newsfirstkannada.com

ವಿಶ್ವಕಪ್‌ ಗೆಲುವಿಗಾಗಿ ಟೊಂಕ ಕಟ್ಟಿ ನಿಂತ ರೋಹಿತ್ ಶರ್ಮಾ, ವಿರಾಟ್‌ ಕೊಹ್ಲಿ; ಇವರಿಬ್ಬರ ಮೇಲೆ ಯಾರ ಕಣ್ಣು ಬೀಳದಿರಲಪ್ಪಾ!

Share :

08-11-2023

    ಟೀಮ್ ಇಂಡಿಯಾಗೆ ಗೆಲುವಿನ ಹಿಂದಿರೋದು ಜೋಡೆತ್ತು

    ರೋಹಿತ್ ಫೇಲಾದ್ರೆ ಕೊಹ್ಲಿ.. ಕೊಹ್ಲಿ ಫೇಲಾದ್ರೆ ರೋಹಿತ್

    ಜವಾಬ್ದಾರಿ ವಹಿಸಿ ಆಡ್ತಿದ್ದಾರೆ ವಿರಾಟ್​ & ರೋಹಿತ್ ಶರ್ಮಾ

ವಿಶ್ವಕಪ್​ ಗೆಲ್ಲಬೇಕು ಅನ್ನೋದು ಎಲ್ಲರ ಅಲ್ಟಿಮೇಟ್​ ಕನಸು. ಆದ್ರೆ, ಇದ್ರ ಹೊರತಾಗಿ ಸದ್ಯ ಅಸಂಖ್ಯ ಟೀಮ್​ ಇಂಡಿಯಾ ಅಭಿಮಾನಿಗಳದ್ದು ಒಂದೇ ಪ್ರಾರ್ಥನೆ. ಇವರಿಬ್ಬರ ಮೇಲೆ ಯಾರ ಕಣ್ಣು ಬೀಳದಿರಲಪ್ಪಾ ಅನ್ನೋದು ಎಲ್ಲರ ಬೇಡಿಕೆ. ಏನಪ್ಪಾ ಇದು ಹೊಸ ಕಥೆ ಅಂತೀರಾ.? ಇಲ್ಲಿದೆ ನೋಡಿ ಒಂದು ಸ್ಪೆಷಲ್​ ಸ್ಟೋರಿ.

ಟೀಮ್ ಇಂಡಿಯಾ ವಿಶ್ವಕಪ್​ನಲ್ಲಿ ಅಕ್ಷರಶಃ ದಂಡಯಾತ್ರೆ ನಡೆಸ್ತಿದೆ. ಬಲಿಷ್ಠ ತಂಡಗಳು ಸುಲಭದ ತುತ್ತಾಗುತ್ತಿವೆ. ಟೀಮ್ ಇಂಡಿಯಾದ ರಣಾರ್ಭಟದ ಮುಂದೆ ಮಂಡಿಯೂರುತ್ತಾ ಶರಣಾಗ್ತಿವೆ. ಇದೆಲ್ಲಕ್ಕೂ ರೀಸನ್. ಆ ಇಬ್ಬರೇ.. ಅವ್ರೇ ವಿಶ್ವ ಕ್ರಿಕೆಟ್​ನ ಹಿಟ್​ಮ್ಯಾನ್ ರೋಹಿತ್ ಆ್ಯಂಡ್ ಕಿಂಗ್​ ​ ಕೊಹ್ಲಿ. ಇವ್ರೇ ಟೀಮ್ ಇಂಡಿಯಾ ಸಕ್ಸಸ್​ ಕೀ.. ಹಾಲಿ ಕ್ಯಾಪ್ಟನ್ ಹಾಗೂ ಮಾಜಿ ನಾಯಕನ ಆಟವೇ ಟೀಮ್ ಇಂಡಿಯಾ ಗೆಲುವಿನ ಸೂತ್ರ.. ಇದಕ್ಕೆಲ್ಲ ಕಾರಣ ವಿಶ್ವಕಪ್​ನಲ್ಲಿ ಹಿಟ್​ಮ್ಯಾನ್ ರೋಹಿತ್​ ಹಾಗೂ ಕಿಂಗ್ ಕೊಹ್ಲಿಯ ಜವಾಬ್ದಾರಿಯುತ ಆಟದ ಪರಿ.

