ಬ್ರದರ್ ನಾನೂ ಸೋತಿದ್ದೇನೆ ಮತ್ತೆ ಗೆಲ್ಲೋಕೆ ಹೋರಾಟ ಮಾಡುತ್ತಿದ್ದೇನೆ
ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿದ್ದಕ್ಕೆ ಕಾರಣಗಳು ಏನು?
ಇನ್ನೊಂದು ವರ್ಷದಲ್ಲಿ ಕಾಂಗ್ರೆಸ್ ವಿರೋಧ ಅಲೆ ಎಳುವ ಸಾಧ್ಯತೆ ಇದೆ
ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆ ಹಾಗೂ ರಾಮನಗರ ವಿಧಾನಸಭಾ ಚುನಾವಣೆಯಲ್ಲೂ ಸೋತ ಬಳಿಕ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಮುಂದಿನ ಚುನಾವಣೆಗಳ ಬಗ್ಗೆ ದಳಪತಿಗಳು ಚಿಂತನೆ ನಡೆಸುತ್ತಿರುವಾಗ ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ಡೋಂಟ್ ವರಿ ಬ್ರದರ್ ಅಂತಾ ಕೆಲವೊಂದು ಟಿಪ್ಸ್‌ಗಳನ್ನ ಕೊಟ್ಟಿದ್ದಾರೆ.
ಎರಡು ದಿನದ ಹಿಂದಷ್ಟೇ ನಿಖಿಲ್ ಕುಮಾರಸ್ವಾಮಿ ಹಾಗೂ ಅಖಿಲೇಶ್ ಯಾದವ್ ಭೇಟಿಯಾಗಿ ಮಹತ್ವದ ರಾಜಕೀಯ ಚರ್ಚೆ ನಡೆಸಿದ್ದಾರೆ. ಮೂರು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿರೋ ಉಭಯ ನಾಯಕರು, ರಾಜ್ಯ ರಾಜಕಾರಣ, ವಿಧಾನಸಭಾ ಚುನಾವಣೆಯ ಸೋಲು, ಗೆಲುವಿನ ಸಂಪೂರ್ಣ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಈ ವೇಳೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಅಖಿಲೇಶ್ ಒಂದಷ್ಟು ಸಲಹೆಗಳನ್ನೂ ಕೊಟ್ಟಿದ್ದಾರೆ ಎನ್ನಲಾಗಿದೆ.
ನಿಖಿಲ್ಗೆ ಅಖಿಲೇಶ್ ಕೊಟ್ಟ ಸಲಹೆಗಳೇನು?
ನಿಖಿಲ್ ಕುಮಾರಸ್ವಾಮಿ ಸೋಲಿನ ಬಗ್ಗೆಯೇ ಹೆಚ್ಚು ಮಾತನಾಡಿರುವ ಅಖಿಲೇಶ್ ಯಾದವ್, ವಿಧಾನಸಭೆ ಚುನಾವಣೆಯ ಸೋಲಿನ ಬಗ್ಗೆ ತಲೆ ಕೆಡಸಿಕೊಳ್ಳಬೇಡಿ ಬ್ರದರ್ ಎಂದು ಹೇಳಿದ್ದಾರೆ. ರಾಮನಗರದಲ್ಲಿ ನೀವು ಸೋತಿರುವುದಕ್ಕೂ ಆತಂಕ ಪಡುವುದು ಬೇಡ. ಸೋಲು ರಾಜಕೀಯದಲ್ಲಿ ಸಾಮಾನ್ಯ, ಗೆಲ್ಲುವುದಕ್ಕೆ ದಾರಿ ತೋರಿಸುತ್ತೆ. ನಾನೂ ಸೋತಿದ್ದೇನೆ, ಮತ್ತೆ ಗೆಲ್ಲೋಕೆ ಹೋರಾಟ ಮಾಡುತ್ತಿದ್ದೇನೆ ಎಂದಿದ್ದಾರೆ.
