newsfirstkannada.com

ಕಾರುಗಳಿಗೆ ಕ್ರಿಕೆಟಿಗರು ಸುರೀತಾರೆ ಕೋಟಿ, ಕೋಟಿ; ವಿರಾಟ್‌ ಕೊಹ್ಲಿ, ಸಚಿನ್ ಹತ್ರ ಇರೋ ಎಕ್ಸ್‌ಪೆನ್ಸಿವ್ ಕಾರುಗಳ ಬೆಲೆ ಎಷ್ಟು?

Share :

02-07-2023

    ಗಾಡ್ ಆಫ್ ಕ್ರಿಕೆಟ್ ಸಚಿನ್​ ಲ್ಯಾಂಬರ್ಗಿನಿ Urus S ಕಾರಿನ ಮೌಲ್ಯ ಎಷ್ಟು..? ​

    ಟೀಮ್‌ ಇಂಡಿಯಾ ಆಟಗಾರರ ಪೈಕಿ ಯಾರ ಕಾರು ಮೋಸ್ಟ್ ಎಕ್ಸ್‌ಪೆನ್ಸಿವ್!

    ಕನ್ನಡಿಗ ಕೆ.ಎಲ್.ರಾಹುಲ್ ಬಳಿ 4.10 ಕೋಟಿಯ ಲ್ಯಾಂಬರ್ಗಿನಿ ಕಾರು

ಟೀಮ್ ಇಂಡಿಯಾ ಆಟಗಾರರು ಆಟದಲ್ಲೇ ಅಲ್ಲ. ಶ್ರೀಮಂತಿಕೆಯಲ್ಲೂ ಟಾಪ್‌ ಪ್ಲೇಯರ್ಸ್‌. ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾಪಟುಗಳಲ್ಲಿ ಒಬ್ಬರು ಎಂಬುದು ರಹಸ್ಯವಲ್ಲ. ಹೈ ಎಂಡ್‌ ಕಾರುಗಳಿಂದ ಹಿಡಿದು ದುಬಾರಿ ವಾಚ್‌, ಐಷಾರಾಮಿ ಮನೆಗಳ ಓನರ್‌ ಆಗಿರೋ ನಮ್ಮ ಟೀಮ್‌ ಇಂಡಿಯಾ ಆಟಗಾರರ ಪೈಕಿ ಯಾರು ಮೋಸ್ಟ್ ಎಕ್ಸ್‌ಪೆನ್ಸಿವ್ ಕಾರು ಹೊಂದಿದ್ದಾರೆ ಅನ್ನೋದಕ್ಕೆ ಇಲ್ಲಿದೆ ನೋಡಿ ಉತ್ತರ.

ಭಾರತದಲ್ಲಿ ಕ್ರಿಕೆಟ್ ಕೇವಲ ಗೇಮ್​ ಅಲ್ಲ. ಒಂದು ಎಮೋಷನ್. ಆಟಗಾರರನ್ನೂ ದೇವರಂತೆ ಪೂಜಿಸುವ ಅಭಿಮಾನಿಗಳು, ಜೀವಕ್ಕಿಂತ ಹೆಚ್ಚಾಗಿಯೇ ಪ್ರೀತಿಸುತ್ತಾರೆ. ತಮ್ಮ ಫಾಲೋಯಿಂಗ್, ಫ್ಯಾನ್​ ಬೇಸ್​​ ಹಾಗೂ ಆಟಕ್ಕೆ ತಕ್ಕಂತೆ ಲೆಕ್ಕ ಇಲ್ಲದಷ್ಟು ಹಣವನ್ನ ಜೇಬಿಗಿಳಿಸುವ ಟೀಮ್ ಇಂಡಿಯಾ ಆಟಗಾರರು, ವಿಶ್ವದಲ್ಲೇ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರು ಅನ್ನೋದು ಓಪನ್ ಸಿಕ್ರೇಟ್​. ತಮ್ಮ ಸ್ಟಾರ್​ ಡಮ್​​​​ಗೆ ಅನುಗುಣವಾಗಿ ಸಾವಿರಾರೂ ಕೋಟಿ ಆದಾಯಗಳಿಸುವ ಈ​ ಕ್ರಿಕೆಟಿಗರ ರಿಚ್​ ಲೈಫ್ ಒಮ್ಮೆ ನೆನೆಸಿಕೊಂಡ್ರೆ, ಮೈ ಜುಮ್ಮೆನಿಸುತ್ತೆ.

