newsfirstkannada.com

JDS ಭದ್ರಕೋಟೆಯಲ್ಲಿ ಭರ್ಜರಿ ರೌಂಡ್​ ಹಾಕಿದ ಬಿ.ವೈ ವಿಜಯೇಂದ್ರ; ಮಂಡ್ಯದಿಂದಲೇ ಮೈತ್ರಿಗೆ ಹೊಸ ತಂತ್ರ!

Share :

21-11-2023

  ಮಂಡ್ಯದಲ್ಲಿ ಬಿಜೆಪಿ ಕ್ಯಾಪ್ಟನ್​​ಗೆ ಅದ್ಧೂರಿ ಸ್ವಾಗತಿಸಿದ ಕಾರ್ಯಕರ್ತರು

  ವಿಜಯೇಂದ್ರ ಱಲಿಯಲ್ಲಿ ಎಲ್ಲೂ ಕಾಣಿಸಿಕೊಳ್ಳದ ಸಂಸದೆ ಸುಮಲತಾ

  ನವೆಂಬರ್​​ 29ರ ನಂತರ ದೆಹಲಿಯಲ್ಲಿ ಮೈತ್ರಿ ಸಂಬಂಧ ಮಹತ್ವದ ಚರ್ಚೆ

ಮಂಡ್ಯ: ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಬಿ.ವೈ.ವಿಜಯೇಂದ್ರ ಮೊದಲ ಬಾರಿಗೆ ಮಂಡ್ಯ ಜಿಲ್ಲೆಗೆ ಭೇಟಿ ಕೊಟ್ಟಿದ್ದಾರೆ. ಬಿಜೆಪಿ ಕ್ಯಾಪ್ಟನ್​​​ಗೆ ತಮ್ಮ ಬಿಜೆಪಿ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದ್ರು. ಮಂಡ್ಯದ ಸಂಜಯ್ ವೃತ್ತದಲ್ಲಿ ಕ್ರೇನ್ ಮೂಲಕ ಬೃಹತ್ ಮೂಸಂಬಿ ಹಾರವನ್ನ ಹಾಕಿದ ಬಿಜೆಪಿ ಕಾರ್ಯಕರ್ತರು, ಪೂರ್ಣಕುಂಭ ಸ್ವಾಗತವನ್ನ ಕೋರಿದರು. ಆದ್ರೆ, ಕಳೆದ ಎಲೆಕ್ಷನ್​​ನಲ್ಲಿ ಕಮಲ ಮುಡಿದ ಸಂಸದೆ ಸುಮಲತಾ ಗೈರು ಮಾತ್ರ ಎದ್ದು ಕಾಣಿಸಿತು.

ಮಂಡ್ಯದಲ್ಲಿ ಭರ್ಜರಿ ರೌಂಡ್​ ಹಾಕಿದ ಬಿ.ವೈ.ವಿಜಯೇಂದ್ರ!
ಬಿಜೆಪಿ ಕ್ಯಾಪ್ಟನ್​​ಗೆ ಅದ್ಧೂರಿ ಸ್ವಾಗತಿಸಿದ ಕಾರ್ಯಕರ್ತರು!

ಮಂಡ್ಯಕ್ಕೆ ಆಗಮಿಸಿದ ವಿಜಯೇಂದ್ರರನ್ನ ಸಂಜಯ್ ವೃತ್ತದಿಂದ ಬಿಜೆಪಿ ಕಚೇರಿವರೆಗೆ ಮೆರವಣಿಗೆಯಲ್ಲಿ ಕರೆತರಲಾಯ್ತು. ಮೆರವಣಿಗೆ ಉದ್ದಕ್ಕೂ ಕಾರ್ಯಕರ್ತರಿಂದ ಜೈಕಾರ ಮೊಳಗಿತು. ಮೆರವಣಿಗೆಗೆ ಜಾನಪದ ಕಲಾತಂಡಗಳ ಮೆರಗು ತಂದವು. ಬಿಜೆಪಿ ಕಚೇರಿಗೆ ಆಗಮಿಸ್ತಿದ್ದಂತೆ ಬಿಜೆಪಿ ಕಾರ್ಯಕರ್ತೆಯರು ಆರತಿ ಬೆಳಗಿ ಸ್ವಾಗತ ಕೋರಿದರು. ಹೀಗೆ ಗ್ರ್ಯಾಂಡ್ ವೆಲ್​ಕಮ್​ ಸ್ವೀಕರಿಸಿದ ವಿಜಯೇಂದ್ರ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ವಿರುದ್ದ ಹರಿಹಾಯ್ದರು.‌ ಮಿತ್ರ ಪಕ್ಷ ಜೆಡಿಎಸ್​ ಜೊತೆ ಸೇರಿ ಒಗ್ಗಟ್ಟಿನ ಹೋರಾಟ ನಡೆಸೋದಾಗಿ ಗುಡುಗಿದ್ದಾರೆ.

