newsfirstkannada.com

ಕಂಬಿ ಹಿಂದಿರೋ ದಾಸನಿಗೆ ಬಿಗ್ ಶಾಕ್‌.. ದರ್ಶನ್‌ಗೆ ಇನ್ನೆಷ್ಟು ದಿನ ಜೈಲೂಟ? ಹೈಕೋರ್ಟ್‌ ಹೇಳಿದ್ದೇನು?

Share :

Published July 10, 2024 at 8:20pm

    ಮನೆ ಊಟಕ್ಕಾಗಿ ಕೋರ್ಟ್​ ಮೆಟ್ಟಿಲೇರಿದ್ದ ದರ್ಶನ್​ಗೆ ನಿರಾಸೆ

    ಜೈಲಿನ ಊಟ ತಿಂದಾಗ ಅತಿಸಾರ ಅಂದ್ರೆ ಭೇದಿ ಆಗುತ್ತಿದೆ

    ಹೀಗೆ ಮುಂದುವರಿದ್ರೆ ದರ್ಶನ್ ಮತ್ತಷ್ಟು ತೂಕ ಕಳೆದುಕೊಳ್ಳಬಹುದು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿ ತಿಂಗಳೊಳಗೆ ದರ್ಶನ್ ಸೊರಗಿ ಹೋಗಿದ್ದಾರೆ. ಜೈಲೂಟಕ್ಕೆ ಬೇಸತ್ತು ಮನೆ ಊಟಕ್ಕಾಗಿ ಮನವಿ ಮಾಡಿದ್ದಾರೆ. ಆದ್ರೀಗ ಅದಕ್ಕೂ ಹೈಕೋರ್ಟ್​​ ತಣ್ಣೀರೆರಚಿದೆ.
ಶೂಟಿಂಗ್​, ಪಾರ್ಟಿ, ಮೋಜು ಮಸ್ತಿ, ಫಾರಿನ್​ ಟೂರ್​, ಫ್ರೆಂಡ್ಸ್​ ಜೊತೆ ಟ್ರಿಪ್​. ರುಚಿ ರುಚಿಯಾದ ಊಟ ತಿನ್ಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದ ನಟ ದರ್ಶನ್​ ಜೈಲು ಹಕ್ಕಿ ಆಗಿದ್ದೇ ಆಗಿದ್ದು, ಸೆರೆಮನೆ ವಾಸಕ್ಕೆ ಒಗ್ಗಿಕೊಳ್ಳೋಕೆ ಆಗದೇ ಒದ್ದಾಡ್ತಿದ್ದಾರೆ.

ಇದನ್ನೂ ಓದಿ: ಜೈಲೂಟ ತಿಂದ್ರೆ ಅತಿಸಾರ.. ಮನೆ ಊಟ, ಬಟ್ಟೆ.. ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್ ಬೇಡಿಕೆಗಳೇನು? 

ಮುಂದಿನ ಗುರುವಾರದವರೆಗೂ ದರ್ಶನ್​ಗೆ ಜೈಲೂಟವೇ ಗತಿ
ಪರಪ್ಪನ ಅಗ್ರಹಾರದ ಜೈಲೂಟಕ್ಕೆ ಒಗ್ಗಿಕೊಳ್ಳದೇ A2 ದರ್ಶನ್​ ಪರದಾಡ್ತಿದ್ದಾರೆ. ಅದು ಯಾವ ಪರಿ ಅಂದ್ರೆ ಅತಿಸಾರ, ಫುಡ್ ಪಾಯ್ಸನ್ ಜೊತೆಗೆ ದೇಹದ ತೂಕ ಬೇರೆ ಇಳಿಕೆ ಆಗುತ್ತಾ ಇದ್ಯಂತೆ. ಹೀಗಾಗಿ ದರ್ಶನ್​ ಮನೆ ಊಟಕ್ಕಾಗಿ ಕೋರ್ಟ್​ ಮೆಟ್ಟಿಲೇರಿದ್ದರು. ಆದ್ರೀಗ ದರ್ಶನ್​ಗೆ ಕೋರ್ಟ್​ ನಿರಾಸೆ ಮೂಡಿಸಿದ್ದು, ಮುಂದಿನ ಗುರುವಾರದವರೆಗೂ ದರ್ಶನ್​ಗೆ ಜೈಲೂಟವೇ ಗತಿಯಾಗಿದೆ.

ದರ್ಶನ್​ ರಿಟ್​ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್​
ಜುಲೈ 18ಕ್ಕೆ ಅರ್ಜಿ ವಿಚಾರಣೆ ಮುಂದೂಡಿದ ನ್ಯಾಯಾಲಯ
ದರ್ಶನ್​ ಪರ ವಕೀಲರು ಮನೆ ಊಟ, ಹಾಸಿಗೆ ಮತ್ತು ಪುಸ್ತಕಕ್ಕೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದ್ರಿವತ್ತು ಹೈಕೋರ್ಟ್​ ರಿಟ್​ ಅರ್ಜಿ ಮುಂದೂಡಿದೆ. ಜುಲೈ 18ಕ್ಕೆ ರಿಟ್​ ಅರ್ಜಿ ಮುಂದೂಡಿದ್ದು, ಸದ್ಯಕ್ಕೆ ದರ್ಶನ್​ ಮಾಡಿದ್ದ ಮನೆ ಊಟ, ಚಮಚ, ಬಟ್ಟೆ, ಪುಸ್ತಕದ ಬೇಡಿಕೆ ಈಡೇರೋದು ಕಷ್ಟವಾಗಿದೆ.

ಇದನ್ನೂ ಓದಿ: ಜೈಲೂಟಕ್ಕೆ ಪರದಾಟ.. ದರ್ಶನ್‌ಗಾಗಿ ಡ್ರೈ ಫ್ರೂಟ್ಸ್‌ ತಂದ ಅಕ್ಕ, ಬಾವನಿಗೆ ಬಿಗ್‌ ಶಾಕ್; ಪೊಲೀಸ್ರು ಮಾಡಿದ್ದೇನು? 

ದರ್ಶನ್​ಗೆ ಜೈಲಿನ ಊಟ ತಿಂದಾಗ ಅತಿಸಾರ ಅಂದ್ರೆ ಭೇದಿ ಆಗುತ್ತಿದೆ. ಜೈಲಿನ ಆಹಾರ ಒಗ್ಗದೇ ಫುಡ್ ಪಾಯ್ಸನಿಂಗ್ ಆಗ್ತಿದೆ. ಜೈಲಿನ ಆಹಾರ ಸೂಕ್ತವಲ್ಲ ಅಂತ ವೈದ್ಯರೇ ಹೇಳಿದ್ದಾರೆ. ಭೇದಿಯಿಂದ ದರ್ಶನ್​ ತೂಕವೂ ಕಡಿಮೆಯಾಗುತ್ತಿದೆ. ಒಂದ್ವೇಳೆ ಹೀಗೆ ಮುಂದುವರಿದ್ರೆ ದರ್ಶನ್ ಮತ್ತಷ್ಟು ತೂಕ ಕಳೆದುಕೊಳ್ಳಬಹುದು. ಇದು ಅನಾರೋಗ್ಯಕ್ಕೂ ಎಡೆಮಾಡಿಕೊಡುವ ಸಾಧ್ಯತೆ ಇದೆ. ಮನೆ ಊಟಕ್ಕೆ ಅನುಮತಿ ನೀಡಿದರೆ ಯಾರಿಗೂ ತೊಂದರೆಯಾಗಲ್ಲ ಅಂತ ರಿಟ್​ ಅರ್ಜಿಯಲ್ಲಿ ಕೋರಲಾಗಿತ್ತು. ಆದ್ರೀಗ ರಿಟ್​ ಅರ್ಜಿ ವಿಚಾರಣೆಯನ್ನ ಹೈ ಕೋರ್ಟ್​ ಜುಲೈ 18ಕ್ಕೆ ಮುಂದೂಡಿ ದರ್ಶನ್​ಗೆ ನಿರಾಸೆ ಮೂಡಿಸಿದೆ.

ಕೋರ್ಟ್​ ಪ್ರಶ್ನೆ ಏನು?  
ಜೈಲು ಅಧಿಕಾರಿಗಳಿಗೆ ಈ ಬಗ್ಗೆ ಕೋರಿಕೆ ಸಲ್ಲಿಸಿದ್ದೀರಾ?
ವಿಚಾರಣಾಧೀನ ಕೋರ್ಟ್​ನಲ್ಲಿ ಕೋರಿಕೆ ಸಲ್ಲಿಸಿದ್ದೀರಾ?
ಮೊದಲು ಜೈಲಿನ ನಿಯಮಗಳನ್ನ ಕೋರ್ಟ್​ಗೆ ತೋರಿಸಿ
ಜೈಲಿನಲ್ಲಿ ಪರಿಷ್ಕರಣೆ ನಿಯಮ ಅನ್ನೋದು ಇದೆ ಅಲ್ವಾ?
ಆ ನಿಯಮಗಳನ್ನ ಮೊದಲು ನ್ಯಾಯಾಲಯಕ್ಕೆ ತೋರಿಸಿ
ನಿಯಮ ತೋರಿಸಿದ ಬಳಿಕ ನಾವು ಆದೇಶ ನೀಡಬಹುದು
ಈ ಕೇಸ್ ಸಂಬಂಧಿಸಿದ ನಿಬಂಧನೆಗಳನ್ನ ಸಲ್ಲಿಕೆ ಮಾಡಿ

ನಿದ್ದೆ ಇಲ್ಲದೆ, ಊಟ ಇಲ್ಲದೆ ಸೊರಗಿರೋ ದರ್ಶನ್​ ಮನೆ ಊಟಕ್ಕಾಗಿ ಚಡಪಡಿಸುತ್ತಿದ್ದಾರೆ. ಆದ್ರೀಗ ಕೋರ್ಟ್​ ರಿಟ್​ ಅರ್ಜಿ ವಿಚಾರಣೆ ಮುಂದೂಡಿದ್ದು, ಸದ್ಯಕ್ಕೆ ದಾಸನಿಗೆ ಜೈಲೂಟವೇ ಗತಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಂಬಿ ಹಿಂದಿರೋ ದಾಸನಿಗೆ ಬಿಗ್ ಶಾಕ್‌.. ದರ್ಶನ್‌ಗೆ ಇನ್ನೆಷ್ಟು ದಿನ ಜೈಲೂಟ? ಹೈಕೋರ್ಟ್‌ ಹೇಳಿದ್ದೇನು?

https://newsfirstlive.com/wp-content/uploads/2024/06/DARSHAN-JAIL-2.jpg

Load More