newsfirstkannada.com

Kavach: ಕವಚ್ ಅಳವಡಿಸಿದ್ದರೆ ಒಡಿಶಾ ರೈಲು ದುರಂತ ತಪ್ಪಿಸಬಹುದಿತ್ತು; ಈ ತಂತ್ರಜ್ಞಾನದ ವಿಶೇಷ ಏನು?

Share :

03-06-2023

    ಈ ರಕ್ಷಾಕವಚ ಅಳವಡಿಸಿದ್ದರೆ ದುರಂತ ತಪ್ಪಿಸಬಹುದಿತ್ತು

    ಕವಚ್ ಇದ್ದಿದ್ದರೆ ನೂರಾರು ಜನರು ಊರು ಸೇರುತ್ತಿದ್ದರು

    ಕವಚ್ ಎಂದರೇನು? ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ?

ಕವಚ್ ಅನ್ನೋದು ರೈಲು ಅಪಘಾತವನ್ನು ತಪ್ಪಿಸೋ ಅತ್ಯಾಧುನಿಕ ತಂತ್ರಜ್ಞಾನ. ಇದೊಂದು ರಕ್ಷಾಕವಚ ಅಳವಡಿಸಿದ್ದರೆ ನಿನ್ನೆ ರಾತ್ರಿ ಒಡಿಶಾದಲ್ಲಿ ದುರಂತವೇ ಸಂಭವಿಸುತ್ತಿರಲಿಲ್ಲ. ಸಾವಿರಾರು ಪ್ರಯಾಣಿಕರು ನೆಮ್ಮದಿಯಾಗಿ ತಮ್ಮ, ತಮ್ಮ ಊರುಗಳನ್ನ ತಲುಪಬಹುದಿತ್ತು.

ಒಡಿಶಾದ ಬಾಲಾಸೋರ್‌ ರೈಲ್ವೆ ಮಾರ್ಗದಲ್ಲಿ ಕವಚ್ ರಕ್ಷಣಾ ವ್ಯವಸ್ಥೆ ಇದ್ದಿದ್ದರೇ ನಿನ್ನೆಯ ಅಪಘಾತ ತಪ್ಪಿಸಬಹುದಿತ್ತು. ಕವಚ್ ತಂತ್ರಜ್ಞಾನ ಅಳವಡಿಸಿದ್ದರೆ ಎರಡು ರೈಲುಗಳು ಒಂದೇ ಹಳಿ ಮೇಲೆ ಬಂದಾಗ 400 ಮೀಟರ್ ಅಂತರದಲ್ಲಿ ನಿಲ್ಲುತ್ತಿದ್ದವು. ಈ ರಕ್ಷಣಾ ವ್ಯವಸ್ಥೆ ಇದ್ದಾಗ ರೈಲುಗಳು ಪರಸ್ಪರ ಮುಖಾಮುಖಿ ಡಿಕ್ಕಿ ಹೊಡೆಯುತ್ತಿರಲಿಲ್ಲ.

ಕವಾಚ್ ಎಂದರೇನು?
2012ರಲ್ಲಿ ಟ್ರೈನ್‌ಗಳು ಮುಖಾಮುಖಿ ಡಿಕ್ಕಿಯಾಗುವುದನ್ನ ತಪ್ಪಿಸಲು ಈ ತಂತ್ರಜ್ಞಾನವನ್ನು ಕಂಡು ಹಿಡಿಯಲಾಯಿತು. ನಂತರ ಅದನ್ನು ಕವಾಚ್ ಎಂದು ನಾಮಕರಣ ಮಾಡಲಾಯಿತು. ಈ ರಕ್ಷಾಕವಚವನ್ನು ಮೇಧಾ ಸರ್ವೋ ಡ್ರೈವ್ಸ್ ಪ್ರೈವೇಟ್ ಲಿಮಿಟೆಡ್, ಎಚ್‌ಬಿಎಲ್ ಪವರ್ ಸಿಸ್ಟಮ್ಸ್ ಲಿಮಿಟೆಡ್ ಮತ್ತು ಕೆರ್ನೆಕ್ಸ್ ಮೈಕ್ರೋಸಿಸ್ಟಮ್‌ಗಳ ಸಹಯೋಗದೊಂದಿಗೆ ಭಾರತೀಯ ರೈಲ್ವೆಯ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ ಅಭಿವೃದ್ಧಿಪಡಿಸಿದೆ.

ಇದನ್ನೂ ಓದಿ: Kavach: ಕವಚ್ ಅಳವಡಿಸಿದ್ದರೆ ಒಡಿಶಾ ರೈಲು ದುರಂತ ತಪ್ಪಿಸಬಹುದಿತ್ತು; ಈ ತಂತ್ರಜ್ಞಾನದ ವಿಶೇಷ ಏನು?

