newsfirstkannada.com

ಕಾವೇರಿಗಾಗಿ ಮತ್ತೆ ಕ್ಯಾತೆ ತೆಗೆದ ತಮಿಳುನಾಡು, ಹೊರ ಹರಿವಿನಲ್ಲಿ ಹೆಚ್ಚಳ! ಇಂದು KRS ಡ್ಯಾಂ ನೀರಿನ ಮಟ್ಟ ಎಷ್ಟಿದೆ?

Share :

15-08-2023

    ಕಾವೇರಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋದ ತಮಿಳುನಾಡು

    8,590 ಕ್ಯೂಸೆಕ್ ನೀರು ಡ್ಯಾಂನಿಂದ ತಮಿಳುನಾಡಿಗೆ ಹರಿಸಲಾಗಿದೆ

    49.452 ಟಿಎಂಸಿ ಸಾಮರ್ಥ್ಯದ KRS ಡ್ಯಾಂ‌; ಇನ್ನೆಷ್ಟಿದೆ ನೀರಿನ ಸಂಗ್ರಹ?

ಮಂಡ್ಯ: ಕಾವೇರಿ ನೀರಿಗಾಗಿ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದ್ದು, ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಇದರ ಬೆನ್ನಲ್ಲೆ ಕಾವೇರಿ ನೀರಿನ ಹೊರ ಹರಿವು ಪ್ರಮಾಣ ಹೆಚ್ಚಳವಾಗಿದೆ.

ನಿನ್ನೆ ಕೆಆರ್‌ಎಸ್ ಡ್ಯಾಂ‌ನಿಂದ 5,243 ಕ್ಯೂಸೆಕ್ ನೀರು ಬಿಡುಗಡೆಯಾಗಿದ್ದು, ಇಂದು 8,590 ಕ್ಯೂಸೆಕ್ ನೀರು ಡ್ಯಾಂನಿಂದ ತಮಿಳುನಾಡಿಗೆ ಹರಿಸಲಾಗಿದೆ. ಜೂನ್, ಜುಲೈನಲ್ಲಿ 28.84 ಟಿಎಂಸಿ ನೀರು ಹರಿಸುವಂತೆ ಸುಪ್ರೀಂಕೋರ್ಟ್‌ಗೆ ತಮಿಳುನಾಡು ಅರ್ಜಿ ಸಲ್ಲಿಸಿತ್ತು. ಅರ್ಜಿಯ ಬೆನ್ನಲ್ಲೇ ಕಾವೇರಿ ನೀರಾವರಿ ನಿಗಮ ತಮಿಳುನಾಡಿಗೆ ಹೆಚ್ಚಿನ ನೀರು ಹರಿಸಿದೆ.

ಸದ್ಯ 49.452 ಟಿಎಂಸಿ ಸಾಮಾರ್ಥ್ಯದ ಕೆಆರ್‌ಎಸ್ ಡ್ಯಾಂ‌ನಲ್ಲಿ 33.570 ಟಿಎಂಸಿ ಮಾತ್ರ ನೀರಿದೆ. ಇನ್ನು ಡ್ಯಾಂನ ಒಳ ಹರಿವು 4,753 ಕ್ಯೂಸೆಕ್ ಹೆಚ್ಚಳವಾಗಿದೆ. ಅದರಲ್ಲಿ ತಮಿಳುನಾಡಿಗೆ 8,590 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ. ಇನ್ನು ನಾಲೆಗಳಿಗೆ 2,366 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ.

ಕೆಆರ್‌ಎಸ್ ಡ್ಯಾಂ ನ ಇಂದಿನ ನೀರಿನ ಮಟ್ಟ ಹೀಗಿದೆ

ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 111.80 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 33.570 ಟಿಎಂಸಿ
ಒಳ ಹರಿವು – 4,753 ಕ್ಯೂಸೆಕ್
ಹೊರ ಹರಿವು – 10,956 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾವೇರಿಗಾಗಿ ಮತ್ತೆ ಕ್ಯಾತೆ ತೆಗೆದ ತಮಿಳುನಾಡು, ಹೊರ ಹರಿವಿನಲ್ಲಿ ಹೆಚ್ಚಳ! ಇಂದು KRS ಡ್ಯಾಂ ನೀರಿನ ಮಟ್ಟ ಎಷ್ಟಿದೆ?

https://newsfirstlive.com/wp-content/uploads/2023/07/KRS-2.jpg

Load More