ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ
ಸರ್ಕಾರಿ ಆಸ್ಪತ್ರೆಗೆ ಎಇಡಿ ಸಾಧನ ಅಳವಡಿಕೆ
ಹೊಸದಾಗಿ 47 ಡಯಾಲಿಸಿಸ್ ಕೇಂದ್ರ ಸ್ಥಾಪನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ರಾಜ್ಯ ಬಜೆಟ್ ಮಂಡಿಸಿದ್ದಾರೆ. 3.27 ಲಕ್ಷ ಕೋಟಿ ಅಂದಾಜಿನ ಬಜೆಟ್ ಅನ್ನು ರಾಜ್ಯದ ಜನತೆಯ ಮುಂದೆ ಇಟ್ಟಿದ್ದಾರೆ. ಈ ಬಜೆಟ್ನಲ್ಲಿ ದಿವಂಗತ ನಟ ಪುನೀತ್ ಅವರನ್ನು ನೆನಪಿಸಿಕೊಂಡಿದ್ದು, ಅವರ ಸ್ಮರಣಾರ್ಥವಾಗಿ ಸರ್ಕಾರಿ ಆಸ್ಪತ್ರೆಗೆ ಎಇಡಿ ಸಾಧನ ಅಳವಡಿಕೆ ಮಾಡುವುದಾಗಿ ಉಲ್ಲೇಖಿಸಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ನಿಧನರಾದರು. ಇವರ ಸಾವು ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದ ಸುದ್ದಿಯಾಯಿತು. ಆದರೆ ರಾಜ್ಯದಲ್ಲಿ ಕಂಡುಬರುವ ಹಠಾತ್ ಹಾರ್ಟ್ ಅಟ್ಯಾಕ್ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಿಗೆ ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್ (ಎಇಡಿ) ಸಾಧನ ಅಳವಡಿಸಲು ಸರ್ಕಾರ ಮುಂದಾಗಿದೆ.
ಡಯಾಲಿಸಿಸ್ ಕೇಂದ್ರ ಸ್ಥಾಪನೆ
ಇವಿಷ್ಟು ಮಾತ್ರವಲ್ಲದೆ, ಹೊಸದಾಗಿ 47 ಡಯಾಲಿಸಿಸ್ ಕೇಂದ್ರ ಸ್ಥಾಪನೆ, 23 ಪ್ರಾಥಮಿಕ ಆರೋಗ್ಯ ಕೇಂದ್ರ ಗಳನ್ನು ಸಾರ್ವಜನಿಕ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸುವ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ನಿನ್ನೆ ಮಂಡಿಸಿದ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಆರೋಗ್ಯ ಕ್ಷೇತ್ರಕ್ಕೆ 14,950 ಕೋಟಿ ಮೀಸಲಿಟ್ಟಿದ್ದಾರೆ.
ಡಿಜಿಟಲ್ ಹೆಲ್ತ್ ಸೊಸೈಟಿ
ರಾಜ್ಯದ ಜನರ ಆರೋಗ್ಯ ದೃಷ್ಟಿಯನ್ನು ಗಮನಹರಿಸಿಕೊಂಡು ಕರ್ನಾಟಕದಲ್ಲಿ ಆರೋಗ್ಯ ತಂತ್ರಜ್ನಾನ ಪ್ರಯೋಗಾಲಯವನ್ನು ಸ್ಥಾಪಿಸಲು ಯೋಚಿಸಿದೆ. ಹೀಗಾಗಿ 8 ಕೋಟಿ ರೂ ಮೀಸಲಿಟ್ಟಿದೆ. ಇದರ ಜೊತೆಗೆ ಆಯುಷ್ಮಾನ್ ಡಿಜಿಟಲ್ ಮಿಷನ್ ಯೋಜನೆ ಹಾಗೂ ಆರೀಗ್ಯ ಡಿಜಿಟಲ್ ಡಿಜಿಟೀಕರಣ ಉಪಕ್ರಮ ಅನುಷ್ಠಾನ ಮಾಡಲು ಕರ್ನಾಟಕ ಡಿಜಿಟಲ್ ಹೆಲ್ತ್ ಸೊಸೈಟಿ ಸ್ಥಾಪಿಸಲು ನಿರ್ಧರಿಸಿದೆ.
ನವಜಾತ ಶಿಶುಗಳು, ಮಕ್ಕಳ ಮತ್ತು ಮಹಿಳೆಯರ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಸಲುವಾಗಿ ಸರ್ಕಾರ ಚಿತ್ತ ಹರಿಸಿದೆ. ಹೀಗಾಗಿ ಬಜೆಟ್ನಲ್ಲಿ ಹಣವನ್ನು ಮೀಸಲಿಟ್ಟಿದೆ. ಜೊತೆಗೆ ಆರೋಗ್ಯ ಕಾರ್ಯಕರ್ತ ಬಲವರ್ಧನೆಗಾಗಿ 25 ಕೋಟಿ ವೆಚ್ಚ ಮಾಡಲು ನಿರ್ಧರಿಸಿದೆ. ಇನ್ನು ಮೆದುಳಿನ ಆರೋಗ್ಯ ವೃದ್ಧಿಗೆ ಬ್ರೈನ್ ಹೆಲ್ತ್ ಇನಿಶಿಯೇಟಿವ್ ಯೋಜನೆಯ ಕೆಳಗೆ ರಾಜ್ಯಕ್ಕೆ ಹಬ್ ಮತ್ತು ಸ್ಟೋಕ್ ಮಾದರಿಯಲ್ಲಿ 25 ಕೋಟಿ ಮೀಸಲಿಟ್ಟಿದೆ. ನಿಮ್ಹಾನ್ಸ್ ಸಹಯೋಗದೊಂದಿಗೆ ಈ ಕಾರ್ಯ ಕೈಗೊಳ್ಳಲಿದೆ.
ಕ್ಷಯ ರೋಗ
ಇದರ ಜೊತೆ ಜೊತೆಗೆ ಕ್ಷಯ ರೋಗವನ್ನು ಪ್ರಾರಂಭದಲ್ಲೇ ಪತ್ತೆ ಹಚ್ಚಲು8 ಜಿಲ್ಲೆಗಳಲ್ಲಿ ಸಮುದಾಯ ತಪಾಸನೆ ಮಾಡಲು ನಿರ್ಧರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