newsfirstkannada.com

ಚಂದ್ರನ ಮೇಲೆ ನಿದ್ರೆಗೆ ಜಾರಿದ ಪ್ರಗ್ಯಾನ್; ಇದು ಅಂತ್ಯವೋ? ಅಥವಾ ಆರಂಭವೋ?

Share :

03-09-2023

    ಇಸ್ರೋ ನಿಗದಿಪಡಿಸಿದ್ದ ಕಾರ್ಯ ಮುಗಿಸಿರೋ ಪ್ರಗ್ಯಾನ್ ರೋವರ್

    ಶಿವಶಿಕ್ತಿ ಪಾಯಿಂಟ್​ನಿಂದ 100 ಮೀಟರ್​ನಷ್ಟು ಯಶಸ್ವಿ ಪಯಣ

    ನಿದ್ರೆಗೆ ಜಾರಿರೋ ಪ್ರಗ್ಯಾನ್ ರೋವರ್ ಮತ್ತೆ ಏಳೋದು ಯಾವಾಗ?

ಅತ್ತ ಸೂರ್ಯನಿಗೆ ಟಾರ್ಚ್ ಹಿಡಿದಿರೋ ಇಸ್ರೋ, ಆದಿತ್ಯಯಾನದ ಮೂಲಕ ಹೊಸ ಇತಿಹಾಸ ಸೃಷ್ಟಿಗೆ ಸಜ್ಜಾಗಿದೆ. ಇತ್ತ ಚಂದ್ರನ ಮೇಲೆ ಭಾರತದ ಸೆಂಚುರಿಯೂ ದಾಖಲಾಗಿದೆ. ಈ ನಡುವೆ ಲ್ಯಾಂಡರ್​, ರೋವರ್ ನಿದ್ರಾವಸ್ಥೆಗೆ ಜಾರಿದೆ. ಆದ್ರೆ ಇದು ಅಂತ್ಯನಾ ಖಂಡಿತಾ ಅಲ್ಲ. ಒಂದರ ಹಿಂದೆ ಒಂದರಂತೆ ಸಾಧನೆಯ ಮೈಲಿಗಲ್ಲು ನೆಡ್ತಿರೋ ಇಸ್ರೋ ವಿಜ್ಞಾನಿಗಳು, ಬಾಹ್ಯಾಕಾಶದ ಹೊಸ ಹೊಸ ಸತ್ಯಗಳನ್ನ, ರಹಸ್ಯಗಳನ್ನ ಬೇಧಿಸ್ತಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್-ಪ್ರಗ್ಯಾನ್ ಪವರ್
ಚಂದಮಾಮನ ಅಂಗಳದಲ್ಲಿ ಶತಕ ಸಿಡಿಸಿದ ರೋವರ್

ಚಂದ್ರನ ದಕ್ಷಿಣ ಧ್ರುವದಲ್ಲಿ ತಮ್ಮದೇ ಚರಿತ್ರೆ ಸೃಷ್ಟಿಸಲು ಮುಂದಾಗಿದ್ದ ವಿಕ್ರಮ್-ಪ್ರಗ್ಯಾನ್ ತನ್ನ ತಾಕತ್ತನ್ನು ಪ್ರದರ್ಶಿಸಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ಖನಿಜಗಳು ಇರುವಿಕೆಯನ್ನೂ ಪತ್ತೆ ಹಚ್ಚಿತ್ತು. ಈ ಮೂಲಕ ಇಡೀ ಜಗತ್ತನ್ನೇ ಮತ್ತೆ ತನ್ನತ್ತ ನೋಡುವಂತೆ ಮಾಡಿತ್ತು. ಚಂದ್ರನ ಮೇಲ್ಮೈ ಮೇಲೆ ಸಲ್ಫರ್, ಅಲ್ಯೂಮಿನಿಯಂ, ಕ್ಯಾಲ್ಶಿಯಂ ಸೇರಿ ಹಲವು ಖನಿಜಾಂಶಗಳ ಕೋಟೆಯನ್ನೇ ಈ ಜೋಡಿ ಬೇಧಿಸಿತ್ತು. ಅಷ್ಟೇ ಅಲ್ಲದೇ ಮಾನವ ಜೀವಿಸೋದಕ್ಕೆ ಅತ್ಯಗತ್ಯವಾಗಿರೋ ಆಮ್ಲಜನಕ ಕೂಡ ಚಂದ್ರನ ದಕ್ಷಿಣ ಧ್ರುವದಲ್ಲಿ ಇರೋದನ್ನೂ ಪ್ರಗ್ಯಾನ್ ಪತ್ತೆ ಹಚ್ಚಿತ್ತು. ಈ ನಡುವೆ ಪ್ರಜ್ಞಾನ್​​ ರೋವರ್​ ಚಂದಿರನ ಮೇಲೆ 100 ಮೀಟರ್​ ಸಂಚಾರ ನಡೆಸಿದೆ. ಈ ಬಗ್ಗೆ ಖುದ್ದು ಇಸ್ರೋ ಸಂಸ್ಥೆ ಮಾಹಿತಿ ನೀಡಿದೆ.