ಇಂತಹ ಐಷಾರಾಮಿ ಜೀವನ ನಡೆಸುವ ಆಟಗಾರರು ದುಬಾರಿ ಬಂಗಲೆಗಳನ್ನ ಖರೀದಿಸುವುದಷ್ಟೇ ಅಲ್ಲ ಕಾರುಗಳಿಗೂ ಕೋಟ್ಯಾಂತರ ರೂಪಾಯಿ ಸುರಿಯುತ್ತಾರೆ. ಗಾಡ್​ ಆಫ್ ಕ್ರಿಕೆಟ್ ಸಚಿನ್ ತೆಂಡುಲ್ಕರ್​ರಿಂದ ಹಿಡಿದು ಮೊಹಮ್ಮದ್ ಸಿರಾಜ್​​ ತನಕ ಕೋಟಿ ಕೋಟಿ ರೂಪಾಯಿ ಮೌಲ್ಯದ ಲಕ್ಸುರಿ ಕಾರುಗಳನ್ನೇ ಹೊಂದಿದ್ದಾರೆ. ಗ್ಯಾರೇಜ್​ನಲ್ಲಿ ಲೆಕ್ಕವಿಲ್ಲದಷ್ಟು ಕಾರ್​​ ಕಲೆಕ್ಷನ್ಸ್ ಹೊಂದಿದ್ದಾರೆ.

ಗಾಡ್ ಆಫ್ ಕ್ರಿಕೆಟ್ ಸಚಿನ್​ ಕಾರಿನ ಮೌಲ್ಯ ಎಷ್ಟು..? ​
​ವೀರೂ-ಯುವಿಯ ಕಾರ್ ಬೆಲೆ ಎಷ್ಟು ಗೊತ್ತಾ..!
ಸದ್ಯ ಭಾರತೀಯ ಕ್ರಿಕೆಟಿಗರ ಪೈಕಿ ಬಹುಕೋಟಿ ಒಡೆಯ ಅಂದ್ರೆ, ಅದು ಒನ್​ ಆ್ಯಂಡ್ ಒನ್ಲಿ ಸಚಿನ್ ತೆಂಡುಲ್ಕರ್. ಲಕ್ಸುರಿ ಲೈಫ್ ಲೀಡ್ ಮಾಡೋ ಸಚಿನ್​ ಕಾರಿನ ಬೆಲೆ ಭಾರತೀಯ ಕ್ರಿಕೆಟಿಗರ ಪೈಕಿ ಮೋಸ್ಟ್ ಎಕ್ಸೆಪೆನ್ಸಿವ್​​. ಈ ಬಳಿಕ ಲಕ್ಸುರಿ ಕಾರು ಹೊಂದಿರೋ ಮಾಜಿಗಳು ಯಾರಾದ್ರೂ ಇದ್ರೆ. ಅದು ವಿರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್.. ಟೀಮ್ ಇಂಡಿಯಾಗೆ ಡಿಫರೆಂಟ್ ಸ್ಟೈಲ್ ಆಫ್ ಕ್ರಿಕೆಟ್ ಪರಿಚಯಿಸಿರೋ, ಇವರು ಹೊಂದಿರೋ ಎಕ್ಸ್​ಪೆನ್ಸಿವ್ ಕಾರನ್ನ ಸ್ವತಃ ಧೋನಿ ಕೂಡ ಹೊಂದಿಲ್ಲ.

