ತಾಯಿ, ಅಕ್ಕ ವಿಡಿಯೋ ಮಾಡಿಕೊಂಡು ಮಹಾಲಕ್ಷ್ಮಿ ಮನೆಗೆ ಎಂಟ್ರಿ!
ಮನೆಯಲ್ಲಿ ಯಾರೂ ಇಲ್ಲ.. ಫ್ರಿಡ್ಜ್ ಬಳಿ ಮಾತ್ರವೇ ಹುಳುಗಳು ಪತ್ತೆ
ಏಕಾಏಕಿ ಕಿರುಚಾಡಿ ಮನೆಯಿಂದ ಹೊರಗೆ ಬಂದ ತಾಯಿ, ಅಕ್ಕ
ಬೆಂಗಳೂರು: ವೈಯಾಲಿಕಾವಲ್ ಮನೆಯಲ್ಲಿ ನಡೆದಿರುವ ಮಹಾಲಕ್ಷ್ಮಿ ಮರ್ಡ*ರ್ ಕೇಸ್ ಎದೆ ಝಲ್ಲೆನ್ನಿಸುವಂತಿದೆ. ಫ್ರಿಡ್ಜ್‌ನಲ್ಲಿದ್ದ ತುಂಡು, ತುಂಡು ದೇಹವನ್ನ ತೆಗೆದುಕೊಂಡು ಹೋದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. FSL ತಂಡ ಹಾಗೂ ವೈದ್ಯರ ಪರಿಶೀಲನೆ ಬಳಿಕ ಮಹಾಲಕ್ಷ್ಮಿಯ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.
ಇದನ್ನೂ ಓದಿ: ಫ್ರಿಡ್ಜ್‌ನಲ್ಲಿ 32 ಪೀಸ್.. ವೈಯಾಲಿಕಾವಲ್ ಮಹಿಳೆ ಬರ್ಬರ ಕೊ*ಲೆಗೆ ಕಾರಣ ಅವನೇ? ಸ್ಫೋಟಕ ಮಾಹಿತಿ ಬಹಿರಂಗ
ಮಹಾಲಕ್ಷ್ಮಿ ಬರ್ಬರ ಕೊ*ಲೆಯ ವಿಷಯ ಗೊತ್ತಾಗಿದ್ದು ಭೀಕರವಾಗಿದೆ. ಮಹಾಲಕ್ಷ್ಮಿ ವಾಸವಿದ್ದ ಮನೆಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಕೊನೆಗೆ ಆ ಮನೆಯ ಓನರ್ ಮಹಾಲಕ್ಷ್ಮಿಯ ಗಂಡನಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಮಹಾಲಕ್ಷ್ಮಿಯ ಗಂಡ ಆಕೆಯ ಅಕ್ಕನಿಗೆ ಈ ರೀತಿ ಮನೆಯ ಓನರ್ ಫೋನ್ ಮಾಡಿ ಏನೋ ವಾಸನೆ ಬರುತ್ತಿದೆ ಎಂದು ಹೇಳುತ್ತಿದ್ದಾರೆ ಎಂದಿದ್ದಾರೆ.
ಸೆಪ್ಟೆಂಬರ್ 21ರಂದು ಮಹಾಲಕ್ಷ್ಮಿಯ ತಾಯಿ, ಅಕ್ಕ ಇಬ್ಬರು ವೈಯಾಲಿಕಾವಲ್ ಮನೆಯ ಡೋರ್ ಓಪನ್ ಮಾಡಿದಾಗ ಕೊ*ಲೆಯಾದ ವಿಷಯ ಗೊತ್ತಾಗಿದೆ. ಫಸ್ಟ್ ಫ್ಲೋರ್‌ನಲ್ಲಿದ್ದ ಮನೆಯ ಡೋರ್ ಓಪನ್ ಮಾಡಿದಾಗಲೇ ನೆಲದಲ್ಲಿ ಹುಳಗಳು ಕಾಣಿಸಿಕೊಂಡಿದೆ. ತಾಯಿ, ಅಕ್ಕ ವಿಡಿಯೋ ಮಾಡಿಕೊಂಡು ಮಹಾಲಕ್ಷ್ಮಿ ಇದ್ದ ಮನೆಯೊಳಗೆ ಹೋಗಿದ್ದಾರೆ. ಮನೆಯೊಳಗೆ ಯಾರೂ ಇರಲಿಲ್ಲ. ಆದರೆ ಫ್ರಿಡ್ಜ್ ಬಳಿ ಮಾತ್ರವೇ ಹುಳುಗಳು ಕಾಣಿಸಿಕೊಂಡು ಕೆಟ್ಟ ವಾಸನೆ ಬರುತ್ತಿದೆ. ಫ್ರಿಡ್ಜ್ ಓಪನ್ ಮಾಡ್ತಿದ್ದಂತೆ ಅಕ್ಕ, ತಾಯಿ ಇಬ್ಬರು ಏಕಾಏಕಿ ಕಿರುಚಾಡಿ ಹೊರಗೆ ಬಂದಿದ್ದಾರೆ.
ಫ್ರಿಡ್ಜ್‌ನೊಳಗೆ ಮಹಾಲಕ್ಷ್ಮಿಯ ದೇಹದ ಪೀಸ್, ಪೀಸ್ ಕಂಡು ತಾಯಿ, ಅಕ್ಕ ಇಬ್ಬರೂ ಗಾಬರಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಹಾಲಕ್ಷ್ಮಿ ಅಕ್ಕ ಸಹಿದಾ, ನನ್ನ ತಂಗಿಯನ್ನ ಸಾಯಿಸಿದವರಿಗೆ ಕಠಿಣ ಶಿಕ್ಷೆ ಆಗಬೇಕು. ಯಾವತ್ತೂ ಯಾವ ಹೆಣ್ಣು ಮಗುನೂ ಹೀಗೆ ಸಾಯಿಸಬಾರದು. ಒಂದು ವರ್ಷದ ಹಿಂದೆ ನನ್ನ ತಂಗಿಯನ್ನ ನಾನು ನೋಡಿದ್ದೆ. ಕೊನೆಗೂ ನನ್ನ ತಂಗಿಯ ಹತ್ತಿರ ಮಾತನಾಡೋಕೆ ಆಗಿಲ್ಲ. ಮಹಾಲಕ್ಷ್ಮೀ ಸಾವಿಗೆ ನ್ಯಾಯಬೇಕು ಅಂತ ಕಣ್ಣೀರಿಟ್ಟಿದ್ದಾರೆ.
ಮಹಾಲಕ್ಷ್ಮಿ ತಾಯಿ ಕೂಡ ರಾಖಿ ಹಬ್ಬದ ದಿನ ನನ್ನ ಮಗಳನ್ನು ಭೇಟಿಯಾಗಿದ್ದೆ. ಈಗ ಇಷ್ಟು ಕ್ರೂರವಾಗಿ ಸಾಯಿಸಿದ್ದಾರೆ. ಆ ಪಾಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ವೈಯಾಲಿಕಾವಲ್ ಠಾಣೆಯಲ್ಲಿ ಪುತ್ರಿ ಮಹಾಲಕ್ಷ್ಮೀ ಸಾವಿನ ಬಗ್ಗೆ ದೂರು ದಾಖಲಾಗಿದೆ. ಅಪರಿಚಿತ ವ್ಯಕ್ತಿಯಿಂದ ಹ*ತ್ಯೆಯಾಗಿದೆ ಮತ್ತು ಮಹಾಲಕ್ಷ್ಮಿ ಮನೆಯಲ್ಲಿದ್ದ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