newsfirstkannada.com

×

Coldplay ಹವಾ.. ಭಾರತದಲ್ಲಿ ಟಿಕೆಟ್​ ಸೋಲ್ಡ್ ​ಔಟ್.. ಸ್ಟೇಡಿಯಂ ಪಕ್ಕದ ಹೋಟೆಲ್​ಗಳು ಬುಕ್; ಏನಿದರ ಇತಿಹಾಸ?

Share :

Published September 23, 2024 at 4:02pm

Update September 24, 2024 at 4:47pm

    ಜನವರಿಗೆ ಭಾರತದಲ್ಲಿ ಧೂಳೆಬ್ಬಿಸಲಿದೆ ಬ್ರಿಟನ್ ರಾಕ್​ ಬ್ಯಾಂಡ್ ಕೋಲ್ಡ್​ಪ್ಲೇ

    ಏನಿದು ಕೋಲ್ಡ್​ ಪ್ಲೇ? ಭಾರತದಲ್ಲಿ ಇಷ್ಟೊಂದು ಜನಪ್ರಿಯತೆ ಪಡೆದಿದ್ದು ಹೇಗೆ?

    ಇವೆಂಟ್​ನ ಮೂರು ತಿಂಗಳ ಮೊದಲೇ ಟಿಕೆಟ್​ಗಳು ಸೋಲ್ಡ್ ಔಟ್ ಆಗಿದ್ದೇಕೆ?

ಮುಂಬೈ: ಕೊಲ್ಡ್ ಪ್ಲೇ ಎಲ್ಲಾ ದೇಶಗಳ ಪತ್ರಿಕೆಯ ಹಾಗೂ ವೆಬ್​ಸೈಟ್​ಗಳಲ್ಲಿ ಪ್ರಮುಖ ಸುದ್ದಿಯಾಗಿ ಬಿತ್ತರವಾಗುತ್ತಿದೆ. ನಾಲ್ಕು ಜನರ ಗುಂಪಿನ ಈ ರಾಕ್ ಮ್ಯೂಸಿಕ್​​ನ ತಂಡ ಈಗ ಭಾರತವನ್ನು ಸೇರಿ ವಿಶ್ವಪ್ರವಾಸಕ್ಕೆ ಸಜ್ಜಾಗುತ್ತಿದೆ. ಸದ್ಯ ಭಾರತಕ್ಕೂ ಬರಲಿರುವ ಈ ಕೋಲ್ಡ್​ ಪ್ಲೇಯನ್ನು ಅದ್ಧೂರಿಯಾಗಿ ಸ್ವಾಗತಿಸಲು ಹಾಗೂ ಹುಚ್ಚೆಬ್ಬಿಸುವ ಆ ಸಂಗೀತ ರಸದೌತಣವನ್ನು ಸವಿಯಲು ಭಾರತೀಯರು ಕೂಡ ತುದಿಗಾಲಲ್ಲಿ ನಿಂತಿದ್ದಾರೆ.

2024ರ ಯುರೋಪ್ ಪ್ರವಾಸವನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿದ ಈ ತಂಡ ಈ ಮುಂದಿನ ವರ್ಷ ಅಂದ್ರೆ ಜನವರಿ 18,19 2025ರಲ್ಲಿ ಭಾರತದಲ್ಲಿಯೂ ಕೂಡ ಸಂಗೀತ ಸಂಜೆ ಏರ್ಪಡಿಸಿದೆ. ಕೋಲ್ಡ್‌ ಪ್ಲೇ ಟಿಕೆಟ್​ಗಳು ಗರಿಗರಿ ದೋಸೆಯಂತೆ ಸೇಲ್ ಆಗುತ್ತಿವೆ. 2016ರ ಬಳಿಕ ಈಗ ಮತ್ತೆ ಭಾರತಕ್ಕೆ ಬಂದಿರುವ ಕೋಲ್ಡ್​ ಪ್ಲೇ ಮ್ಯೂಸಿಕ್ ಸಂಜೆಯನ್ನು ಸವಿಯಲು ಭಾರತೀಯರು ಸಜ್ಜಾಗಿದ್ದಾರೆ. ಈ ಒಂದು ಮಹಾ ಸಂಗೀತ ಸಂಜೆಯನ್ನು ಮುಂಬೈನ ಡಿ ವೈ ಪಾಟೀಲ್ ಮೈದಾನದಲ್ಲಿ ಜನವರಿ 18 ಮತ್ತು 19ರಂದು ಏರ್ಪಡಿಸಲಾಗಿದೆ.

