ಮೀನು ಹಿಡಿಯಲು ಹೋಗಿ ಇಬ್ಬರು ಯುವಕರು ಸಾವು
ನದಿ ನೀರಿನಲ್ಲಿ ಸಿಲುಕಿಕೊಂಡ ಪ್ರವಾಸಿಗನ ಪರದಾಟ
ಮಂಗಳೂರಿನ ಈ ಪ್ರದೇಶಗಳಲ್ಲಿ ಜಲಾವೃತದ ಭೀತಿ
ರಾಜ್ಯದಾದ್ಯಂತ ಮಳೆಯ ಅಬ್ಬರ ಜೋರಾಗಿದೆ. ಕೆಲವು ಜೆಲ್ಲೆಗಳಲ್ಲಿ ಕೆರೆ, ನದಿಗಳು ತುಂಬಿ ಹರಿಯುತ್ತಿವೆ. ತುಮಕೂರಿನಲ್ಲಿ ಮಳೆಗೆ ಮೀನು ಹಿಡಿಯಲು ಹೋದ ಇಬ್ಬರು ಸಾವನ್ನಪ್ಪಿದ್ದರೆ, ಮಂಗಳೂರಿನ ಕೆಲವು ಪ್ರದೇಶದಲ್ಲಿ ಜಲಾವೃತದ ಭೀತಿ ಎದುರಾಗಿದೆ. ಚಿಕ್ಕಮಗಳೂರಿನಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅಂದಹಾಗೆಯೇ ಧಾರಾಕಾರ ಮಳೆಗೆ ರಾಜ್ಯದ ಸ್ಥಿತಿಗತಿ ಹೇಗಿದೆ? ಎಂಬ ಬಗ್ಗೆ ಸಂಕ್ಷಿಪ್ತ ನೊಟ ಇಲ್ಲಿದೆ.
ಇಬ್ಬರು ಯುವಕರು ಸಾವು
ತುಮಕೂರಿನಲ್ಲಿ ಮೀನು ಹಿಡಿಯಲು ಹೋಗಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಗುಬ್ಬಿ ತಾಲೂಕಿನ ಕಡಬ ಕೆರೆಗೆ 31 ವರ್ಷದ ಹರೀಶ್ ಹಾಗೂ 36 ವರ್ಷದ ಯೋಗಿಶ್ ಎಂಬವರು ಮೀನು ಹಿಡಿಯಲು ಕೆರೆಗೆ ಹೋಗಿದ್ದು, ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮುಂಜಾನೆ ವಿಷಯ ತಿಳಿದು, ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಇಬ್ಬರು ಮೃತ ಯುವಕರನ್ನು ಮೇಲೆತ್ತಿದ್ದಾರೆ.
ನದಿ ನೀರಿನಲ್ಲಿ ಸಿಲುಕಿಕೊಂಡ ಪ್ರವಾಸಿಗ
ಹಾಸನದ ಮಲೆನಾಡು ಭಾಗದಲ್ಲಿ ಭಾರೀ ಮಳೆಯಿಂದ ಮೂಕನಮನೆ ಜಲಪಾತದಲ್ಲಿ ಏಕಾಏಕಿ ನೀರಿನ ಹರಿವು ಹೆಚ್ಚಾಗಿದೆ. ಜಲಪಾತ ವೀಕ್ಷಣೆ ವೇಳೆ ದಿಢೀರ್ ನೀರು ಏರಿಕೆಯಾಗಿದ್ದು, ಪ್ರವಾಸಿಗರೊಬ್ಬರು ಸುತ್ತಲೂ ನೀರು ಆವರಿಸಿಕೊಂಡು ನಡುವೆ ಸಿಲುಕಿಕೊಂಡ ಘಟನೆ ನಡೆದಿದೆ.
ಸ್ನೇಹಿತರ ಜೊತೆ ಬೆಂಗಳೂರಿನಿಂದ ಸಕಲೇಶಪುರ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗ ಸಂಜಯ್ ನೀರಲ್ಲಿ ಸಿಲುಕಿದ್ದಾರೆ. ಈ ವೇಳೆ ಸಂಜಯ್ಗೆ ರಕ್ಷಣಾ ಕವಚ ನೀಡಿ, ಹಗ್ಗಕಟ್ಟಿ ಆತನ ಮಿತ್ರರು ಹಾಗೂ ಪೊಲೀಸರು ಪ್ರಾಣಾಪಾಯದಿಂದ ಪಾರು ಮಾಡಿ ರಕ್ಷಿಸಿದ್ದಾರೆ.