ಇದು ಇಸ್ರೋ ರಿಲೀಸ್ ಮಾಡಿರೋ ಫೋಟೋಗಳು.. ಚಂದ್ರನ ಮೇಲೆ ಪ್ರಗ್ಯಾನ್ ಓಡಾಟದ ಫೋಟೋಗಳನ್ನ ಇಸ್ರೋ ಎಕ್ಸ್​ನಲ್ಲಿ ಹಂಚಿಕೊಂಡಿದೆ. ಈ ಫೋಟೋವನ್ನ ಸೂಕ್ಷ್ಮವಾಗಿ ಗಮನಿಸಿದ್ರೆ, ಶಿವಶಿಕ್ತಿ ಪಾಯಿಂಟ್​ನಿಂದ ಸುಮಾರು 100 ಮೀಟರ್​ನಷ್ಟು ದೂರದವರೆಗೆ ಚಲಿಸಿರೋದನ್ನ ಕಾಣಬಹುದು. ಮಾರ್ಗ ಮಧ್ಯೆ ದೊಡ್ಡ ಕುಳಿಯೊಂದು ಎದುರಾದ ಕಾರಣ ಪ್ರಗ್ಯಾನ್ ತನ್ನ ಪಥವನ್ನ ಬದಲಿಸಿತ್ತು. ಹೀಗೆ ಮಾರ್ಗವನ್ನ ಬದಲಿಸಿದ್ದ ರೋವರ್ ಮುಂದೆ ಸಾಗಿ ಅಧ್ಯಯನ ನಡಿಸಿತ್ತು. ಇದೆಲ್ಲವೂ ಇಸ್ರೋ ರಿಲೀಸ್ ಮಾಡಿರೋ ಫೋಟೋದಲ್ಲಿ ಸ್ಪಷ್ಟವಾಗಿ ಗೋಚರಿಸ್ತಿದೆ. ಇನ್ನು, ವಿಕ್ರಮ್ ಲ್ಯಾಂಡರ್ ಶಿವಶಕ್ತಿ ಪಾಯಿಂಟ್ ಬಳಿಯೇ ಇದ್ದು, ಪ್ರಗ್ಯಾನ್ ಪತ್ತೆ ಹಚ್ತಿರೋ ಮಾಹಿತಿಯನ್ನ ಪಡೆದುಕೊಳ್ತಿದೆ.

ಇದನ್ನೂ ಓದಿ: ಸೂರ್ಯನ ಸುತ್ತ ಆದಿತ್ಯ ಎಲ್​-1 ಮಿಷನ್ ಅಧ್ಯಯನ; ಬೆಂಕಿ ಚೆಂಡಿನ ಹಿಂದಿದೆ ಅದೊಂದು ಮಹತ್ವದ ಗುರಿ!

ಹೊಸ ಹೊಸ ಮಾಹಿತಿಗಳನ್ನ ಕಲೆಹಾಕ್ತಾ ಚಂದ್ರನ ರಹಸ್ಯಗಳನ್ನ ಬಿಚ್ಚಿಡ್ತಾ ಸಾಗಿದ್ದ ಪ್ರಗ್ಯಾನ್ ರೋವರ್ ತನ್ನ ಕಾರ್ಯಾಚರಣೆಯನ್ನ ಮುಕ್ತಾಯಗೊಳಿಸಿದೆ. ಹೀಗೆ ಸತತವಾಗಿ ಸಂಚಿರರೋ ಪ್ರಗ್ಯಾನ್ ಹಾಗೂ ತನ್ನ ಜೀವದ ಗೆಳೆಯ ವಿಕ್ರಮ್, ಚಂದಿರನ ಅಂಗಳದಲ್ಲಿಯೇ ನಿದ್ರೆಗೆ ಜಾರಿವೆ.

