ಚಂದ್ರಯಾನ-3, ಚಂದ್ರಯಾನ-2 ಆರ್ಬಿಟರ್ ಮಧ್ಯೆ ಸ್ನೇಹ ಸಂಪರ್ಕ
ಸೇಫ್ ಲ್ಯಾಂಡಿಂಗ್‌ಗೆ ಕ್ಷಣಗಣನೆ ಶುರುವಾಗಿರುವಾಗ ಶುಭ ಸಂದೇಶ
ಚಂದ್ರನ ದಕ್ಷಿಣ ಧ್ರುವದಲ್ಲಿ ‘ವಿಕ್ರಮ್’ ಸೇಫ್ ಲ್ಯಾಂಡ್‌ಗೆ ಕ್ಷಣಗಣನೆ
ಚಂದ್ರನ ಅಂಗಳದಲ್ಲಿ ಇತಿಹಾಸ ಸೃಷ್ಟಿಸಲು ಸಜ್ಜಾಗಿರೋ ಇಸ್ರೋ ವಿಜ್ಞಾನಿಗಳು ಮತ್ತೊಂದು ಸಿಹಿಸುದ್ದಿಯನ್ನ ಕೊಟ್ಟಿದ್ದಾರೆ. ಚಂದ್ರಯಾನ-3ರ ಲ್ಯಾಂಡರ್‌ಗೆ ಚಂದ್ರಯಾನ-2 ಆರ್ಬಿಟರ್ ಅಧಿಕೃತವಾಗಿ ಸ್ವಾಗತ ಕೋರಿದೆ. ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ಚಂದ್ರಯಾನ-2 ಆರ್ಬಿಟರ್‌ನೊಂದಿಗೆ ದ್ವಿಮುಖ ಸಂವಹನವನ್ನು ಸ್ಥಾಪಿಸಿದೆ. ಚಂದ್ರಯಾನ-2 ತನ್ನ ಗೆಳೆಯನಿಗೆ ಸ್ವಾಗತ ಕೋರಿದೆ ಅನ್ನೋ ಸಂದೇಶವನ್ನು ಹಂಚಿಕೊಂಡಿದೆ.
Chandrayaan-3 Mission:
‘Welcome, buddy!’
Ch-2 orbiter formally welcomed Ch-3 LM.Two-way communication between the two is established.
MOX has now more routes to reach the LM.
Update: Live telecast of Landing event begins at 17:20 Hrs. IST.#Chandrayaan_3 #Ch3
— ISRO (@isro) August 21, 2023
ಚಂದ್ರಯಾನ-3 ಬಗ್ಗೆ ಇಸ್ರೋ X ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಮಾಡಿದೆ. ಅದರಲ್ಲಿ ಸ್ವಾಗತ ಗೆಳೆಯ.. ಚಂದ್ರಯಾನ-2 ಆರ್ಬಿಟರ್ ಔಪಚಾರಿಕವಾಗಿ ಚಂದ್ರಯಾನ-3 ಅನ್ನು ಸ್ವಾಗತಿಸಿದೆ. ಎರಡರ ನಡುವೆ ದ್ವಿಮುಖ ಸಂವಹನವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದೆ. 2019ರಲ್ಲಿ ವಿಫಲವಾಗಿದ್ದ ಚಂದ್ರಯಾನ-2 ಆರ್ಬಿಟರ್ ಈಗಲೂ ಸಕ್ರಿಯವಾಗಿದೆ. ಸೇಫ್ ಲ್ಯಾಂಡಿಂಗ್‌ಗೆ ಕ್ಷಣಗಣನೆ ಶುರುವಾಗಿರುವಾಗಲೇ ವಿಕ್ರಂ ಲ್ಯಾಂಡರ್ ಕಳಿಸಿರೋ ಈ ಸಂದೇಶ ವಿಜ್ಞಾನಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಇದನ್ನೂ ಓದಿ: BREAKING: ಚಂದ್ರನ ಮೇಲೆ ಅಪ್ಪಳಿಸಿದ ರಷ್ಯಾದ ಲೂನಾ-25; ಇಸ್ರೋಗೆ ಸೆಡ್ಡು ಹೊಡೆಯೋ ಯೋಜನೆ ವಿಫಲ
ಸದ್ಯ ಚಂದ್ರಯಾನ-2ಗಿಂತ ಚಂದ್ರಯಾನ-3 100 km x 100 km ದೂರದಲ್ಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಆಗಸ್ಟ್ 23ರ ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಸೇಫ್ ಲ್ಯಾಂಡ್ ಆಗಲಿದೆ. ಕೋಟ್ಯಾಂತರ ಭಾರತೀಯರು ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್‌ಗೆ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