ಬ್ರಿಟನ್​ ರಾಕ್​ಸ್ಟಾರ್​ಗಳ ಹಮ್ಮಿಕೊಂಡಿರುವ ಸಂಗೀತ ಸಂಜೆಯನ್ನು ಸವಿಯಲು ಭಾರತೀಯ ಸಂಗೀತ ಪ್ರೇಮಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. 2016ರಿಂದ ಕೋಲ್ಡ್​ ಪ್ಲೇ ಭಾರತಕ್ಕೆ ಮರಳಿ ಬರುವುದನ್ನು ಕಾಯುತ್ತಿದ್ದ ಭಾರತೀಯರಿಗೆ ಈಗ ಹಬ್ಬ. ಹೀಗಾಗಿಯೇ ಸೆಪ್ಟಂಬರ್ 22 ರಂದು ಕೋಲ್ಡ್​ ಪ್ಲೇ ಸಂಗೀತೋತ್ಸವದ ಟಿಕೆಟ್​ ಮಾರಲು ಬುಕ್​ ಮೈ ಶೋ ಸಜ್ಜಾಗಿತ್ತು. ಅಭಿಮಾನಿಗಳು ಟಿಕೆಟ್​ ಖರೀದಿಗೆ ಅದ್ಯಾಯವ ಮಟ್ಟಿಗೆ ಮುಗಿಬಿದ್ದರು ಅಂದ್ರೆ. ಬುಕ್​ ಮೈ ಶೋದ ವೆಬ್​ಸೈಟೇ ಕ್ರ್ಯಾಶ್ ಆಗಿ ಹೋಗಿತ್ತು. ಸದ್ಯ ಡಿ ವೈ ಪಾಟೀಲ್ ಮೈದಾದನದಲ್ಲಿ ನಡೆಯಲಿರುವ ಕೋಲ್ಡ್​ ಪ್ಲೇ ಸಂಗೀತ ಸಂಜೆಯ ಎಲ್ಲಾ ಟಿಕೆಟ್​ಗಳು ಸೋಲ್ಡ್ ಔಟ್ ಆಗಿವೆ. ಅಷ್ಟೇ ಅಲ್ಲ ಬುಕ್‌ ಮೈ ಶೋನಲ್ಲಿ ಬುಕ್ ಆದ ಟಿಕೆಟ್‌ಗಳನ್ನು ಲಕ್ಷ, ಲಕ್ಷ ರೂಪಾಯಿಗೆ ರೀಸೇಲ್ ಮಾಡಲು ಪ್ರಯತ್ನಿಸಲಾಗುತ್ತಿದೆ.

ಇದನ್ನೂ ಓದಿ: ಪಾಕಿಸ್ತಾನವನ್ನು ಸೋಲಿಸಿದ ತಂಡವನ್ನು ಹೊಗಳಿದ ಮೋದಿ.. ಅಮೆರಿಕದಲ್ಲಿ ಪ್ರಧಾನಿ ಕ್ರಿಕೆಟ್ ಬಗ್ಗೆ ಮಾತು

ಟಿಕೆಟ್ ಸಿಗದೇ ನಿರಾಸೆಗೊಂಡಿರುವ ಅಭಿಮಾನಿಗಳು ಇಗ ಮತ್ತೊಂದು ಹೆಜ್ಜೆಯನ್ನಿಟ್ಟಿದ್ದಾರೆ. ಹೇಗಾದರೂ ಮಾಡಿ ಈ ವರ್ಷ ಕೋಲ್ಡ್​ಪ್ಲೇ ನೋಡಲೇಬೇಕು ಎಂದು ತುದಿಗಾಲಲ್ಲಿ ನಿಂತಿರುವ ಅಭಿಮಾನಿಗಳು ಜೆಡಬ್ಲ್ಯೂ ಮ್ಯಾರಿಯೇಟ್​ ಹೋಟೆಲ್​​ನಲ್ಲಿ ರೂಮ್ ಬುಕ್ ಮಾಡಿದ್ದಾರೆ. ಈ ಹೋಟೆಲ್ ಮೇಲೆ ನಿಂತುಕೊಂಡು ನೋಡಿದ್ರೆ ಡಿ ವೈ ಪಾಟೀಲ್ ಮೈದಾನ ಅತ್ಯಂತ ಸಮೀಪದಿಂದ ಹಾಗೂ ಅತ್ಯಂತ ಸ್ಪಷ್ಟವಾಗಿ ಕಾಣುತ್ತದೆ. ಹೀಗಾಗಿಯೇ ಜನವರಿ 18 19 ದಿನಾಂಕದಂದು ಜೆ ಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್​ನ ಎಲ್ಲಾ ರೂಮ್​ಗಳು ಈಗಾಗಲೇ ಬುಕ್ ಆಗಿವೆ. ಅದರ ಜೊತೆಗೆ ಅದರ ಅಕ್ಕಪಕ್ಕದಲ್ಲಿರುವ ಹೋಟೆಲ್​ಗಳ ರೂಮ್​ಗಳು ಕೂಡ ಬುಕ್ ಆಗಿದ್ದು ಕೋಲ್ಡ್ ಪ್ಲೇ ಯಾವ ಮಟ್ಟಿಗೆ ಕ್ರೇಜ್ ಎಬ್ಬಿಸಿದೆ ಅನ್ನೋದಕ್ಕೆ ಇದು ಸಾಕ್ಷಿಯಾಗಿದೆ

