newsfirstkannada.com

ಪುಟಿನ್ ವಿರುದ್ಧ ಪುಟಿದೆದ್ದ ವ್ಯಾಗ್ನರ್​ ಗ್ರೂಪ್ ದಿಢೀರ್ ಸೈಲೆಂಟ್.. ಜಸ್ಟ್ 24 ಗಂಟೆಯಲ್ಲಿ ವೈಲೆಂಟ್​ಗೆ ಇಂಜೆಕ್ಷನ್ ಕೊಟ್ಟಿದ್ಯಾರು ಗೊತ್ತಾ?

Share :

25-06-2023

  ರಷ್ಯಾ ಸೇನೆಗಳ ಅಂತರ್​ ಯುದ್ಧ ಉಲ್ಟಾಪಲ್ಟಾ..!

  ಒಂದೇ ದಿನಕ್ಕೆ ತಣ್ಣಾಗಾಯ್ತು ವ್ಯಾಗ್ನರ್ ಗ್ರೂಪ್..!

  ಪುಟಿನ್-ವ್ಯಾಗ್ನರ್ ನಡುವಿನ​​ ಯುದ್ಧ ನಿಲ್ಲಿಸಿದ್ದು ಯಾರು ಗೊತ್ತಾ? ​

ರಷ್ಯಾ-ಉಕ್ರೇನ್​ ಯುದ್ಧ ಹೊಸ ಸ್ವರೂಪಕ್ಕೆ ತಿರುಗಿದೆ. ಇಷ್ಟು ದಿನ ರಷ್ಯಾ ಸೇನೆಯ ಜೊತೆಗಿದ್ದ ಖಾಸಗಿ ಯೋಧರ ತಂಡ ಪುಟಿನ್ ವಿರುದ್ಧವೇ ತಿರುಗಿ ಬಿದ್ದಿದೆ. ವ್ಯಾಗ್ನರ್ ಪಡೆ ರಷ್ಯಾ ರಾಜಧಾನಿಯತ್ತ ನುಗ್ಗಲು ಮುಂದಾಗಿ ಪುಟಿನ್​ ಪಡೆಯ ಹೆಲಿಕಾಪ್ಟರ್​ಗಳನ್ನು ಉಡೀಸ್ ಮಾಡಿದೆ. ದಿಢೀರ್ ಬೆಳವಣಿಗೆಯಲ್ಲಿ ಎಲ್ಲವೂ ಉಲ್ಟಾಪಲ್ಟಾ ಆಗಿದೆ. ಒಂದೇ ದಿನದಲ್ಲಿ ವ್ಯಾಗ್ನರ್ ಸೇನೆ ಆಟ ತಣ್ಣಗಾಗಿದೆ.

ಇಷ್ಟು ದಿನ ರಷ್ಯಾ ಸೇನೆಯ ಜೊತೆಗೆ ಕೈ ಜೋಡಿಸಿ ಉಕ್ರೇನ್ ವಿರುದ್ಧ ತೊಡೆ ತಟ್ಟಿದ್ದ ಯೆವ್ಗೆನಿ ಪ್ರಿಗೊಜಿನ್​ ನೇತೃತ್ವದ ಖಾಸಗಿ ಸೇನೆ, ಪುಟಿನ್ ವಿರುದ್ಧವೇ ತಿರುಗಿ ಬಿದ್ದಿದೆ. ಅಷ್ಟೇ ಅಲ್ಲದೇ, ರಷ್ಯಾದ ರೋಸ್ಟೋವ್ ನಗರ ಹಿಡಿತಕ್ಕೆ ಪಡೆದಿದ್ದ ಪ್ರಿಗೋಜಿನ್​ ಪಡೆಗಳು ರಾಜಧಾನಿ ಮಾಸ್ಕೋಗೆ ಮುತ್ತಿಗೆ ಹಾಕೋಕೆ ಹೊರಟಿತ್ತು. ರಷ್ಯಾ ಅಧ್ಯಕ್ಷರು ಬದಲಾಗ್ತಾರೆ ಅಂತಲೂ ಬಹಿರಂಗ ಎಚ್ಚರಿಕೆ ರವಾನಿಸಿತ್ತು. ಇದು ಬಹುದೊಡ್ಡ ಸಂಘರ್ಷದ ಆತಂಕ ಹುಟ್ಟು ಹಾಕಿದೆ.