ಜೆಡಿಎಸ್ಗೆ ತನ್ನದೇ ಇತಿಹಾಸವಿದೆ. ನಿಮ್ಮ ತಾತ ಪ್ರಧಾನಿ, ತಂದೆ 2 ಬಾರಿ ಸಿಎಂ ಆದವರು. ಕರ್ನಾಟಕದಲ್ಲಿ ನಿಮ್ಮದೇ ವರ್ಚಸ್ಸಿದೆ. ಅದನ್ನ ಇನ್ನಷ್ಟು ಹೆಚ್ಚು ಮಾಡಿಕೊಳ್ಳಿ. ಲೋಕಸಭೆ, ಸ್ಥಳೀಯ ಸಂಸ್ಥೆ ಚುನಾವಣೆಗೆ ಒತ್ತು ನೀಡಿ ಪಕ್ಷ ಸಂಘಟನೆ ಮಾಡಿ. ಪ್ರಧಾನಿ ಮೋದಿ ಅಲೆ ಈಗ ಅಷ್ಟಿಲ್ಲ, ವರ್ಷದಲ್ಲಿ ಕಾಂಗ್ರೆಸ್ ವಿರೋಧ ಅಲೆ ಎಳುವ ಸಾಧ್ಯತೆ ಇದೆ. ಪ್ರಾದೇಶಿಕ ಪಕ್ಷಗಳು ರಾಜ್ಯಗಳಿಗೆ ಅವಶ್ಯಕತೆ ಇದ್ದು, ಸಂಘಟನೆಯತ್ತ ಗಮನ ಹರಿಸಿ. ನೀವಿನ್ನೂ ಯುವಕರು, ನಿಮಗೆ ರಾಜಕೀಯದಲ್ಲಿ ಭವಿಷ್ಯವಿದ್ದು ಪಕ್ಷ ಟ್ರ್ಯಾಕ್ಗೆ ತನ್ನಿ. ಜೆಡಿಎಸ್ ಪಕ್ಷ ಸಂಘಟನೆಯ ಕಡೆಗೆ ಗಮನವನ್ನ ಕೊಡಿ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿದ್ದು ಹೇಗೆ?
ಅಖಿಲೇಶ್, ನಿಖಿಲ್ ಮಧ್ಯೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವೇನೆಂಬ ಬಗ್ಗೆಯೂ ಚರ್ಚೆಯಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಹಿಡಿದಿದ್ದು 5 ಗ್ಯಾರಂಟಿಗಳು ಎಂದು ಅಖಿಲೇಶ್ ಯಾದವ್ಗೆ ನಿಖಿಲ್ ಕುಮಾರಸ್ವಾಮಿ ಮಾಹಿತಿ ನೀಡಿದ್ರು. ಅಲ್ಪಸಂಖ್ಯಾತ, ಹಿಂದುಳಿದ, ದಲಿತ ಮತಗಳು ಕಾಂಗ್ರೆಸ್ಗೆ ಬಿದ್ದಿವೆ. ಜೊತೆಗೆ ಕಾಂಗ್ರೆಸ್ ಬಿಜೆಪಿ ವಿರುದ್ಧ ಸತತ ಹೋರಾಟವನ್ನ ನಡೆಸಿತ್ತು. ಸತತ ಮೂರುವರೆ ವರ್ಷದಲ್ಲಿ ಬಿಜೆಪಿ ವಿರುದ್ಧ ಸಾಕಷ್ಟು ಆರೋಪಗಳಿದ್ದವು. 40% ಕಮಿಷನ್, ಪಿಎಸ್ಐ ಹಗರಣ ಸೇರಿದಂತೆ ಹಲವು ಆರೋಪಗಳ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಿದೆ. ಇದರ ಜೊತೆಗೆ ಹಿರಿಯ ನಾಯಕರಿಗೆ ಬಿಜೆಪಿಯಲ್ಲಿ ಟಿಕೆಟ್ ಕೊಡಲಿಲ್ಲ. ಲಿಂಗಾಯತ ನಾಯಕರನ್ನ ಕಡೆಗಣಿಸಿದ್ದು ಕೂಡ ಬಿಜೆಪಿಗೆ ಮುಳುವಾಯ್ತು ಎಂದು ನಿಖಿಲ್ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