newsfirstkannada.com

ಶ್ರೀರಾಂಪುರದಲ್ಲಿ ಹರಿದ ನೆತ್ತರು.. ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ; ಕಾರಣವೇನು?

Share :

Published July 9, 2024 at 2:39pm

  ಶ್ರೀರಾಂಪುರದಲ್ಲಿ ನಿನ್ನೆ ರಾತ್ರಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಬರ್ಬರ ಹತ್ಯೆ

  ವ್ಯಕ್ತಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿ ಎಸ್ಕೇಪ್‌ ಆಗಿದ್ದ ಸ್ನೇಹಿತರು

  ಮಧ್ಯರಾತ್ರಿ ಸ್ನೇಹಿತನನ್ನು ಕರೆಸಿ ಮದ್ಯಪಾನ ಮಾಡಿಸಿ ಕೊಲೆಗೈದು ಪರಾರಿ

ಬೆಂಗಳೂರು: ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಬರ್ಬರ ಹತ್ಯೆಯಾಗಿದೆ. ಕುಮಾರ್ (39) ಕೊಲೆಯಾದ ವ್ಯಕ್ತಿ. ರಾತ್ರಿ 2 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದ್ದು, ಶ್ರೀರಾಂಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: BREAKING: ಜೈಲೂಟ ಸಾಕಪ್ಪ ಸಾಕು.. ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್‌; ಮನೆ ಊಟದ ಜೊತೆ ಏನೇನು ಕೇಳಿದ್ರು?

ಕೊಲೆಯಾದ ಕುಮಾರ್ ಹಾಗೂ ಸ್ನೇಹಿತ ದಯಾಳ್ ಮಧ್ಯೆ ನಿನ್ನೆ ರಾತ್ರಿ ಹಣದ ವ್ಯವಹಾರದ ಹಿನ್ನೆಲೆ ಮಾತುಕತೆ ನಡೆದಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದು ಈ ಕೊಲೆ ನಡೆದಿದೆ ಎನ್ನಲಾಗಿದೆ. ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಆರೋಪಿಗಳು ಪರಾರಿಯಾಗಿದ್ದರು.

ಕೊಲೆಯಾದ ಕುಮಾರ್ ಹಾಗೂ ಆರೋಪಿ ದಯಾಳ್ ಬಂಧನ

ಕುಮಾರ್ ಶ್ರೀರಾಮಪುರದಲ್ಲಿ ಹೊಟೇಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ಆರೋಪಿ ದಯಾಳ್, ಮೃತ ಕುಮಾರ್ ಕಳೆದ 15 ವರ್ಷದಿಂದ ಸ್ನೇಹಿತರಾಗಿದ್ದರು. ಕುಮಾರ್ ಹಾಗೂ ಸ್ನೇಹಿತರ ಮಧ್ಯೆ 50 ಲಕ್ಷ ರೂಪಾಯಿಗೂ ಅಧಿಕ ಹಣದ ವ್ಯವಹಾರ ನಡೆದಿತ್ತು.

ಇದನ್ನೂ ಓದಿ: ಡಿವೈಡರ್​ಗೆ ಡಿಕ್ಕಿ ಹೊಡೆದ ಸ್ವಿಫ್ಟ್​ ಕಾರು.. ಸ್ಥಳದಲ್ಲೇ ಇಬ್ಬರು ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ಫೈನಾನ್ಸ್ ಮಾಡಿಕೊಂಡಿದ್ದ ದಯಾಳ್‌ಗೆ ಇತ್ತೀಚೆಗೆ ಸಿಕ್ಕಾಪಟ್ಟೆ ಲಾಸ್ ಆಗಿತ್ತು. ಹೀಗಾಗಿ ಕುಮಾರ್‌ಗೆ ಹಣ ಹಿಂದಿರುಗಿಸುವಂತೆ ದಯಾಳ್‌ ಕೇಳಿದ್ದ. ಇದೇ ವಿಷಯಕ್ಕೆ ನಿನ್ನೆ ಕರೆಸಿ ಮದ್ಯಪಾನ ಮಾಡಿಸಿ ಹಣ ವಾಪಸ್ ಕೇಳಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಕುಮಾರ್ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶ್ರೀರಾಮಪುರ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಕೊಲೆಯಾದ ಸ್ಥಳದಲ್ಲಿ ಸಿಕ್ಕ ಸುಳಿವಿನ ಹಿನ್ನೆಲೆಯಲ್ಲಿ ಶ್ರೀರಾಮಪುರ ಪೊಲೀಸರು ಆರೋಪಿ ದಯಾಳ್ ಅನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರೀರಾಂಪುರದಲ್ಲಿ ಹರಿದ ನೆತ್ತರು.. ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ; ಕಾರಣವೇನು?

https://newsfirstlive.com/wp-content/uploads/2024/07/Bangalore-Srirampura-Murder.jpg

Load More