ಈ ಎಲ್ಲಾ ಆವೇಶ, ರೋಷಾವೇಶ, ಕೋಪಾಗ್ನಿ, ಎಲ್ಲವೂ ದಿಢೀರ್ ತಣ್ಣಗಾಗಿದೆ. ರಣರಕ್ಕಸನಂತೆ ರಷ್ಯಾ ಮೇಲೆ ಎರಗಿದ್ದ ಪುಟಿನ್ ಪರಮಾಪ್ತ ಯೆವ್ಗೆನಿ ಪ್ರಿಗೊಜಿನ್, ಯೂಟರ್ನ್ ಹೊಡೆದಿದ್ದಾರೆ.

ರಷ್ಯಾ ವಿರುದ್ಧ ಪ್ರಿಗೊಜಿನ್ ಸಾರಿದ್ದ ಸಮರ ವಾಪಸ್

ಪ್ರಿಗೊಜಿನ್ ಆರ್ಭಟ ಕಂಡು ರಷ್ಯಾ ನಡುಗಿ ಹೋಗಿತ್ತು. ಪುಟಿನ್ ಕೂಡ ರಹಸ್ಯ ಸ್ಥಳ ಸೇರಿದ್ರು. ಉಕ್ರೇನ್​ನಲ್ಲಿ ನಿಯೋಜಿಸಲಾಗಿದ್ದ ಸೇನೆಯನ್ನು ವಾಪಸ್ಸು ಕರೆಸಿಕೊಳ್ಳೋಕೆ ರಷ್ಯಾ ಸಜ್ಜಾಗಿತ್ತು. ಆದ್ರೆ ದಿಢೀರ್ ಪ್ರಿಗೊಜಿನ್ ತಾವು ಸಾರಿದ್ದ ಸಮರಕ್ಕೆ ಫುಲ್​ಸ್ಟಾಫ್ ಹಾಕಿದ್ದಾರೆ. ಅದಕ್ಕೆ ಕಾರಣ ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ನಡೆಸಿದ ಸಂಧಾನ ಸಕ್ಸಸ್ ಆಗಿದೆ.

ಸಂಧಾನ ಸಕ್ಸಸ್​.. ವ್ಯಾಗ್ನರ್ ವಾಪಸ್!

 • ಮೊದಲು ಬೆಲಾರಸ್ ಅಧ್ಯಕ್ಷ ಲುಕಾಶೆಂಕೊ-ಪುಟಿನ್ ಮಾತುಕತೆ
 • ವ್ಯಾಗ್ನರ್ ಬಾಸ್ ಯೆವ್ಗೆನಿ ಪ್ರಿಗೊಜಿನ್ ಜತೆ ಲುಕಾಶೆಂಕೊ ಚರ್ಚೆ
 • ಮಾಸ್ಕೋದತ್ತ ನುಗ್ತಿರೋ ಸೇನೆ ಹಿಂಪಡೆಯುವಂತೆ ಪ್ರಸ್ತಾಪ
 • ಬೆಲಾರಸ್ ಅಧ್ಯಕ್ಷರ ಸಂಧಾನ ಸೂತ್ರ ಒಪ್ಪಿದ ಪ್ರಿಗೋಜಿನ್
 • ರಕ್ಷಣಾ ಸಚಿವ ಸೆರ್ಗೆಯ್ ಕೆಳಗಿಳಿಸಬೇಕು ಅನ್ನೋ ಬೇಡಿಕೆ
 • ಬೇಡಿಕೆ ಬಗ್ಗೆ ಸಂಧಾನದಲ್ಲಾದ ನಿರ್ಧಾರದ ಮಾಹಿತಿ ಸಿಕ್ಕಿಲ್ಲ
 • ರಷ್ಯಾ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಹೊರಬಿದ್ದಿಲ್ಲ
 • ಸಂಧಾನದ ಬಳಿಕ ಪ್ರಿಗೋಜಿನ್ ಆಡಿಯೋ ಸಂದೇಶ ರವಾನೆ
 • ರಷ್ಯಾದಲ್ಲಿ ಆಗಬಹುದಾದ ರಕ್ತಪಾತ ತಡೆಯಲು ಈ ನಿರ್ಧಾರ