ಕವಚ್ ಹೇಗೆ ಕೆಲಸ ಮಾಡುತ್ತೆ?
ಕವಾಚ್‌ನಲ್ಲಿ ರೇಡಿಯೋ ಫ್ರೀಕ್ವೆನ್ಸಿ ಉಪಕರಣಗಳನ್ನು ರೈಲು ಹಳಿಗಳು, ರೈಲ್ವೇ ಹಳಿಗಳಲ್ಲಿ ಸಿಗ್ನಲಿಂಗ್ ಸಾಧನಗಳು ಮತ್ತು ರೈಲು ಮೋಟಾರ್‌ಗಳಲ್ಲಿ ನಿರಂತರವಾಗಿ ಸಂದೇಶಗಳನ್ನು ರವಾನಿಸಲು ಇರಿಸಲಾಗುತ್ತದೆ. ಇದು ರೈಲು ಓಡುತ್ತಿರುವ ಹಳಿಯ ಮಾರ್ಗವು ಅಡೆತಡೆಗಳಿಂದ ಮುಕ್ತವಾಗಿದೆ ಎನ್ನುವುದನ್ನು ಖಚಿತಪಡಿಸುತ್ತದೆ. ಅಲ್ಲದೇ ಯಾವುದೇ ಒಂದು ರೈಲು ಕೆಂಪು ಸಿಗ್ನಲ್ ಅಲ್ಲಿ ಚಲಿಸಿದಾಗ, ಹಾಗೆ ಮಾಡಲು ಅನುಮತಿಸದಿದ್ದರೆ, ಅಪಾಯದಲ್ಲಿರುವ ಸಂದೇಶವನ್ನು ರವಾನಿಸುತ್ತದೆ.

ರೈಲಿನಲ್ಲಿ ಲೋಕೊ ಪೈಲಟ್‌ ರೈಲಿನ ವೇಗವನ್ನು ನಿರ್ವಹಿಸಲು ವಿಫಲವಾದ ಸಂದರ್ಭದಲ್ಲಿ, ‘ಕವಾಚ್’ ಸ್ವಯಂಚಾಲಿತವಾಗಿ ಬ್ರೇಕ್‌ಗಳನ್ನು ಅನ್ವಯಿಸುವ ಮೂಲಕ ವೇಗವನ್ನು ನಿರ್ವಹಿಸುತ್ತದೆ. ಹೈ-ಫ್ರೀಕ್ವೆನ್ಸಿ ರೇಡಿಯೋ ಸಂಪರ್ಕವನ್ನು ಬಳಸಿಕೊಂಡು, ಇದು ನಿರಂತರ ಚಲನೆಯ ನವೀಕರಣಗಳ ತತ್ವಗಳ ಮೇಲೆ ಕಾರ್ಯನಿರ್ವಹಿಸುತ್ತದೆ.

ಕಳೆದ ಒಂದು ವರ್ಷದ ಹಿಂದೆಯೇ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕವಚ ರಕ್ಷಣಾ ವ್ಯವಸ್ಥೆ ಬಗ್ಗೆ ಖುದ್ದು ವಿವರಣೆ ನೀಡಿದ್ದರು. ನಂತರ ದೇಶದ ಹಲವೆಡೆ ಕವಚ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಆದರೆ ದೇಶಾದ್ಯಂತ ಕವಚ್ ತಂತ್ರಜ್ಞಾನವನ್ನು ಅಳವಡಿಸುವಲ್ಲಿ ರೈಲ್ವೆ ಇಲಾಖೆಯು ಹಿಂದೆ ಬಿದ್ದಿದೆ. ಈ ವಿಳಂಬ ಧೋರಣೆಯಿಂದಾಗಿ ಒಡಿಶಾದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ಅಪಘಾತಕ್ಕೀಡಾದ ರೈಲುಗಳಿಗೆ ಕವಚ್ ವ್ಯವಸ್ಥೆ ಅಳವಡಿಸದ್ದರೆ 240ಕ್ಕೂ ಹೆಚ್ಚು ಪ್ರಯಾಣಿಕರು ಬಲಿಯಾಗುವುದನ್ನ ತಪ್ಪಿಸಬಹುದಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

Kavach: ಕವಚ್ ಅಳವಡಿಸಿದ್ದರೆ ಒಡಿಶಾ ರೈಲು ದುರಂತ ತಪ್ಪಿಸಬಹುದಿತ್ತು; ಈ ತಂತ್ರಜ್ಞಾನದ ವಿಶೇಷ ಏನು?

https://newsfirstlive.com/wp-content/uploads/2023/06/Kavach.jpg

Load More