newsfirstkannada.com

×

ಕನಿಮೋಳಿಗೆ ಬಸ್​​ನಲ್ಲಿ ಅವಮಾನ; ಬೇಸತ್ತು ಕೆಲಸ ಬಿಟ್ಟ ಲೇಡಿ ಡ್ರೈವರ್​​ಗೆ ಕಮಲ್ ಹಾಸನ್​ ಕೊಟ್ಟ ಗಿಫ್ಟ್​​ ಏನು?

Share :

Published June 26, 2023 at 9:05pm

Update June 26, 2023 at 9:08pm

    ಕನಿಮೋಳಿ ಬಸ್ ಟಿಕೆಟ್‌ನಿಂದ ಕೆಲಸ ಕಳ್ಕೊಂಡ ಲೇಡಿ ಡ್ರೈವರ್!

    ಕನಿಮೋಳಿಗೆ ಟಿಕೆಟ್ ಖರೀದಿಸುವಂತೆ ಕೇಳಿದ ಕಂಡಕ್ಟರ್‌ ಕಿರಿಕ್

    ಕೆಲಸ ಕಳ್ಕೊಂಡ ಮಹಿಳಾ ಚಾಲಕಿಗೆ ಕಮಲ್ ಹಾಸನ್ ಅಭಯ

ಕೊಯಮತ್ತೂರು: ಡಿಎಂಕೆ ಸಂಸದೆ ಕನಿಮೋಳಿ ಅವರು ಖಾಸಗಿ ಬಸ್‌ನಲ್ಲಿ ಪ್ರಯಾಣ ಮಾಡಿದ್ದ ವಿವಾದ ಹಾಗೂ ಲೇಡಿ ಡ್ರೈವರ್, ಕಂಡಕ್ಟರ್‌ ಗಲಾಟೆ ಪ್ರಕರಣಕ್ಕೆ ತಮಿಳುನಾಡಿನಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ಬಸ್‌ ಹತ್ತಿದ ಸಂಸದೆ ಕನಿಮೋಳಿ ಅವರು ಟಿಕೆಟ್ ಖರೀದಿಸಿದ್ದಾರೆ ಅನ್ನೋದೇ ಒಂದು ವಿವಾದವಾದ್ರೆ, ಮಹಿಳಾ ಡ್ರೈವರ್ ತನಗಾದ ಅವಮಾನ ಸಹಿಸಲಾಗದೆ ತಮ್ಮ ಕೆಲಸಕ್ಕೆ ಗುಡ್‌ಬೈ ಹೇಳಿದ್ರು. ಇದೀಗ ಮಹಿಳಾ ಡ್ರೈವರ್ ನೆರವಿಗೆ ನಟ, ರಾಜಕಾರಣಿ ಕಮಲ್ ಹಾಸನ್ ಧಾವಿಸಿದ್ದು, ಕಾರೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಏನಿದು ಕನಿಮೋಳಿ ಬಸ್ ಟಿಕೆಟ್ ಗಲಾಟೆ ಅನ್ನೋದಕ್ಕೆ ಈ ಸ್ಟೋರಿ ಓದಿ.

ಏನಿದು ಕನಿಮೋಳಿ ಟಿಕೆಟ್ ಗಲಾಟೆ?
ಇತ್ತೀಚೆಗೆ ಡಿಎಂಕೆ ಸಂಸದೆ ಕನಿಮೋಳಿ ಅವರು ಖಾಸಗಿ ಬಸ್‌ನಲ್ಲಿ ಕೊಯಮತ್ತೂರಿನ ಗಾಂಧಿಪುರಂನಿಂದ ಪೆಲ್ಲಮೆಡುಗೆ ಪ್ರಯಾಣ ಬೆಳೆಸಿದ್ದರು. ಬಸ್ ಹತ್ತಿದ ಕನಿಮೋಳಿ ಅವರನ್ನು ಮಹಿಳಾ ಕಂಡಕ್ಟರ್‌ ಟಿಕೆಟ್ ಖರೀದಿಸುವಂತೆ ಕೇಳಿದ್ದರು. ಕಂಡಕ್ಟರ್ ಕೇಳಿದಂತೆ ಕನಿಮೋಳಿ ಅವರು ಬಸ್‌ ಟಿಕೆಟ್ ಖರೀದಿಸಿದ್ದಾರೆ ಎನ್ನಲಾಗಿದೆ. ಆದರೆ, ಕಂಡಕ್ಟರ್ ಡಿಎಂಕೆ ಸಂಸದೆಗೆ ಮಾತ್ರ ಟಿಕೆಟ್ ಕೇಳಿ ಬಿಜೆಪಿ ಬೆಂಬಲಿಗರಿಗೆ ಟಿಕೆಟ್ ಕೇಳಿಲ್ಲ ಅನ್ನೋದು ಗಲಾಟೆಗೆ ಕಾರಣವಾಗಿತ್ತು. ಕನಿಮೋಳಿಗೆ ಟಿಕೆಟ್ ಕೇಳಿದ ಕಂಡಕ್ಟರ್ ವರ್ತನೆಗೆ ಲೇಡಿ ಡ್ರೈವರ್ ಆಗಿದ್ದ ಶರ್ಮಿಳಾ ಆಕ್ಷೇಪ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: 2ನೇ ಮಗುವಿನ ನಿರೀಕ್ಷೆಯಲ್ಲಿ ಸ್ಟಾರ್​ ಡೈರೆಕ್ಟರ್​​ ಪವನ್ ಒಡೆಯರ್ ದಂಪತಿ