ನಿದ್ರೆಗೆ ಜಾರಿದ ಪ್ರಗ್ಯಾನ್

ಇಸ್ರೋ ನಿಗದಿಪಡಿಸಿದ್ದ ಕಾರ್ಯ ಮುಗಿಸಿರೋ ಪ್ರಗ್ಯಾನ್

ಪ್ರಗ್ಯಾನ್​ ರೋವರ್​ನ್ನ ಸ್ಲೀಪ್ ಮೋಡ್‌ನಲ್ಲಿ ಇಡಲಾಗಿದೆ

APXS ಮತ್ತು LIBS ಪೇಲೋಡ್‌ ಆಫ್ ಮಾಡಲಾಗಿದೆ

ಪೇಲೋಡ್‌ಗಳಲ್ಲಿರೋ ಡಾಟಾ ಲ್ಯಾಂಡರ್​ನಿಂದ ರವಾನೆ

ಪೂರ್ಣ ಪ್ರಮಾಣದಲ್ಲಿ ಚಾರ್ಜ್​ನಲ್ಲಿರುವ ಬ್ಯಾಟರಿ

ಚಂದ್ರನ ಮೇಲೆ ಸೆಪ್ಟೆಂಬರ್ 22ಕ್ಕೆ ಬೀಳಲಿದೆ ಸೂರ್ಯನ ಬೆಳಕು

ಸೋಲಾರ್​ ಪ್ಯಾನಲ್​ ರಿಸೀವರ್​ ಆನ್​ನಲ್ಲಿ ಇರಲಿದೆ

ಇಲ್ಲಿಗೆ ಪ್ರಗ್ಯಾನ್ ಪರಾಕ್ರಮ ಅಂತ್ಯವಾಯ್ತು ಅಂತಲ್ಲ.. ಅಸಲಿಗೆ ಇಲ್ಲಿಂದಲೇ ಶುರುವಾಗೋದು. ಸದ್ಯಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಿ ವಿಶ್ರಾಂತಿಗೆ ಜಾರಿರೋ ರೋವರ್ 14 ದಿನದ ಬಳಿಕ ಮತ್ತೆ ಸಕ್ರಿಯಗೊಳ್ಳಲಿದೆ. ಸೂರ್ಯನ ಬೆಳಕಿನ ಕಿರಣವನ್ನ ಪಡೆದುಕೊಂಡು ಮತ್ತೆ ಉತ್ಸಾಹ ತುಂಬಿಕೊಳ್ಳಲಿರೋ ಪ್ರಗ್ಯಾನ್ ಮತ್ತೊಂದು ಸುತ್ತಿನ ಅಸೈನ್‌ಮೆಂಟ್‌ಗೆ ಸಿದ್ಧವಾಗುವ ಭರವಸೆ ಇದೆ.

ಒಂದು ವೇಳೆ 14 ದಿನಗಳ ಬಳಿಕ ಪ್ರಗ್ಯಾನ್ ಮರಳಿ ಕಾರ್ಯ ನಿರ್ವಹಿಸಲು ಸಾಧ್ಯವಾಗದಿದ್ದರೆ, ಭಾರತದ ಚಂದ್ರನ ರಾಯಭಾರಿಯಾಗಿ ಶಾಶ್ವತವಾಗಿ ಉಳಿಯಲಿದೆ ಅಂತಾ ಇಸ್ರೋ ತಿಳಿಸಿದೆ. ಆದ್ರೆ ಮತ್ತೊಂದು ಸುತ್ತಿನ ಕಾರ್ಯಾಚರಣೆಗೆ ಸಿದ್ಧವಾಗಲಿದೆ ಅನ್ನೋ ವಿಶ್ವಾಸ ವಿಜ್ಞಾನಿಗಳದ್ದು. ಹೀಗಾಗಿ ಸೆಪ್ಟೆಂಬರ್​ 22ರ ಚಂದ್ರನ ಮೇಲೆ ಬೀಳೋ ಸೂರ್ಯನ ಕಿರಣದ ಮೇಲೆ ಇಸ್ರೋ ಕಣ್ಣಿಟ್ಟು ಕಾಯುತ್ತಿದೆ. ಈ ನಡುವೆ ರೋವರ್​ ಇದುವರೆಗೂ ಸಂಗ್ರಹಿಸಿರೋ ಮಾಹಿತಿ ಆಧಾರದಲ್ಲಿ ವಿಜ್ಞಾನಿಗಳು ಸಂಶೋಧನೆಗಳನ್ನ, ಅಧ್ಯಯನಗಳನ್ನ ಮುಂದುವರಿಸಲಿದ್ದಾರೆ. 14 ದಿನಗಳ ಬಳಿಕ ಚಂದ್ರ ದಕ್ಷಿಣ ಧ್ರುವದಲ್ಲಿ ಮತ್ತೆ ರೋವರ್ ಌಕ್ಟಿವ್ ಆದ್ರೆ, ಮತ್ತೊಂದು ಮೈಲಿಗಲ್ಲು ಸಾಧಿಸಿದಂತೆ. ಆಗ ಭಾರತ ಮತ್ತಷ್ಟು ಸಮಯ ಚಂದ್ರನ ಮೇಲಿನ ಪಯಣ ಕಂಟಿನ್ಯೂ ಆಗೋ ಸಾಧ್ಯತೆಯೂ ಇರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಚಂದ್ರನ ಮೇಲೆ ನಿದ್ರೆಗೆ ಜಾರಿದ ಪ್ರಗ್ಯಾನ್; ಇದು ಅಂತ್ಯವೋ? ಅಥವಾ ಆರಂಭವೋ?

https://newsfirstlive.com/wp-content/uploads/2023/08/Isro-12.jpg

Load More