newsfirstkannada.com

ನಾನು ಲಿಂಗಾಯತ, ಒಕ್ಕಲಿಗ ಅನ್ನೋದಲ್ಲ.. ಮೊದಲ ಸುದ್ದಿಗೋಷ್ಟಿಯಲ್ಲೇ ಬಿ.ವೈ ವಿಜಯೇಂದ್ರ ಖಡಕ್ ಮಾತು; ಹೇಳಿದ್ದೇನು?

Share :

15-11-2023

  ನನ್ನನ್ನು ಶಾಸಕನಾಗಿ ಮಾಡಿರೋ ಶಿಕಾರಿಪುರ ಮತದಾರರಿಗೆ ಕೃತಜ್ಞತೆ

  ಯಾರೂ ಕೂಡ ತಲೆ ಬಗ್ಗಿಸಿಕೊಂಡು ಹೋಗುವಂತೆ ಮಾಡುವುದಿಲ್ಲ

  ನಾನು ಲಿಂಗಾಯತ, ಒಕ್ಕಲಿಗ ಎನ್ನುವುದು ಸರಿಯಲ್ಲ ಎಂದ ವಿಜಯೇಂದ್ರ

ಬೆಂಗಳೂರು: ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಿರೋ ಬಿ.ವೈ ವಿಜಯೇಂದ್ರ ಅವರು ಮೊದಲ ಸುದ್ದಿಗೋಷ್ಟಿಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಅಧಿಕಾರ ಹಸ್ತಾಂತರದ ಬಳಿಕ ಮಾತನಾಡಿದ ವಿಜಯೇಂದ್ರ ಅವರು ಪಕ್ಷದ ಹಿರಿಯ ನಾಯಕರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಭರವಸೆ ನೀಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತು ಆರಂಭಿಸಿದ ಬಿ.ವೈ ವಿಜಯೇಂದ್ರ ಅವರು ಮೊದಲಿಗೆ ಹೈಕಮಾಂಡ್ ನಾಯಕರಿಗೆ ಧನ್ಯವಾದ ತಿಳಿಸಿದರು. ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಅವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್‌ಜೀ ಅವರ ಆದೇಶದಂತೆ ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಂದಿದ್ದೇನೆ. ನಮ್ಮ ಪಕ್ಷದ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಹೋಗುತ್ತೇನೆ ಎಂದರು.

ನಾನು ಬಂದು ಇಲ್ಲಿ ಮಾತನಾಡುತ್ತಿದ್ದೇನೆ ಅಂದರೆ ನನ್ನನ್ನು ಶಾಸಕನಾಗಿ ಮಾಡಿರುವ ಶಿಕಾರಿಪುರ ಹಿರಿಯರಿಗೆ, ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ನಡ್ಡಾ ಜೀ ಅವರು ನನ್ನ ಹೆಸರು ಘೋಷಣೆ ಮಾಡಿದ ತಕ್ಷಣ ಎಲ್ಲಾ ನಾಯಕರ ಜೊತೆ ಮಾತನಾಡುತ್ತಿದ್ದೇನೆ. ಹಿರಿಯರ ಜೊತೆಗೂ ಮಾತನಾಡಿ ಮಾರ್ಗದರ್ಶನ ಪಡೆಯುತ್ತಿದ್ದೇನೆ. ಅವರೆಲ್ಲರೂ ವಿಜಯೇಂದ್ರ ನೀನು ಮುಂದೆ ನುಗ್ಗು. 28 ಕ್ಕೆ 28 ಸ್ಥಾನ ಗಳಿಸಲು ಮುಂದೆ ಹೋಗೋಣ ಎಂದಿದ್ದಾರೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.

ಇನ್ನು, ಕಳೆದ 10 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ನಿರಂತರವಾಗಿ ಒಂದೇ ಒಂದು ದಿನ ರಜೆ ತೆಗೆದುಕೊಳ್ಳದೇ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ನಮ್ಮ ತಂದೆ ಯಡಿಯೂರಪ್ಪನವರು 20 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಅಂದರೆ ಹಾಸ್ಯ ಮಾಡುತ್ತಿದ್ದರು. ಬಳಿಕ ಆಗಿದ್ದು 25 ಸಂಸದರ ಗೆಲುವು. ನಾನು ಯಡಿಯೂರಪ್ಪನವರ ಹೋರಾಟವನ್ನು ನೋಡಿದ್ದೇನೆ. ಯಾರೂ ಕೂಡ ತಲೆ ಬಗ್ಗಿಸಿಕೊಂಡು ಹೋಗುವಂತೆ ಮಾಡುವುದಿಲ್ಲ. ನಿಮ್ಮ ಜೊತೆಗೆ ನಾನು ಇರುತ್ತೇನೆ ಎಂದ ವಿಜಯೇಂದ್ರ ತಿಳಿಸಿದ್ದಾರೆ.

ಪಕ್ಷ ಸಂಘಟನೆ ಬಗ್ಗೆ ಮಾತನಾಡಿದ ವಿಜಯೇಂದ್ರ ಅವರು ಲಕ್ಷಾಂತರ ಕಾರ್ಯಕರ್ತರು, ನನ್ನ ಮುಖಂಡ ಶಾಸಕನಾಗಬೇಕು. ನನ್ನ ಮುಖಂಡ ಸಂಸದನಾಗಬೇಕು ಎಂದು‌ ಓಡಾಟ ಮಾಡಿಲ್ಲವೇ? ಚುನಾವಣೆಯಲ್ಲಿ ಗೆಲ್ಲುವವರೆಗೂ ಮಾತ್ರ ಕಾರ್ಯಕರ್ತ. ಬಳಿಕ ನಾನು ಲಿಂಗಾಯತ, ಒಕ್ಕಲಿಗ ಎನ್ನುವುದಲ್ಲ ಎಂದು ಖಡಕ್ ಸಂದೇಶ ನೀಡಿದರು.

ಇನ್ನು, ನಾವು ಆಪರೇಷನ್ ಕಮಲ ಮಾಡಲ್ಲ. ಕಾಂಗ್ರೆಸ್‌ ಸರ್ಕಾರ ವಿಪಕ್ಷದವರನ್ನು ಬಿಡಿ, ಆಡಳಿತ ಪಕ್ಷದ ಶಾಸಕರಿಗೆ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ನಾನಂತೂ ಪಕ್ಷದ ಹಿರಿಯರು ಆಶೀರ್ವಾದ ಮಾಡುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಈಗ ಹಿರಿಯರು ಆಶೀರ್ವಾದ ಮಾಡಿದ್ದಾರೆ. ಹಿರಿಯರ ಮಾರ್ಗದರ್ಶನೆಯಲ್ಲಿ ಸಲಹೆ‌ ಸೂಚನೆ ಪಡೆದು ಕೆಲಸ ಮಾಡುತ್ತೇನೆ ಎಂದು ವಿಜಯೇಂದ್ರ ಅವರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾನು ಲಿಂಗಾಯತ, ಒಕ್ಕಲಿಗ ಅನ್ನೋದಲ್ಲ.. ಮೊದಲ ಸುದ್ದಿಗೋಷ್ಟಿಯಲ್ಲೇ ಬಿ.ವೈ ವಿಜಯೇಂದ್ರ ಖಡಕ್ ಮಾತು; ಹೇಳಿದ್ದೇನು?

https://newsfirstlive.com/wp-content/uploads/2023/11/By-Vijayendra-Bjp-3.jpg

Load More