newsfirstkannada.com

New criminal laws: ಹೊಸ ಕಾನೂನಿನಲ್ಲಿ ಸಮುದಾಯ ಶಿಕ್ಷೆಗೆ ಅವಕಾಶ.. ಏನಿದು ಕಾನ್ಸೆಪ್ಟ್​..?

Share :

Published July 1, 2024 at 2:49pm

  ರಸ್ತೆ ಕಸ ಗುಡಿಸುವುದು, ಪಾರ್ಕ್ ಕ್ಲೀನ್ ಮಾಡುವುದು

  ಘೋಷಿತ ಅಪರಾಧಿಗೆ 10 ವರ್ಷ/ಜೀವಾವಧಿ ಶಿಕ್ಷೆ

  ನ್ಯಾಯಾಲಯದಲ್ಲಿ ಡಿಜಿಟಲ್​​ಗೆ ಹೆಚ್ಚು ಒತ್ತು

ಬೆಂಗಳೂರು: ದೇಶದಲ್ಲಿ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜಾರಿಯಾಗಿವೆ. ಬ್ರಿಟಿಷರ ಕಾಲದಲ್ಲಿದ್ದ ಐಪಿಸಿ, ಸಿಆರ್​ಪಿಸಿ ಮತ್ತು ಎವಿಡೆನ್ಸ್ ಆ್ಯಕ್ಟ್ ಗಳು ಬದಲಾವಣೆ ಆಗಿವೆ.

IPC ಬದಲಿಗೆ BNS, CRPC ಬದಲಿಗೆ BNSS ಹಾಗೂ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ ಬದಲಿಗೆ ಬಿಎಸ್ಎ ಕಾಯ್ದೆಗಳು ಜಾರಿಯಾಗಿದೆ. ಈ ಕಾಯ್ದೆಯಲ್ಲಿ ಪ್ರಮುಖ ಅಂಶಗಳನ್ನು ಬದಲಾವಣೆ ಆಗಿವೆ. ಜೊತೆಗೆ ಕೆಲವು ಹೊಸ ವಿಚಾರಗಳನ್ನೂ ಸೇರಿಸಲಾಗಿದೆ. ನೂತನ ಕಾನೂನು ಶಿಕ್ಷೆಗಿಂತ ಹೆಚ್ಚು ನ್ಯಾಯಕ್ಕೆ ಕೇಂದ್ರಿಕೃತವಾಗಿದೆ.

ಇದನ್ನೂ ಓದಿ:ಅಪ್ರಾಪ್ತೆ ಮೇಲೆ ಅತ್ಯಾ*ರ ಮಾಡಿದ್ರೆ ಮರಣದಂಡನೆ.. ನೂತನ ಕಾನೂನಿನಲ್ಲಿ ಸಂತ್ರಸ್ತೆಯರ ರಕ್ಷಣೆಗೂ ಹೊಸ ನಿಯಮ..!

ಇನ್ನೊಂದು ವಿಶೇಷ ಅಂದರೆ ಸಮುದಾಯ ಶಿಕ್ಷೆ ನೀಡುವ ಹೊಸ ಕಾನ್ಸೆಪ್ಟ್ ಕೂಡ ಜಾರಿಯಾಗಿದೆ. 5000 ಸಾವಿರ ರೂಪಾಯಿ ಮೌಲ್ಯಕ್ಕಿಂತ ಕಡಿಮೆ ಕಳ್ಳತನ ಪ್ರಕರಣದಲ್ಲಿ ಅಪರಾಧಿ ಭಾಗಿಯಾಗಿದ್ದರೆ ಈ ಶಿಕ್ಷೆ ನೀಡಲಾಗುತ್ತದೆ. 6 ಬಾರಿ ಆತ ಮಾಡಿದ ಅಪರಾಧದಲ್ಲಿ ಸಮುದಾಯ ಶಿಕ್ಷೆ ನೀಡಲಾಗುತ್ತದೆ. ರಸ್ತೆಯಲ್ಲಿ ಕಸ ಗುಡಿಸುವುದು, ಪಾರ್ಕ್ ಕ್ಲೀನ್ ಮಾಡುವುದು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡಿಸುವ ಶಿಕ್ಷೆಯನ್ನು ನೀಡಲಾಗುತ್ತದೆ.

ಘೋಷಿತ ಅಪರಾಧಿಗೆ 10 ವರ್ಷ ಅಥವಾ ಜೀವಾವಧಿ ಶಿಕ್ಷೆಯನ್ನೂ ನೀಡುವ ಅವಕಾಶ ಕಾನೂನಲ್ಲಿದೆ. ವಿದೇಶದಲ್ಲಿರುವ ಅವರ ಆಸ್ತಿ ಮುಟ್ಟುಗೋಲಿಗೂ ಕ್ರಮ ತೆಗೆದುಕೊಳ್ಳಲಾಗುತ್ತದೆ. ಉದಾಹರಣೆಗೆ ಮಲ್ಯ, ನೀರವ್ ಮೋದಿ ಪ್ರಕರಣಗಳು.

ಇದನ್ನೂ ಓದಿ:ನೂತನ ಕ್ರಿಮಿನಲ್ ಕಾನೂನಿನಲ್ಲಿ ಝೀರೋ FIR ಕಾನ್ಸೆಪ್ಟ್​​.. ಏನಿದು ಹೊಸ ನಿಯಮ..?

ನ್ಯಾಯಾಲಯದಲ್ಲಿ ಡಿಜಿಟಲ್​ಗೆ ಹೆಚ್ಚು ಒತ್ತು ನೀಡಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದರೂ ಟ್ರಯಲ್ ನಡೆಯತ್ತದೆ. ಸಾಕ್ಷಿದಾರರು ಫೋನ್, ವಿಡಿಯೋ ಕಾಲ್​ನಲ್ಲಿ ಸಾಕ್ಷಿ ನೀಡಬಹುದು. ಅವರಿದ್ದ ಊರಿನಿಂದಲೇ ಸಾಕ್ಷ್ಯ ನೀಡಲು ಅವಕಾಶ ಇದೆ.

ಇದನ್ನೂ ಓದಿ:ನೂತನ ಕಾನೂನು ಅಡಿಯಲ್ಲಿ ಮೊದಲ ಕೇಸ್ ದಾಖಲು.. ಯಾವ ಐಪಿಸಿ ಸೆಕ್ಷನ್ ಏನೆಂದು ಬದಲಾಗಿದೆ..?

ಇದನ್ನೂ ಓದಿ:ದೇಶದಲ್ಲಿ ಇಂದಿನಿಂದ ಮೂರು ಹೊಸ ಕ್ರಿಮಿನಲ್ ಕಾನೂನು ಜಾರಿ.. ಯಾವುದು ಏನಾಗಿದೆ..?

ಇದನ್ನೂ ಓದಿ:3 ಹೊಸ ಕ್ರಿಮಿನಲ್ ಕಾನೂನು ಜಾರಿ.. ಇವು ನ್ಯಾಯ ವ್ಯವಸ್ಥೆ, ನಾಗರಿಕರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

New criminal laws: ಹೊಸ ಕಾನೂನಿನಲ್ಲಿ ಸಮುದಾಯ ಶಿಕ್ಷೆಗೆ ಅವಕಾಶ.. ಏನಿದು ಕಾನ್ಸೆಪ್ಟ್​..?

https://newsfirstlive.com/wp-content/uploads/2024/07/BNS.jpg

Load More