ಇದೇ ನವೆಂಬರ್​​ 22 ಮತ್ತು 23ಕ್ಕೆ ಮೈತ್ರಿ ಸಂಬಂಧ ಮಾಜಿ ಸಿಎಂ ಕುಮಾರಸ್ವಾಮಿಗೆ ಬಿಜೆಪಿ ಹೈಕಮಾಂಡ್​ ಬುಲಾವ್​ ನೀಡಿದೆ ಎನ್ನಲಾಗಿದೆ. ಈ ಬಗ್ಗೆ ಮಾತ್ನಾಡಿದ ವಿಜಯೇಂದ್ರ, ಈ ಬಗ್ಗೆ ನನಗೆ ಮಾಹಿತಿ‌ ಇಲ್ಲ. ಸದ್ಯಕ್ಕೆ ರಾಷ್ಟ್ರೀಯ ನಾಯಕರು ಪಂಚ ರಾಜ್ಯ ಎಲೆಕ್ಷನ್​​​ನಲ್ಲಿ ಬ್ಯುಸಿ ಇದ್ದಾರೆ. ನವೆಂಬರ್​​ 29ರ ನಂತರ ನಾನು ದೆಹಲಿಗೆ ಹೋಗುತ್ತೇನೆ ಅಂತ ತಿಳಿಸಿದರು.

ಮಂಡ್ಯದಲ್ಲಿ ಬಿಜೆಪಿ ಕ್ಯಾಪ್ಟನ್​​ ವಿಜಯೇಂದ್ರ ರೌಂಡ್ಸ್​​!
ವಿಜಯೇಂದ್ರ ಱಲಿಯಲ್ಲಿ ಕಾಣಿಸಿಕೊಳ್ಳದ ಸುಮಲತಾ!

ಮೊದಲ ಸಲ ಮಂಡ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರ ಆಗಮನ ಆಗಿದೆ. ಇಡೀ ಮಂಡ್ಯದ ಬಿಜೆಪಿ ಪಡೆಯೇ ವಿಜಯೇಂದ್ರ ಸ್ವಾಗತಕ್ಕೆ ನಿಂತಿದೆ. ಆದ್ರೆ, ಸಂಸದೆ ಸುಮಲತಾ ಅಂಬರೀಶ್​​​ ಮಾತ್ರ ಈ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ.

ಸಂಸದೆ ಸುಮಲತಾಗೆ ಕಾರ್ಯಕ್ರಮಕ್ಕೆ ಆಹ್ವಾನ ಇರಲಿಲ್ವಾ ಎಂಬ ಪ್ರಶ್ನೆ ಇದೆ. ಆಹ್ವಾನ ನೀಡಿದರೂ ಕಾರ್ಯಕ್ರಮದಿಂದ ದೂರ ಉಳಿದರಾ? ಜೆಡಿಎಸ್​​​ ಜೊತೆಗೆ ಮೈತ್ರಿ ಕಾರಣಕ್ಕೆ ಸುಮಲತಾ ಮುನಿಸಿಕೊಂಡ್ರಾ ಅನ್ನೋ ಅನುಮಾನ ಇದೆ. ಒಂದು ವೇಳೆ ಆಹ್ವಾನಿಸಿದರೆ ದಳಪತಿ ಕೋಪಕ್ಕೆ ಗುರಿ ಆಗಬೇಕಾದಿತು ಎಂಬ ಲೆಕ್ಕಾಚಾರ ಬಿಜೆಪಿಗೆ ಇದ್ದಂತಿದೆ. ಮಂಡ್ಯ ಲೋಕಸಭಾ ಕ್ಷೇತ್ರ ಹಂಚಿಕೆ ಗೊಂದಲದಲ್ಲಿರುವ ಸಂಸದೆ ಸುಮಲತಾ, ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಪಕ್ಷಕ್ಕೆ ಸಂದೇಶ ರವಾನಿಸಿದ್ರಾ ಎಂಬ ಚರ್ಚೆ ಶುರುವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

JDS ಭದ್ರಕೋಟೆಯಲ್ಲಿ ಭರ್ಜರಿ ರೌಂಡ್​ ಹಾಕಿದ ಬಿ.ವೈ ವಿಜಯೇಂದ್ರ; ಮಂಡ್ಯದಿಂದಲೇ ಮೈತ್ರಿಗೆ ಹೊಸ ತಂತ್ರ!

https://newsfirstlive.com/wp-content/uploads/2023/11/By-Vijayendra-14.jpg

Load More