ ಸ್ಪೆಷಲ್ ಲೀವ್ ಪಿಟೀಷನ್‌ ಹಾಕಲು ಅವಕಾಶವಿದೆ. ಅಲ್ಲಿಯೂ ಸಂತ್ರಸ್ತರ ಹೇಳಿಕೆಯನ್ನೇ ಆಧಾರವಾಗಿ ಬಳಸಿಕೊಂಡು ಪೋಕ್ಸೋ ಕೇಸ್​ನಲ್ಲಿ 164 ಹೇಳಿಕೆಯ ಜಡ್ಜ್​ಮೆಂಟ್ ಉಲ್ಲೇಖಕ್ಕೆ ಪ್ಲಾನ್ ಮಾಡಬಹುದಾಗಿದೆ. ಒಡನಾಡಿ ಸಂಸ್ಥೆ ಸಹಾಯದೊಂದಿಗೆ ಕಾನೂನು ಹೋರಾಟ ಮುಂದುವರಿಸಲು ಸಂತ್ರಸ್ತರು ಚಿಂತನೆ ನಡೆಸಿದ್ದಾರೆ.

Advertisment

ಎರಡನೇ ಕೇಸ್​ನಲ್ಲೂ ಬೇಲ್ ಸಿಗುತ್ತಾ? 

ಮುರುಘಾ ಶ್ರೀ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದೆ. ಒಂದರಲ್ಲಿ ಮಾತ್ರ ಬೇಲ್ ಸಿಕ್ಕಿರೋದ್ರಿಂದ ಬಿಡುಗಡೆ ಆಗಿಲ್ಲ. ಆದ್ರೆ ಎರಡನೇ ಪ್ರಕರಣದಲ್ಲಿ ಬಂಧನವಾಗಿಲ್ಲ ಎಂದು ಮುರುಘಾ ಶ್ರೀಗಳ ಪರ ವಕೀಲರ ವಾದ ಮಾಡುತ್ತಿದ್ದಾರೆ. ಎರಡನೇ ಎಫ್​ಐಆರ್​ನಲ್ಲಿ ಸ್ವಾಮೀಜಿ ಅರೆಸ್ಟ್ ಆಗಿಲ್ಲ. ಆ ಪ್ರಕರಣದಲ್ಲಿ ಬಾಡಿ ವಾರೆಂಟ್ ಮೂಲಕ ಕಸ್ಟಡಿಗೆ ಪಡೆದ ಬಳಿಕ ನ್ಯಾಯಾಂಗ ಬಂಧನಕ್ಕೆ ನೀಡಿದ್ರು. ಯಾವ ಕೇಸ್​ನಲ್ಲಿ ಕಸ್ಟಡಿಯಲ್ಲಿದ್ದಾರೂ ಅದಕ್ಕೆ ಬೇಲ್ ನೀಡಲಾಗಿದೆ. ಹೀಗಾಗಿ ಟ್ರಯಲ್ ಕೋರ್ಟ್ ಒಪ್ಪಿದ್ರೆ ಸ್ವಾಮೀಜಿ ಬಿಡುಗಡೆ ಆಗಲಿದೆ. ಇದು ಟ್ರಯಲ್ ಕೋರ್ಟ್ ನ್ಯಾಯಾಧೀಶರ ವಿವೇಚನೆಗೆ ಬಿಟ್ಟಿದ್ದು. ಇಲ್ಲದಿದ್ದರೆ ಎರಡನೇ ಕೇಸ್​ನಲ್ಲಿ ನಾವು ಹೈಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ನ್ಯೂಸ್ ಫಸ್ಟ್​ಗೆ ಮುರುಘಾ ಶ್ರೀಗಳ ಪರ ವಕೀಲರ ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment