/newsfirstlive-kannada/media/post_attachments/wp-content/uploads/2024/12/rashmika6.jpg)
ಕೊಡಗಿನ ಕುವರಿ, ನ್ಯಾಷನಲ್​​ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಸ್ಯಾಂಡಲ್​ವುಡ್​ನಿಂದ ಟಾಲಿವುಡ್, ಟಾಲಿವುಡ್​ನಿಂದ ಬಾಲಿವುಡ್.. ಹೀಗೆ ಒಂದಾದ ಬಳಿಕ ಒಂದರಂತೆ ಬಹುಭಾಷೆಗಳಲ್ಲಿ ಸರಣಿ ಸಿನಿಮಾಗಳನ್ನು ಮಾಡುತ್ತಾ ತಮ್ಮ ವೃತ್ತಿಜೀವನದಲ್ಲಿ ಸಖತ್​​ ಬ್ಯುಸಿಯಾಗಿದ್ದಾರೆ.
/newsfirstlive-kannada/media/post_attachments/wp-content/uploads/2024/01/rashmika-2.jpg)
ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್​ ಆಗಿರೋ ನಟಿ ಕೆಲವು ವರ್ಷಗಳಿಂದ ವಿಜಯ ದೇವರಕೊಂಡ ಜೊತೆಗೆ ಬಹಳ ಆತ್ಮೀಯರಾಗಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಹಿಂದೆಯೇ ಈ ಇಬ್ಬರು ಡೇಟಿಂಗ್​​ ಮಾಡುತ್ತಿದ್ದಾರೆ. ಇವರು ಜೊತೆಯಾಗಿ ವಿದೇಶದಲ್ಲಿ ತಿರುಗಾಡಿದ್ದಾರೆ ಎಂಬ ವಿಚಾರ ಸೋಷಿಯಲ್​ ಮಿಡಿಯಾದಲ್ಲಿ ಹರಿದಾಡುತ್ತಿರುವುದು ಹೊಸತೇನಲ್ಲ. ದೀಪಾವಳಿ ಹಬ್ಬವನ್ನು ರಶ್ಮಿಕಾ ದೇವರಕೊಂಡ ಜೊತೆ ಆಚರಿಸಿಕೊಂಡಿದ್ದರು ಎನ್ನಲಾಗಿತ್ತು. ಡೇಟಿಂಗ್​​ ಮೀಟಿಂಗ್​ ನಡುವೆ ಖುದ್ದು ವಿಜಯ್​ ದೇವರಕೊಂಡ ಅವರೇ ಈ ವಿಚಾರದ ಬಗ್ಗೆ ಮಾತಾಡಿದ್ದರು.
ಇದೀಗ ನಟಿ ರಶ್ಮಿಕಾ ಮಂದಣ್ಣಗೆ ಮುಂದಿನ ವರ್ಷ ಲಕ್ಕಿ ಅಂತನೇ ಹೇಳಬಹುದಾಗಿದೆ. ಈ ಬಗ್ಗೆ ಖುದ್ದು ನ್ಯೂಸ್​ ಫಸ್ಟ್​ಗೆ ಸಂಖ್ಯಾಶಾಸ್ತ್ರಜ್ಞೆ ಮೀತಾ ಅವರು ಕೆಲವೊಂದು ವಿಚಾರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಂಖ್ಯಾಶಾಸ್ತ್ರದ ಪ್ರಕಾರ 6ನೇ ನಂಬರ್ ಚೆನ್ನಾಗಿಲ್ಲ. 6ನೇ ನಂಬರ್ ಅವರಿಗೆ ಈ ವರ್ಷ ಚೆನ್ನಾಗಿಲ್ಲ. 6ನೇ ತಾರೀಖು, 6ನೇ ತಿಂಗಳು ಅಷ್ಟೋಂದು ಲಕ್ಕಿ ತಂದುಕೊಟ್ಟಿಲ್ಲ. ಬರೋ ವರ್ಷ 6ನೇ ತಾರೀಖು ತುಂಬಾ ಚೆನ್ನಾಗಿದೆ. ಈ ವರ್ಷ ಅಷ್ಟು ಸರಿ ಇಲ್ಲ. ಮುಂದಿನ ವರ್ಷ ಆ ಇಬ್ಬರ ಮದುವೆ ಆಗಬಹುದು ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us