ವ್ಯಾಗ್ನರ್ ಸೇನೆ ಬ್ಯಾಕ್ ಟು ಫೀಲ್ಡ್​.. ಅಂದ್ರೆ ಆರ್ಮಿ ಕ್ಯಾಂಪ್​ಗೆ ರಿಟರ್ನ್ ಆಗೋದಕ್ಕೆ ಯೆವ್ಗೆನಿ ಪ್ರಿಗೊಜಿನ್ ಸೂಚನೆ ನೀಡಿದ್ದಾರೆ. ಬಳಿಕ ಚಪ್ಪಾಳೆ ಹಾಗೂ ಹ್ಯಾಂಡ್ ಶೇಕ್ ಮೂಲಕ ವ್ಯಾಗ್ನರ್ ಸೇನೆ ಬಂದ ದಾರಿಗೆ ಮರಳಿದೆ. ಈ ಇಡೀ ಹೈಡ್ರಾಮಾ, ಆಕ್ರೋಶದ ಹಂಗಾಮ 24 ಗಂಟೆಯಲ್ಲಿ ಮುಗಿದಿರೋದು ವಿಶೇಷ.

ರಷ್ಯಾ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದ ಎವ್ಗೆನಿ ಪ್ರಿಗೋಜಿನ್​

ಶುಕ್ರವಾರ ರಾತ್ರಿ ಅಂದ್ರೆ ಮೊನ್ನೆ ರಾತ್ರಿ ರಷ್ಯಾ ಸರ್ಕಾರದ ವಿರುದ್ಧ ಯೆವ್ಗೆನಿ ಪ್ರಿಗೊಜಿನ್​ ಸಿಡಿದೆದ್ದಿದ್ದರು. ಹೋರಾಟದ ಕಹಳೆ ಮೊಳಗಿಸಿದ್ರು. ಅತ್ತ ಕೌಂಟರ್ ಕೊಟ್ಟಿದ್ದ ರಷ್ಯಾ ಸರ್ಕಾರ ಕ್ರಿಮಿನಲ್ ಕೇಸ್ ದಾಖಲಿಸೋ ಎಚ್ಚರಿಕೆ ರವಾನಿಸಿತ್ತು. ಈ ಬೆನ್ನಲ್ಲೇ ಶನಿವಾರ ಬೆಳಗ್ಗೆ ಅಂದ್ರೆ ನಿನ್ನೆ ಉಕ್ರೇನ್‌ನಲ್ಲಿದ್ದ ವ್ಯಾಗ್ನರ್ ಸೇನೆ ಗಡಿ ದಾಟಿ ರಷ್ಯಾಕ್ಕೆ ಮರಳಿತ್ತು. ಅಲ್ಲದೇ ದಕ್ಷಿಣ ರಷ್ಯಾದ ನಗರ ರೋಸ್ಟೋವ್ ಪ್ರವೇಶಿಸಿತ್ತು. ಮಧ್ಯಾಹ್ನದ ವೇಳೆಗೆ ರೋಸ್ಟೋವ್ ನಗರದ ಮೇಲೆ ಯೆವ್ಗೆನಿ ಪ್ರಿಗೊಜಿನ್ ಪಡೆ ಹಿಡಿತ ಸಾಧಿಸಿತ್ತು. ಬಳಿಕ ಮಾಸ್ಕೋ ವಶಕ್ಕೆ ಪಡೆಯಲು ಯೋಧರು ಹೆಜ್ಜೆ ಇಡಲು ಶುರು ಮಾಡಿದ್ರು.