ತಂಡದ ಗೆಲುವಿಗೆ ಟೊಂಕ ಕಟ್ಟಿನಿಂತ ರೋಹಿತ್-ವಿರಾಟ್​

ಈ ಟೂರ್ನಿಯ ಮೊದಲ ಪಂದ್ಯದಿಂದ ನಾವ್ ಗಮನಿಸ್ತಿದ್ದೇವೆ. ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿಯ ಆಟದಲ್ಲೇ ಗೊತ್ತಾಗ್ತಿದೆ. ಈ ಸಲ ವಿಶ್ವಕಪ್​ ಗೆಲುವಿಗೆ ಈ ಇಬ್ಬರು ಟೊಂಕ ಕಟ್ಟಿ ನಿಂತಿದ್ದಾರೆ ಅನ್ನೋದು.. ಇದಕ್ಕೆ ಬೆಸ್ಟ್​ ಎಕ್ಸಾಂಪಲ್ ಇವರಿಬ್ಬರ ಆಟ. ರೋಹಿತ್ ಬಿಗ್ ಇನ್ನಿಂಗ್ಸ್​ ಕಟ್ಟೋದ್ರಲ್ಲಿ ಎಡವಿದ್ರೆ, ವಿರಾಟ್​ ಇನ್ನಿಂಗ್ಸ್ ಬಿಲ್ಡ್​ ಮಾಡ್ತಿದ್ದಾರೆ. ವಿರಾಟ್​ ಕೊಹ್ಲಿ ಬೇಗಾ ಔಟಾದ್ರೆ, ರೋಹಿತ್ ರೆಸ್ಪಾಸಿಬಲ್ ಇನ್ನಿಂಗ್ಸ್​ ಕಟ್ಟುತ್ತಿದ್ದಾರೆ. ಟೂರ್ನಿಯ ಆರಂಭಿಕ ಪಂದ್ಯದಿಂದ ಇಲ್ಲಿಯ ತನಕ ಆಗಿರೋದು ಇದೆ. ಸತತ 8 ಗೆಲುವುಗಳ ಸಿಕ್ರೇಟ್​ ಕೂಡ ಇದೆ.

ವಿಶ್ವಕಪ್​ನಲ್ಲಿ ರೋಹಿತ್ & ಕೊಹ್ಲಿ
ರೋಹಿತ್ ಎದುರಾಳಿ ವಿರಾಟ್ ಕೊಹ್ಲಿ

00 ಆಸ್ಟ್ರೇಲಿಯಾ 85
131 ಅಫ್ಘಾನಿಸ್ತಾನ 55*
86 ಪಾಕಿಸ್ತಾನ 16
48 ಬಾಂಗ್ಲಾದೇಶ 103*
46 ನ್ಯೂಜಿಲೆಂಡ್ 95
87 ಇಂಗ್ಲೆಂಡ್​ 00
04 ಶ್ರೀಲಂಕಾ 88
40 ಸೌತ್​ ಆಫ್ರಿಕಾ 101*