ಸಾವಿರಾರು ಕೋಟಿ ಒಡೆಯ ಸಚಿನ್, 4.18 ಕೋಟಿ ರೂಪಾಯಿ ಮೌಲ್ಯದ ದುಬಾರಿ ಲ್ಯಾಂಬರ್ಗಿನಿ Urus S ಕಾರು ಹೊಂದಿದ್ರೆ. ಮಾಜಿ ಓಪನರ್ ವಿರೇಂದ್ರ ಸೆಹ್ವಾಗ್, 3.74 ಕೋಟಿ ರೂ. ಮೌಲ್ಯದ ಬೆಂಟ್ಲಿ ಕಾರು ಹೊಂದಿದ್ದಾರೆ. ಯುವರಾಜ್ ಸಿಂಗ್ 3.7 ಕೋಟಿ ಮೌಲ್ಯದ ದುಬಾರಿ ​ಲ್ಯಾಂಬರ್ಗಿನಿ ಹೊಂದಿದ್ದಾರೆ. ಇನ್ನೂ ಸದ್ಯ ಐಪಿಎಲ್​ನಲ್ಲಿ ಮಾತ್ರವೇ ಕಾಣಿಸಿಕೊಳ್ತಿರೋ ಧೋನಿ, 2.5 ಕೋಟಿ ಮೌಲ್ಯದ ಪೋರ್ಷೆ 911 ಕಾರು ಹೊಂದಿದ್ದಾರೆ.

ಮಾಜಿ ಕ್ರಿಕೆಟಿಗರ ದುಬಾರಿ ಮೌಲ್ಯದ ಕಾರುಗಳನ್ನ ನೋಡಿದ್ಮೇಲೆ, ಹಾಲಿ ಕ್ರಿಕೆಟರ್​ಗಳ ಕಾರುಗಳು ಯಾವ್​ ರೇಂಜ್​​ಗೆ ಇರಬೇಕು. ಎಷ್ಟು ಲಕ್ಸುರಿ ಕಾರುಗಳನ್ನ ಹೊಂದಿರಬಹದು ಎಂಬ ಪ್ರಶ್ನೆ ನಿಮ್ಮ ಮುಂದೆ ಸಹಜವಾಗೇ ಬರುತ್ತೆ. ಆದ್ರೆ, ಈ ಲಕ್ಸುರಿ ಕಾರ್ ಕಲೆಕ್ಷನ್ ವಿಷ್ಯದಲ್ಲಿ ಹಾಲಿ ಕ್ರಿಕೆಟರ್ಸ್, ಮಾಜಿಗಳಿಗಿಂತ ಹಿಂದಿದ್ದಾರೆ. ವರ್ಷಕ್ಕೆ ನೂರಾರು ಕೋಟಿ ಆದಾಯ ಹೊಂದಿರೋ ಕಿಂಗ್​​ ಕೊಹ್ಲಿ, ಕಾರ್​​ಗಳ ವಿಚಾರದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ಶಿಖರ್ ಧವನ್​ಗಿಂತ ಹಿಂದಿದ್ದಾರೆ.​ ಇವರ ಕಾರಿನ ಬೆಲೆ ಒಮ್ಮೆ ಕೇಳಿದ್ರೆ, ಬೆರಗಾಗೋದು ಗ್ಯಾರಂಟಿ.​

ಹಾಲಿಗಳ ಪೈಕಿ ದುಬಾರಿ ಕಾರು ಯಾರದ್ದು..?