ಭೋರ್ಗರೆಯುವ ಹೇಮಾವತಿ
ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ ಮುಂದುವರೆದಿದ್ದು ಮೂಡಿಗೆರೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಳೆಗೆ ನದಿಗಳೆಲ್ಲಾ ಮೈದುಂಬಿ ಹರಿಯುತ್ತಿವೆ. ತುಂಗ-ಭದ್ರಾ, ಹೇಮಾವತಿ ನದಿ ನೀರಿನ ಹರಿವಿನಲ್ಲಿ ಹೆಚ್ಚಳ ಉಂಟಾಗಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹೇಮಾವತಿ ನದಿ ತೀರದ ಬಕ್ಕಿ, ಕಿತ್ತಲೆಗಂಟೆ ಪ್ರದೇಶಗಳು ಪ್ರವಾಹ ಭೀತಿಯಲ್ಲಿವೆ.
ಬಿಳಿಗಿರಿ ರಂಗನಬೆಟ್ಟ- ಮಳೆ, ಗಾಳಿ, ಮಂಜಿನ ವಾತಾವರಣ
ಚಾಮರಾಜನಗರದ ಬಿಳಿಗಿರಿ ರಂಗನಬೆಟ್ಟ ದಟ್ಟ ಮಂಜಿನಿಂದ ಆವೃತವಾಗಿ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. ಯಳಂದೂರು ತಾಲೂಕಿನ ಇತಿಹಾಸ ಪ್ರಸಿದ್ಧ ಬಿಳಿಗಿರಿ ರಂಗನ ಬೆಟ್ಟ ನಿರಂತರ ಮಳೆಗೆ ಮಂಜಿನಿಂದ ತುಂಬಿ ತುಳುಕುತ್ತಿದೆ. ಜಿಟಿ ಜಿಟಿ ಮಳೆ, ಗಾಳಿ, ಮಂಜಿನ ವಾತಾವರಣ, ಜೊತೆಗೆ ಚಲಿಸುವ ಮೋಡಗಳನ್ನ ವೀಕ್ಷಿಸುತ್ತಾ ಪ್ರವಾಸಿಗರು ಮನಸೋತಿದ್ದಾರೆ.
8 ದಿನಗಳಿಂದ ಸುರಿಯುತ್ತಿರುವ ವರುಣಾ
ದಾವಣಗೆರೆ ಜಿಲ್ಲೆಯಾದ್ಯಂತ ಮಳೆ ಜೋರಾಗಿದೆ. ಕಳೆದ 8 ದಿನಗಳಿಂದಲೂ ಜಿಲ್ಲೆಯಲ್ಲಿ ಜಿಟಿಜಿಟಿ ಮಳೆಯಾಗ್ತಿದ್ದು, ಇಂದು ಬೆಳಗ್ಗೆಯಿಂದಲೂ ಕೆಲವೆಡೆ ಧಾರಾಕಾರ ಮಳೆ ಸುರಿದಿದೆ. ನಿರಂತರ ಮಳೆಯಿಂದ ಜಿಲ್ಲೆಯಲ್ಲಿ ಮಲೆನಾಡು ವಾತಾವರಣ ನಿರ್ಮಾಣವಾಗಿದ್ದು, ಜನರು ಮನೆಯಿಂದ ಹೊರ ಬಾರದಂತಾಗಿದೆ.
ಮಂಗಳೂರಿನಲ್ಲಿ ಜಲಾವೃತದ ಭೀತಿ
ಮಂಗಳೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಮುಗೇರ ಕುದ್ರು ಪ್ರದೇಶದಲ್ಲಿ ಜಲಾವೃತದ ಭೀತಿ ಎದುರಾಗಿದೆ. ಭಾರೀ ಮಳೆಯಿಂದ ಫಲ್ಗುಣಿ ನದಿ ನೀರಿನ ಪ್ರಮಾಣ ಹೆಚ್ಚಳವಾಗಿದ್ದು, ಜನವಸತಿ ಪ್ರದೇಶಕ್ಕೆ ನದಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಕೃಷಿ ಭೂಮಿಗೆ ನದಿ ನೀರು ನುಗ್ಗಿ ರೈತರು ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದಾರೆ
ರಭಸವಾಗಿ ಹರಿಯುತ್ತಿರುವ ತುಂಗಾ
ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಚಿಕ್ಕಮಗಳೂರಿನ ಶೃಂಗೇರಿ, ಕಾರ್ಕಳ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಮತ್ತೊಂದೆಡೆ ಭಾರೀ ಮಳೆಯಿಂದಾಗಿ ತುಂಗಾ ನದಿ ನೀರಿನ ಹರಿವು ಹೆಚ್ಚಳವಾಗಿದೆ. ಕಾರ್ಕಳ, ಶೃಂಗೇರಿ ರಸ್ತೆಯಲ್ಲಿ ಹರಿಯುತ್ತಿರುವ ತುಂಗಾ ನೀರು ಹೆಚ್ಚಳದಿಂದ ರಾಷ್ಟ್ರೀಯ ಹೆದ್ದಾರಿ 169ರಲ್ಲಿ 2 ಗಂಟೆಯಿಂದ ಸಂಚಾರ ಅಸ್ತವ್ಯಸ್ತವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