ಆಸ್ಟ್ರೇಲಿಯಾ ಎದುರಿನ ಮೊದಲ ಪಂದ್ಯದಲ್ಲಿ ರೋಹಿತ್, ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರೆ. ಕೊಹ್ಲಿ 85 ರನ್​ಗಳ ಅಮೋಘ ಇನ್ನಿಂಗ್ಸ್ ಕಟ್ಟಿದ್ರು. ಅಫ್ಘಾನ್ ಎದುರು ರೋಹಿತ್ 131 ರನ್​ಗಳ ಆಟವಾಡಿದ್ರೆ. ವಿರಾಟ್​ ಅಜೇಯ 55 ರನ್​​ಗಳ ಇನ್ನಿಂಗ್ಸ್ ಕಟ್ಟಿದ್ರು. ಪಾಕ್ ಎದುರು ರೋಹಿತ್ 86 ರನ್ ಸಿಡಿಸಿದ್ರೆ. ಕೊಹ್ಲಿ 16 ರನ್​ಗಳಿಗೆ ವಿಕೆಟ್ ಒಪ್ಪಿಸಿದ್ರು. ಬಾಂಗ್ಲಾ ಎದುರು ರೋಹಿತ್ 48, ನ್ಯೂಜಿಲೆಂಡ್ ಎದುರು 46 ರನ್​ಗಳಿಗೆ ಔಟಾದ್ರೆ. ವಿರಾಟ್​ ಅಜೇಯ 103 ಹಾಗೂ 95 ರನ್ ದಾಖಲಿಸಿದ್ದರು. ಇನ್ನು ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ರೋಹಿತ್, 87 ರನ್​ಗಳ ಅಮೋಘ ಇನ್ನಿಂಗ್ಸ್ ಕಟ್ಟಿದ್ರೆ. ವಿರಾಟ್​ ಶೂನ್ಯಕ್ಕೆ ಪವಿಲಿಯನ್ ಸೇರಿದ್ರು. ನಂತರದ ಲಂಕಾ ಎದುರು 4 ರನ್​ಗೆ ವಿಕೆಟ್ ಒಪ್ಪಿಸಿ ರೋಹಿತ್ ವೈಫಲ್ಯ ಕಂಡ್ರೆ, ವಿರಾಟ್ 88 ರನ್ ಸಿಡಿಸಿದ್ರು. ಇನ್ನು ಸೌತ್ ಆಫ್ರಿಕಾ ಎದುರಿನ 8ನೇ ಮ್ಯಾಚ್​ನಲ್ಲಿ ರೋಹಿತ್​ 40 ರನ್​ಗೆ ಆಟ ಮುಗಿಸಿದ್ರೆ. ಕೊಹ್ಲಿ ಅಜೇಯ 101 ರನ್​ಗಳ ಭರ್ಜರಿ ಇನ್ನಿಂಗ್ಸ್​ ಕಟ್ಟಿದ್ರು. ಈ ಇನ್ನಿಂಗ್ಸ್​ಗಳೇ ರೋಹಿತ್ ಪೇಲಾದಾಗ ಕೊಹ್ಲಿ.. ಕೊಹ್ಲಿ ಪೇಲಾದಾಗ ರೋಹಿತ್ ಜವಾಬ್ದಾರಿಯುವ ಇನ್ನಿಂಗ್ಸ್​ ಕಟ್ಟುತ್ತಿರೋದನ್ನ ಸಾಬೀತು ಪಡೆಸ್ತಿದೆ.

ಸೆನ್ಸೇಷನ್​ ಸೃಷ್ಟಿಸಿದ ಕೊಹ್ಲಿ -ರೋಹಿತ್ ‘ಬ್ರೊಮ್ಯಾನ್ಸ್’.!
ಸಕ್ಸಸ್​, ಫೇಲ್ಯೂರ್​​.. ಎಲ್ಲದರಲ್ಲೂ ನಾವು ಒಂದೇ.!