ಏನಿದು ಕೋಲ್ಡ್ ಪ್ಲೇ..? ಯಾಕಿಷ್ಟು ಹುಚ್ಚು..?
ಕೋಲ್ಡ್ ಪ್ಲೇ ಅನ್ನೋದು ಬ್ರಿಟಿಷ್​ನ ಒಂದು ರಾಕ್ ಬ್ಯಾಂಡ್ ಸಂಸ್ಥೆ. ಕ್ರಿಸ್ ಮಾರ್ಟಿನ್, ಜಾನಿ ಬಕ್​ಲ್ಯಾಂಡ್ ಗಾಯ್ ಬರಿಽಮ್ಯಾನ್ ವಿಲ್ ಚಾಂಪಿಯನ್​ ಎಂಬ ನಾಲ್ಕು ಯುವಕರು ಸೇರಿ ಸೃಷ್ಟಿಸಿರುವ ರಾಕ್​ ಬ್ಯಾಂಡ್ ಇದು. 1997ರಲ್ಲಿಯೇ ಈ ಒಂದು ತಂಡ ಸೃಷ್ಟಿಯಾಗಿತ್ತು,. ಈ ಹಿಂದೆ ಇದನ್ನು ಬಿಗ್​ ಫ್ಯಾಟ್ ನಾಯ್ಸ್ ಮತ್ತು ಸ್ಟಾರ್​ಫಿಶ್ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಈ ತಂಡದಲ್ಲಿ ಕ್ರಿಸ್ಟ್ ಮಾರ್ಟಿನ್ ಪ್ರಮುಖ ಗಾಯಕ ಹಾಗೂ ಪಿಯಾನೋ ವಾದಕ ಜಾನಿ ಬಕ್ಲ್ಯಾಂಡ್ ಪ್ರಮುಖ ಗೀಟಾರಿಸ್ಟ್, ಬೆರಿಽ ಮ್ಯಾನ್ ಹಾಗೂ ಜಾನಿ ಬಕ್​ಲ್ಯಾಂಡ್ ಈ ತಂಡದ ಡ್ರಮರ್​ ಮತ್ತು ಬಾಸಿಸ್ಟ್​

ಇದನ್ನೂ ಓದಿ: Silver Train; ಜೋ ಬೈಡನ್​ಗೆ ಉಡುಗೊರೆ ನೀಡಿದ ಪ್ರಧಾನಿ ನರೇಂದ್ರ ಮೋದಿ; ಏನಿದರ ವಿಶೇಷತೆ?

ಭಾರತಕ್ಕೂ ಈ ತಂಡಕ್ಕೂ ಕಳೆದ 8 ವರ್ಷಗಳ ನಂಟಿದೆ. 2016ರಲ್ಲಿ ಈ ತಂಡ ಮೊದಲ ಬಾರಿಗೆ ಭಾರತಕ್ಕೆ ಹೈಮ್ ಆಫ್ ವಿಕೇಂಡ್ ಎಂಬ ಕಾರ್ಯಕ್ರಮವನ್ನು ನೀಡಿ ಧೂಳೆಬ್ಬಿಸಿತ್ತು. ಈಗ 2025ರಲ್ಲಿ ಅಂದ್ರೆ 9 ವರ್ಷಗಳ ಬಳಿಕ ಮತ್ತೆ ಭಾರತಕ್ಕೆ ಆಗಿಮಿಸುತ್ತಿದ್ದು. ಇವೆಂಟ್​ನ ಟಿಕೆಟ್​ಗಳು ಹಾಟ್​ ಕೇಕ್​ ತರ ಬಿಕರಿಯಾಗಿವೆ. ಟಿಕೆಟ್ ಪಡೆದುಕೊಂಡು ಅಭಿಮಾನಿಗಳು ಜನವರಿ 18 ಮತ್ತು 19ನೇ ದಿನಾಂಕಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Coldplay ಹವಾ.. ಭಾರತದಲ್ಲಿ ಟಿಕೆಟ್​ ಸೋಲ್ಡ್ ​ಔಟ್.. ಸ್ಟೇಡಿಯಂ ಪಕ್ಕದ ಹೋಟೆಲ್​ಗಳು ಬುಕ್; ಏನಿದರ ಇತಿಹಾಸ?

https://newsfirstlive.com/wp-content/uploads/2024/09/COLD-PLAY-CRAZE.jpg

Load More