4 ತಿಂಗಳು ಮುಂಚೆಯೇ ಎಲೆಕ್ಷನ್‌ಗೆ ರೆಡಿಯಾದ ಬಿಆರ್‌ಎಸ್!
ಈ ಬಾರಿ 2 ವಿಧಾನಸಭಾ ಕ್ಷೇತ್ರದಿಂದ ಅಖಾಡಕ್ಕಿಳಿದ ಕೆಸಿಆರ್
2014ರಲ್ಲಿ 102, 2018ರ ಎಲೆಕ್ಷನ್‌ನಲ್ಲಿ 104 ಸೀಟ್ ಗೆದ್ದಿದ್ದ BRS
ಹೈದರಾಬಾದ್: ತೆಲಂಗಾಣದ ಪ್ರತಿಪಕ್ಷ ಕಾಂಗ್ರೆಸ್, ಬಿಜೆಪಿ, AIMIM ನಾಯಕರಿಗೆ ಬಿಆರ್‌ಎಸ್ ಬಿಗ್ ಶಾಕ್ ನೀಡಿದೆ. ವಿಧಾನಸಭಾ ಚುನಾವಣೆಗೆ 4 ತಿಂಗಳು ಬಾಕಿ ಇರುವಾಗಲೇ ಭಾರತ ರಾಷ್ಟ್ರ ಸಮಿತಿ ಪಕ್ಷ 115 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 2014ರ ಎಲೆಕ್ಷನ್‌ನಲ್ಲಿ 102, 2018ರ ಚುನಾವಣೆಯಲ್ಲಿ ಸಿಎಂ ಕೆಸಿಆರ್ ಬರೋಬ್ಬರಿ 104 ಕ್ಷೇತ್ರಗಳನ್ನು ಗೆದ್ದಿದ್ದರು. 2023ರಲ್ಲೂ ಬಹುಮತದೊಂದಿಗೆ ಹ್ಯಾಟ್ರಿಕ್ ಸರ್ಕಾರ ರಚಿಸಲು ಚಂದ್ರಶೇಖರ್ ಭರ್ಜರಿ ಪ್ಲಾನ್ ಮಾಡಿದ್ದಾರೆ.
ಇದೇ ವರ್ಷಾಂತ್ಯಕ್ಕೆ ಅಂದ್ರೆ ಡಿಸೆಂಬರ್‌ನಲ್ಲಿ ತೆಲಂಗಾಣ ವಿಧಾನಸಭಾ ಚುನಾವಣೆ ನಡೆಯಲಿದೆ. 4 ತಿಂಗಳು ಮುಂಚೆಯೇ ಎಲೆಕ್ಷನ್‌ಗೆ ರೆಡಿ ಆಗಿರೋ ಬಿಆರ್‌ಎಸ್ ಪಕ್ಷ ಇವತ್ತು 115 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಒಟ್ಟು 119 ವಿಧಾನಸಭಾ ಕ್ಷೇತ್ರಗಳಲ್ಲಿ ಬರೀ ನಾಲ್ಕು ಕ್ಷೇತ್ರವನ್ನಷ್ಟೇ ಬಾಕಿ ಉಳಿಸಿಕೊಳ್ಳಲಾಗಿದೆ. 2014, 2018ರ ಚುನಾವಣೆಯಂತೆಯೇ ಪ್ರತಿಪಕ್ಷಗಳು ಚುನಾವಣೆಯಲ್ಲಿ ಅಬ್ಬರಿಸದಂತೆ ತಡೆಯಲು ಸಿಎಂ ಕೆ.ಸಿ ಚಂದ್ರಶೇಖರ್ ರಾವ್ ಬೇರೆ ಪಕ್ಷಗಳಿಗಿಂತ ಮುಂಚೆಯೇ ಬಿಆರ್‌ಎಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ತೆಲಂಗಾಣ ಸಿಎಂ ಕೆ.ಸಿ ಚಂದ್ರಶೇಖರ್ ರಾವ್ ಬಿಡುಗಡೆ ಮಾಡಿರೋ ಅಭ್ಯರ್ಥಿಗಳ ಪಟ್ಟಿಯಲ್ಲಿ ಈ ಬಾರಿ ಮಹತ್ವದ ಬದಲಾವಣೆ ಮಾಡಲಾಗಿದೆ. ಸಿಎಂ ಕೆಸಿಆರ್ ಅವರು ಈ ಬಾರಿ ಎರಡು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ. ಚಂದ್ರಶೇಖರ್ ಅವರು ಹಾಲಿ ಗಜವೆಲ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗಜವೆಲ್ ಜೊತೆಗೆ ಕಮ್ಮಾರೆಡ್ಡಿ ಕ್ಷೇತ್ರದಿಂದಲೂ ಸ್ಫರ್ಧಿಸಲು ಮುಂದಾಗಿದ್ದಾರೆ. ಸಿರಿಸಿಲ್ಲಾ ವಿಧಾನಸಭಾ ಕ್ಷೇತ್ರದಿಂದ ಕೆಸಿಆರ್ ಪುತ್ರ ಕೆ.ಟಿ ರಾಮರಾವ್ ಹಾಗೂ ಸಿದ್ದಿಪೇಟ್ ಅಸೆಂಬ್ಲಿ ಕ್ಷೇತ್ರದಿಂದ ಹಣಕಾಸು ಸಚಿವ ಹರೀಶ್ ರಾವ್ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಈ ಮೂಲಕ ತೆಲಂಗಾಣ ರಾಜ್ಯ ರೋಚಕ ರಾಜಕೀಯಕ್ಕೆ ಸಾಕ್ಷಿಯಾಗಲು ಅಖಾಡ ಸಜ್ಜುಗೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