newsfirstkannada.com

ಬಿಕ್ಕಿ, ಬಿಕ್ಕಿ ಅತ್ತ ಮಾದಿಗ ಮುಖಂಡನಿಗೆ ಮೋದಿ ಸಾಂತ್ವನ; ವೈರಲ್ ವಿಡಿಯೋಗೆ ಕಾಂಗ್ರೆಸ್ ಹೇಳಿದ್ದೇನು?

Share :

12-11-2023

    ತೆಲಂಗಾಣ ವಿಧಾನಸಭಾ ಚುನಾವಣೆ ಅಖಾಡದಲ್ಲಿ ಮೋದಿ ಪ್ರಚಾರ

    ಮೋದಿಯನ್ನ ನೋಡಿದ ಖುಷಿಯಲ್ಲಿ ದಲಿತ ಮುಖಂಡರೊಬ್ಬರ ಕಣ್ಣೀರು

    ಬಿಕ್ಕಿ, ಬಿಕ್ಕಿ ಅತ್ತ ದಲಿತ ಮುಖಂಡ ಮಂದ ಕೃಷ್ಣ ಅವರಿಗೆ ಮೋದಿ ಸಾಂತ್ವನ

ತೆಲಂಗಾಣ ವಿಧಾನಸಭಾ ಚುನಾವಣೆ ಅಖಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಭರ್ಜರಿ ಪ್ರಚಾರ ನಡೆಸಿದ್ದಾರೆ. ಸಿಕಂದರಾಬಾದ್‌ನಲ್ಲಿ ನಡೆದ ಮಾದಿಗ ಮೀಸಲಾತಿ ಹೋರಾಟ ಸಮಿತಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದು, ಈ ಕಾರ್ಯಕ್ರಮದಲ್ಲಿ ಮಾದಿಗ ಮುಖಂಡನಿಗೆ ಮೋದಿ ಅಪ್ಪುಗೆಯ ಸಾಂತ್ವನ ಹೇಳಿದ್ದಾರೆ.

ಬೃಹತ್ ಸಮಾರಂಭದಲ್ಲಿ ಪ್ರಧಾನಿ ಮೋದಿಯನ್ನ ನೋಡಿದ ಖುಷಿಯಲ್ಲಿ ದಲಿತ ಮುಖಂಡರೊಬ್ಬರು ಕಣ್ಣೀರು ಹಾಕಿದ್ದಾರೆ. ಬಿಕ್ಕಿ, ಬಿಕ್ಕಿ ಅತ್ತ ದಲಿತ ಮುಖಂಡ ಮಂದ ಕೃಷ್ಣ ಅವರಿಗೆ ನೀನು ನನ್ನ ಸಹೋದರ ಎಂದು ಮೋದಿ ಸಾಂತ್ವನ ಮಾಡಿದ್ದಾರೆ. ಮೋದಿ ಅಪ್ಪುಗೆಯ ಸಾಂತ್ವನದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ರೀ ಟ್ವೀಟ್ ಮಾಡಿರುವ ಕೇರಳ ಕಾಂಗ್ರೆಸ್ ಇಬ್ಬರಲ್ಲಿ ಯಾರು ಬೆಸ್ಟ್ ಆ್ಯಕ್ಟರ್ ಅಂತಾ ಪ್ರಶ್ನಿಸಿದೆ.

ಇನ್ನು, ಮಾದಿಗ ಮೀಸಲಾತಿ ಹೋರಾಟ ಸಮಿತಿಯು ಪರಿಶಿಷ್ಟ ಜಾತಿ ಸಮುದಾಯಗಳಿಗೆ ಮೀಸಲಾತಿಯ ಉಪವರ್ಗೀಕರಣಕ್ಕೆ ಒತ್ತಾಯಿಸಿ ಱಲಿಯನ್ನ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನಾನು ಏನನ್ನೂ ಕೇಳಲು ಇಲ್ಲಿಗೆ ಬಂದಿಲ್ಲ, ಸ್ವಾತಂತ್ರ್ಯದ ನಂತರ ನಿಮ್ಮನ್ನು ವಂಚಿಸಿದ ಎಲ್ಲಾ ರಾಜಕೀಯ ಪಕ್ಷಗಳ ಪರ ಕ್ಷಮೆ ಕೇಳಲು ಇಲ್ಲಿಗೆ ಬಂದಿದ್ದೇನೆ. ಎಸ್‌ಸಿ ಸಮುದಾಯದ ಸಬಲೀಕರಣಕ್ಕಾಗಿ ಎಲ್ಲ ಮಾರ್ಗಗಳನ್ನು ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರವು ಶೀಘ್ರದಲ್ಲೇ ಸಮಿತಿಯೊಂದನ್ನು ರಚಿಸುತ್ತೇವೆ ಅನ್ನೋ ಭರವಸೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಕ್ಕಿ, ಬಿಕ್ಕಿ ಅತ್ತ ಮಾದಿಗ ಮುಖಂಡನಿಗೆ ಮೋದಿ ಸಾಂತ್ವನ; ವೈರಲ್ ವಿಡಿಯೋಗೆ ಕಾಂಗ್ರೆಸ್ ಹೇಳಿದ್ದೇನು?

https://newsfirstlive.com/wp-content/uploads/2023/11/PM-modi-Maadiga.jpg

Load More