ಸೋಷಿಯಲ್​​ ಮೀಡಿಯಾದಲ್ಲಿರೋ ಟ್ರೆಂಡಿಂಗ್​ ಟಾಪಿಕ್​ ಒಂದೇ.! ಯಾವುದೇ ಸೋಷಿಯಲ್​ ಒಪನ್​ ಮಾಡಿದ್ರೆ ಸಾಕು ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಬ್ರೊ ಮ್ಯಾನ್ಸ್​ನ ಸಾಲು – ಸಾಲು ಪೋಸ್ಟ್​​​ಗಳು ಬರ್ತಿವೆ. ಅಷ್ಟರ ಮಟ್ಟಿಗೆ ಕಿಂಗ್​ ಕೊಹ್ಲಿ – ಹಿಟ್​ಮ್ಯಾನ್​ ರೋಹಿತ್​​ರ ಬ್ರೊಮ್ಯಾನ್ಸ್​ ಸೆನ್ಸೇಷನ್​ ಸೃಷ್ಟಿಸಿದೆ. ಅಷ್ಟೇ ಅಲ್ಲ.! ವಿಶ್ವಕಪ್​ ಆರಂಭಿಕ ಪಂದ್ಯದಿಂದ ಈವರೆಗೆ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಒಟ್ಟಾಗಿ ಹೆಜ್ಜೆ ಹಾಕ್ತಿದ್ದಾರೆ. ಸಕ್ಸಸ್​ ಹಾಗೂ ಫೇಲ್ಯೂರ್​ ಎರಡರಲ್ಲೂ ಜೊತೆಯಾಗಿ ನಿಲ್ತಿದ್ದಾರೆ. ಒಬ್ಬರ ಯಶಸ್ಸನ್ನ ಇನ್ನೊಬ್ಬರು ಸಂಭ್ರಮಿಸ್ತಿದ್ದಾರೆ. ರೋಹಿತ್​ ಸೆಂಚುರಿ ಹೊಡೆದ್ರೆ, ಕೊಹ್ಲಿ ಖುಷಿ ಪಡ್ತಾರೆ. ಶತಕದ ಅಂಚಿನಲ್ಲಿ ಕೊಹ್ಲಿ ಔಟಾದ್ರೆ, ರೋಹಿತ್​ ಬೇಸರ ಹೊರ ಹಾಕ್ತಿದ್ದಾರೆ.

ರೋಹಿತ್​ – ಕೊಹ್ಲಿ ಆಟ, ಟೀಮ್​ ಇಂಡಿಯಾದ ಬಲ​.!

ಆಟದ ವಿಚಾರದಲ್ಲೂ ರೋಹಿತ್​ ಶರ್ಮಾ – ವಿರಾಟ್​ ಕೊಹ್ಲಿ ಟೀಮ್​ ಇಂಡಿಯಾದ ಬಲವಾಗಿ ನಿಂತಿದ್ದಾರೆ. ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ ನೀಡ್ತಾ ಇರೋ ಇವರಿಬ್ರು, ರನ್​ ಕೊಳ್ಳೆ ಹೊಡೀತಿದ್ದಾರೆ. ಸಂಕಷ್ಟದ ಸಮಯದಲ್ಲಿ ತಂಡದ ಬೆನ್ನೆಲುಬಾಗಿ ನಿಂತು ಹೋರಾಟ ನಡೆಸ್ತಿದ್ದಾರೆ. ಇಗೋ ಕ್ಲ್ಯಾಶ್‌ಗೆ ಬ್ರೇಕ್​ ಬಿದ್ದಿದ್ರೂ, ರನ್ ​ಗಳಿಕೆಯ ವಿಚಾರದಲ್ಲಿ ಹೆಲ್ದಿ ಫೈಟ್​ ನಡೆಸ್ತಿದ್ದಾರೆ. ಹೀಗಾಗಿ ಇವರಿಬ್ಬರ ಒಗ್ಗಟ್ಟೇ ಟೀಮ್​ ಇಂಡಿಯಾದ ಯಶಸ್ಸಿನ ಗುಟ್ಟು ಅಂದ್ರೂ ತಪ್ಪಾಗಲ್ಲ. ಹೀಗಾಗಿಯೇ ಇವರಿಬ್ಬರ ಮೇಲೆ ಯಾರ ಕಣ್ಣೂ ಬೀಳದಿರಲಿ ಅನ್ನೋ ಪ್ರಾರ್ಥನೆಯನ್ನ ಫ್ಯಾನ್ಸ್​ ಮಾಡ್ತಿರೋದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶ್ವಕಪ್‌ ಗೆಲುವಿಗಾಗಿ ಟೊಂಕ ಕಟ್ಟಿ ನಿಂತ ರೋಹಿತ್ ಶರ್ಮಾ, ವಿರಾಟ್‌ ಕೊಹ್ಲಿ; ಇವರಿಬ್ಬರ ಮೇಲೆ ಯಾರ ಕಣ್ಣು ಬೀಳದಿರಲಪ್ಪಾ!

https://newsfirstlive.com/wp-content/uploads/2023/10/VIRAT_KOHLI_ROHIT.jpg

Load More