ಲೇಡಿ ಕಂಡಕ್ಟರ್ ಹಾಗೂ ಡ್ರೈವರ್ ಮಧ್ಯೆ ಕನಿಮೋಳಿ ಟಿಕೆಟ್ ಖರೀದಿಸಿದ ವಿಚಾರವೇ ವಾಗ್ವಾದಕ್ಕೆ ಕಾರಣವಾಗಿತ್ತು. ಕನಿಮೋಳಿ ಅವರು ಖಾಸಗಿ ಬಸ್‌ ಅನ್ನು ಹತ್ತುತ್ತಾರೆ ಅನ್ನೋದು ಗೊತ್ತಿದ್ದರು ಬಸ್ ಸಂಸ್ಥೆಯ ಮಾಲೀಕರು ಸರಿಯಾದ ಮಾಹಿತಿ ನೀಡಿಲ್ಲ ಎನ್ನಲಾಗಿತ್ತು. ಡಿಎಂಕೆ ಕನಿಮೋಳಿ ಅವರಿಗೆ ಬಸ್ ಕಂಡಕ್ಟರ್ ಹಾಗೂ ಬಸ್ ಮಾಲೀಕರು ಅಗೌರವ ತೋರಿದ್ದಾರೆ ಎಂದು ಲೇಡಿ ಕಂಡಕ್ಟರ್ ತನ್ನ ವೃತ್ತಿಗೆ ಗುಡ್‌ಬೈ ಹೇಳಿದ್ದರು. ಮಹಿಳಾ ಕಂಡಕ್ಟರ್ ಹಾಗೂ ಸಂಸದೆ ಕನಿಮೋಳಿ ನಡೆಸಿದ ಚರ್ಚೆ ಸಾಕಷ್ಟು ವೈರಲ್ ಕೂಡ ಆಗಿತ್ತು.

ಲೇಡಿ ಡ್ರೈವರ್ ಶರ್ಮಿಳಾ ಕೊಯಮತ್ತೂರಲ್ಲೇ ಮೊಟ್ಟ ಮೊದಲ ಲೇಡಿ ಡ್ರೈವರ್ ಆಗಿದ್ದರು. ಕನಿಮೋಳಿ ಟಿಕೆಟ್ ಗಲಾಟೆಯಿಂದ ಪ್ರತಿದಿನ ಬಸ್ ಸ್ಟೇರಿಂಗ್ ಹಿಡಿದು ದುಡಿಯುತ್ತಿದ್ದ ಶರ್ಮಿಳಾ ಕೆಲಸ ಕಳೆದುಕೊಂಡಿದ್ದಾಳೆ. ಶರ್ಮಿಳಾ ಈ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡ ಕಮಲ್ ಹಾಸನ್ ತನ್ನ ಕಚೇರಿಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಶರ್ಮಿಳಾ ಉದ್ಯಮಿಯಾಗಿ ಬೆಳೆಯಲು ಎಂದು ಹಾರೈಸಿ ಕಾರೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಕಮಲ್ ಹಾಸನ್ ನೆರವಿನಿಂದ ಬಸ್ ಡ್ರೈವಿಂಗ್ ಕೆಲಸ ಕಳೆದುಕೊಂಡ ಶರ್ಮಿಳಾ ಸದ್ಯ ಕಾರಿನ ಮಾಲೀಕಳಾಗಿದ್ದಾಳೆ. ಇದೇ ಕಾರಿನಿಂದ ಸ್ವಂತ ಟ್ರಾವೆಲ್ ಉದ್ಯಮ ಆರಂಭಿಸೋ ವಿಶ್ವಾಸ ವ್ಯಕ್ತಪಡಿಸಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಕನಿಮೋಳಿಗೆ ಬಸ್​​ನಲ್ಲಿ ಅವಮಾನ; ಬೇಸತ್ತು ಕೆಲಸ ಬಿಟ್ಟ ಲೇಡಿ ಡ್ರೈವರ್​​ಗೆ ಕಮಲ್ ಹಾಸನ್​ ಕೊಟ್ಟ ಗಿಫ್ಟ್​​ ಏನು?

https://newsfirstlive.com/wp-content/uploads/2023/06/Kamal-Hassan.jpg

Load More