  • ರಾಹುಲ್ ಲ್ಯಾಂಬರ್ಗಿನಿ 4.10 ಕೋಟಿ
  • ಧವನ್​ ರೇಂಜ್​ ರೋವರ್​ 4 ಕೋಟಿ
  • ಹಾರ್ದಿಕ್ ಲ್ಯಾಂಬರ್ಗಿನಿ 3.73 ಕೋಟಿ
  • ರೋಹಿತ್ ಲ್ಯಾಂಬರ್ಗಿನಿ 3.5 ಕೋಟಿ
  • ಕೊಹ್ಲಿ ಅಡಿ R8 V10 3 ಕೋಟಿ
  • ಶ್ರೇಯಸ್​ ಮರ್ಸಿಡಿಸ್-ಬೆನ್ಜ್ 2.45 ಕೋಟಿ

ಹಾಲಿ ಕ್ರಿಕೆಟಿಗರ ಪೈಕಿ ಕೆ.ಎಲ್.ರಾಹುಲ್​, 4.10 ಕೋಟಿಯ ಲ್ಯಾಂಬರ್ಗಿನಿ ಹೊಂದಿದ್ರೆ, ಶಿಖರ್ ಧವನ್, 4 ಕೋಟಿ ರೂ ಮೌಲ್ಯದ ಕಾರು ರೇಂಜ್​ ರೋವರ್​ ಹೊಂದಿದ್ದಾರೆ.

ಕಲರ್​ಫುಲ್ ಲೈಫ್​ ಸೈಲ್ ಮೂಲಕ ಗಮನ ಸೆಳೆಯೂ ಹಾರ್ದಿಕ್, 3.73 ಕೋಟಿ ಮೌಲ್ಯದ ಲ್ಯಾಂಬರ್ಗಿನಿ ಕಾರನ್ನ ಬಳಸ್ತಾರೆ. ನಾಯಕ ರೋಹಿತ್ ಶರ್ಮಾ ಕೂಡ 3.5 ರೂ ಮೌಲ್ಯದ ಲ್ಯಾಂಬರ್ಗಿನಿ ಕಾರನ್ನ ಹೊಂದಿದ್ರೆ. ಕ್ರಿಕೆಟರ್​ಗಳ ಪೈಕಿ ಅತಿ ಹೆಚ್ಚು ಹಣ ಗಳಿಸೋ ಕೊಹ್ಲಿ, 3 ಕೋಟಿ ರೂಪಾಯಿಯ ಅಡಿ R8 V10 ಬಳಸ್ತಾರೆ. 2.45 ಕೋಟಿ ಮೌಲ್ಯದ ಮರ್ಸಿಡಿಸ್-ಬೆನ್ಜ್ ಕಾರು ಶ್ರೇಯಸ್​ ಗ್ಯಾರೇಜ್​ನಲ್ಲಿದೆ. ಬರೀ ಇವರಷ್ಟೇ ಅಲ್ಲ. ಸದ್ಯ ಟೀಮ್ ಇಂಡಿಯಾದಲ್ಲಿರೋ ಹಲವರು, ಕಾರ್ ಹಾಗೂ ಬೈಕ್​ಗಳ ಕ್ರೇಜ್ ಹೊಂದಿದ್ದಾರೆ. ಲಕ್ಸುರಿ ಜೀವನ ನಡೆಸೋ ಇವರು, ಕೋಟ್ಯಂತರ ರೂಪಾಯಿ ಮೌಲ್ಯದ ಕಾರುಗಳನ್ನ ಹೊಂದಿರೋದು ವಿಶೇಷ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾರುಗಳಿಗೆ ಕ್ರಿಕೆಟಿಗರು ಸುರೀತಾರೆ ಕೋಟಿ, ಕೋಟಿ; ವಿರಾಟ್‌ ಕೊಹ್ಲಿ, ಸಚಿನ್ ಹತ್ರ ಇರೋ ಎಕ್ಸ್‌ಪೆನ್ಸಿವ್ ಕಾರುಗಳ ಬೆಲೆ ಎಷ್ಟು?

https://newsfirstlive.com/wp-content/uploads/2023/07/Virat-Kohli-Sachin-Car.jpg

Load More