ಮಾಸ್ಕೋಗೆ ವ್ಯಾಗ್ನರ್ ಪಡೆ ನುಗ್ಗೋದನ್ನ ತಡೆಯಲು ರಷ್ಯಾ ಸೇನೆ, ರಸ್ತೆಯನ್ನ ಅಗೆಯೋದ್ರಿಂದ ಹಿಡಿದು, ಮಿಲಿಟರಿ ವಾಹನ ನಿಯೋಜನೆವರೆಗೆ ಸಕಲ ಅಸ್ತ್ರ ಪ್ರಯೋಗಿಸಿತ್ತು. ಉಕ್ರೇನ್​ನಿಂದ ತನ್ನ ಸೇನೆ ವಾಪಸ್ ಕರೆಸಲು ರಷ್ಯಾ ಸರ್ಕಾರ ಸೂಚನೆ ನೀಡಿತ್ತು. ಈ ನಡುವೆ ಕಳೆದ ರಾತ್ರಿ ರಷ್ಯಾ ಸರ್ಕಾರ ಹಾಗೂ ವ್ಯಾಗ್ನರ್ ಸೇನೆ ನಡುವೆ ಸಂಧಾನ ಯಶಸ್ವಿಯಾಗಿದೆ. ಬಳಿಕ ತಮ್ಮ ಸೇನೆಯನ್ನ ವಾಪಸ್ ಆಗಲು ಯೆವ್ಗೆನಿ ಪ್ರಿಗೊಜಿನ್ ಸೂಚಿಸಿದ್ದಾರೆ.

ಇವೆಲ್ಲವೂ, ಜಸ್ಟ್ 24 ಗಂಟೆಯಲ್ಲಿ ಮುಗಿದು ಹೋಗಿದೆ. ಅತ್ತ ರಷ್ಯಾ ಸರ್ಕಾರ ಅಲರ್ಟ್​ನಲ್ಲಿದೆ. ಜುಲೈ 1ರವರೆಗೆ ಎಲ್ಲ ಬಹಿರಂಗ ಸಮಾವೇಶ ರದ್ದು ಮಾಡಲಾಗಿದೆ. ಶಾಲೆಗಳಿಗೂ ರಜೆ ನೀಡಲಾಗಿದೆ. ಈ ನಡುವೆ ಅಂತರ್​ ಯುದ್ಧದ ಕಾರ್ಮೋಡ ಮರೆಯಾದಂತೆ ಕಾಣಿಸ್ತಿದೆ. ಏನೋ ದೊಡ್ಡದು ಆಗುತ್ತೆ ಅನ್ನೋ ರೀತಿ ಇದ್ದಿದ್ದು ಕಡ್ಡಿ ಪಕ್ಕಕ್ಕೆ ಸರಿಸಿದಷ್ಟು ಸಲೀಸಾಗಿ ಮುಕ್ತಾಯವಾಗಿದೆ. ಇದಕ್ಕೇ ಅನ್ಸುತ್ತೆ ಪುಟಿನ್​ರನ್ನ ಫಟಿಂಗ ಅನ್ನೋದು. ರಣಬೇಟೆಗಾರ ಅಂತಾ ವರ್ಣಿಸೋದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪುಟಿನ್ ವಿರುದ್ಧ ಪುಟಿದೆದ್ದ ವ್ಯಾಗ್ನರ್​ ಗ್ರೂಪ್ ದಿಢೀರ್ ಸೈಲೆಂಟ್.. ಜಸ್ಟ್ 24 ಗಂಟೆಯಲ್ಲಿ ವೈಲೆಂಟ್​ಗೆ ಇಂಜೆಕ್ಷನ್ ಕೊಟ್ಟಿದ್ಯಾರು ಗೊತ್ತಾ?

https://newsfirstlive.com/wp-content/uploads/2023/06/RUSSIA_WAR_2.jpg

Load More