ದರ್ಶನ್ ಅವರ ಮನೆಗೆ ಹೋಗಿ ನೋಟಿಸ್ ಕೊಟ್ಟಿದ್ದ ಪೊಲೀಸರು
ನಿನ್ನೆ ಮತ್ತೆ ದರ್ಶನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ
ನಾಯಿ ಕಚ್ಚಿದ ಘಟನೆ ನಡೆದಾಗ ನಾನು ಗುಜರಾತ್‌ನ ಶೂಟಿಂಗ್‌ನಲ್ಲಿದ್ದೆ
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ನಾಯಿ ಮಹಿಳೆಗೆ ಕಚ್ಚಿದ ಪ್ರಕರಣದಲ್ಲಿ ರಾಜರಾಜೇಶ್ವರಿ ನಗರ ಪೊಲೀಸರ ವಿಚಾರಣೆ ಮುಂದುವರೆದಿದೆ. ಪ್ರಕರಣ ದಾಖಲಿಸಿದ್ದ ಪೊಲೀಸರು ದರ್ಶನ್ ಅವರ ಮನೆಗೆ ಹೋಗಿ ನೋಟಿಸ್ ಕೊಟ್ಟು ಮೂರು ದಿನದ ಒಳಗೆ ಮನೆಯ ಸಿಸಿಟಿವಿ ವಿಡಿಯೋ ಜೊತೆಗೆ ವಿಚಾರಣೆಗೆ ಬರಬೇಕೆಂದು ಸೂಚಿಸಿದ್ದರು.
ನಟ ದರ್ಶನ್ ಅವರಿಗೆ ನೋಟಿಸ್ ನೀಡಿದ್ದರೂ ದರ್ಶನ್ ವಿಚಾರಣೆಗೆ ಹಾಜರಾಗಿರಲಿಲ್ಲ. ನಿನ್ನೆ ಮತ್ತೆ ಪೊಲೀಸರು ದರ್ಶನ್ ಅವರನ್ನ ಸಂಪರ್ಕಿಸಿದ್ದು, ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು.
ಸ್ಟೇಷನ್‌ಗೆ ಬಂದ ನಟ ದರ್ಶನ್ ಅವರ ಹೇಳಿಕೆಯನ್ನು ಪೊಲೀಸರು ದಾಖಲು ಮಾಡಿದ್ದಾರೆ. ನೋಟಿಸ್‌ಗೆ ಉತ್ತರಿಸಿರುವ ದರ್ಶನ್, ಮಹಿಳೆಗೆ ನಾಯಿ ಕಚ್ಚಿದ ಘಟನೆ ನಡೆದಾಗ ನಾನು ಗುಜರಾತ್‌ನ ನಡೆಯುತ್ತಿದ್ದ ಶೂಟಿಂಗ್‌ನಲ್ಲಿದ್ದೆ. ನಮ್ಮ ಮನೆಯ ಕೇರ್ ಟೇಕರ್ ಹುಡುಗರಿಗೆ ನಾಯಿಗಳನ್ನು ಕರೆಕ್ಟಾಗಿ ನೋಡಿಕೊಳ್ಳುವಂತೆ ಹೇಳಿದ್ದೆ.
ಸೆಲೆಬ್ರಿಟಿಗಳ ಮನೆ ಬಳಿ ಸಾಕಷ್ಟು ಜನ ಬರುತ್ತಾ ಇರುತ್ತಾರೆ. ಹೀಗಾಗಿ ಅಕ್ಕಪಕ್ಕದ ಮನೆಗಳ ನಿವಾಸಿಗಳಿಗೆ ತೊಂದರೆಯಾಗುತ್ತೆ. ಯಾರೇ ಬಂದ್ರೂ ವಿಚಾರಿಸಿ ನೋಡಿಕೊಳ್ಳುವಂತೆ ಹೇಳಿರುತ್ತೇನೆ. ಈ ಹಿನ್ನೆಲೆಯಲ್ಲಿ ಕಾರ್ ಪಾರ್ಕಿಂಗ್ ವಿಚಾರವಾಗಿ ಕೇಳಿದ್ದಾರೆ. ಎಚ್ಚರಿಕೆ ವಹಿಸಬೇಕಿತ್ತು ಅಂತಾ ಹುಡುಗರಿಗೆ ಹೇಳಿದ್ದೇನೆ. ಅಮಿತಾ ಜಿಂದಾಲ್‌ರಿಗೆ ಈ ರೀತಿಯಾದಾಗ ಅವರ ಆಸ್ಪತ್ರೆ ವೆಚ್ಚ ಭರಿಸುವಂತೆ ಹೇಳಿದ್ದೇನೆ. ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸುತ್ತೇನೆ ಎಂದು ನಟ ದರ್ಶನ್ ಅವರು ಪೊಲೀಸರಿಗೆ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