newsfirstkannada.com

ಗುಲಾಬಿ ನೋಟಿಗೆ ಟಾಟಾ ಬೈ, ಬೈ.. ₹2000 ನೋಟ್‌ ಬ್ಯಾನ್ ಮಾಡಲು ಕಾರಣವೇನು?

Share :

20-05-2023

    ಪಿಂಕ್ ನೋಟ್‌ ಮಾಡಿದ ಮೋಡಿ ಅಷ್ಟಿಷ್ಟಲ್ಲ!

    ಎಲ್ಲೇ ಇದ್ರೂ ₹2000 ನೋಟು ವಾಪಸ್ ಮಾಡಿ

    ಮೇ 23ರಿಂದ ಎಕ್ಸ್‌ಚೇಂಜ್ ಮಾಡಲು ಅವಕಾಶ

ಬರೀ 50 ನೋಟ್ ಕೈಯಲ್ಲಿದ್ರೆ 1 ಲಕ್ಷ ರೂಪಾಯಿ. ಜಸ್ಟ್‌ 100 ನೋಟು ನಿಮ್ಮ ಜೇಬಲ್ಲಿದ್ರೆ ಬರೋಬ್ಬರಿ 2 ಲಕ್ಷ ರೂಪಾಯಿ. ಅಬ್ಬಾ.. ಬಂದ ಹೊಸದರಲ್ಲಿ ಈ ಪಿಂಕ್ ಬಣ್ಣ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಎಷ್ಟೋ ಜನರ ಮನೆಯ ಗಲ್ಲಾಪೆಟ್ಟಿಗೆ, ಖಜಾನೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಈ ನೋಟು ಹೊರಬರುವ ಕಾಲ ಬಂದಿದೆ. 2 ಸಾವಿರ ಮುಖಬೆಲೆಯ 2000 ರೂಪಾಯಿ ನೋಟು ಇತಿಹಾಸದ ಪುಟ ಸೇರುತ್ತಿದೆ.

ಭಾರತೀಯ ರಿಸರ್ವ್ ಬ್ಯಾಂಕ್ 2000 ರೂಪಾಯಿ ಮುಖಬೆಲೆಯ ನೋಟ್ ಅನ್ನು ದೇಶಾದ್ಯಂತ ಚಲಾವಣೆಯಿಂದ ವಾಪಸ್ ಪಡೆದುಕೊಳ್ತಿದೆ. ತಕ್ಷಣದಿಂದಲೇ ಬ್ಯಾಂಕ್‌ಗಳು ಈ ನೋಟ್ ಅನ್ನು ಗ್ರಾಹಕರಿಗೆ ನೀಡುವಂತಿಲ್ಲ. ಆದ್ರೆ, ಇದು ನೋಟ್ ಬ್ಯಾನ್ ಅಲ್ಲ. ಚಲಾವಣೆಯಲ್ಲಿದ್ದ ನೋಟ್‌ ಅನ್ನು RBI ಹಿಂತೆಗೆದುಕೊಳ್ಳುವ ಮಹತ್ವದ ನಿರ್ಧಾರ ಕೈಗೊಂಡಿದೆ. ಚಲಾವಣೆಗೆ ಬ್ರೇಕ್‌ ಹಾಕುವುದರಿಂದ ಜನಸಾಮಾನ್ಯರು ಹೆದರುವ ಅವಶ್ಯಕತೆ ಇಲ್ಲ.

ಮೇ 23ರಿಂದ ನೋಟ್ ಎಕ್ಸ್‌ಚೇಂಜ್!
2000 ನೋಟು ಚಲಾವಣೆಗೆ ಬ್ರೇಕ್ ಹಾಕಿರೋ RBI ನಿಮ್ಮ ಹಣ ವಿನಿಮಯ ಮಾಡಿಕೊಳ್ಳಲು ಕಾಲಾವಕಾಶ ಕೊಟ್ಟಿದೆ. ಅಂದ್ರೆ ಮೇ 23ರಿಂದ ನೀವು ನಿಮ್ಮ ಬಳಿ ಇರುವ 2000 ರೂಪಾಯಿ ಮುಖಬೆಲೆಯ ನೋಟ್ ಅನ್ನು ಬ್ಯಾಂಕ್‌ಗೆ ನೀಡಬಹುದು. ಬ್ಯಾಂಕ್‌ಗಳಲ್ಲಿ ವಿನಿಮಯ ಹಾಗೂ ಖಾತೆಗೆ ಠೇವಣಿ ಮಾಡಿಕೊಳ್ಳುವ ಎರಡು ಅವಕಾಶ ಕಲ್ಪಿಸಲಾಗಿದೆ. ಮುಂದಿನ ಸೆಪ್ಟೆಂಬರ್ 30ರವರೆಗೂ ನೋಟು ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದಾಗಿದೆ.

ಗಡುವು ವಿಸ್ತರಣೆ ಸಾಧ್ಯತೆ
2000 ರೂಪಾಯಿ ನೋಟು ವಿನಿಮಯದ ಹಿನ್ನೆಲೆ ಮೇ 23 ಅಂದ್ರೆ ಮಂಗಳವಾರದಿಂದ ದೇಶಾದ್ಯಂತ ಮತ್ತೆ ಬ್ಯಾಂಕ್‌ಗಳ ಮುಂದೆ ಕ್ಯೂ ನಿಲ್ಲುವ ಸಾಧ್ಯತೆ ಇದೆ. RBI ದೇಶಾದ್ಯಂತ ತನ್ನ 19 ಶಾಖೆಗಳು ಹಾಗೂ ಹಲವು ಬ್ಯಾಂಕ್‌ಗಳಲ್ಲಿ ನೋಟು ವಿನಿಮಯಕ್ಕೆ ಅವಕಾಶ ನೀಡಲಿದೆ. ಸೆಪ್ಟೆಂಬರ್ ನಂತರವೂ ಬ್ಯಾಂಕ್‌ಗಳ ಮುಂದೆ ಜನ ಸರತಿ ಸಾಲಿನಲ್ಲಿ ನಿಂತ್ರೆ ಹಣ ವಿನಿಮಯಕ್ಕೆ ಗಡುವು ವಿಸ್ತರಣೆ ಮಾಡುವ ಸಾಧ್ಯತೆಯೂ ಇದೆ.

2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೋಟ್ ಬ್ಯಾನ್ ನಿರ್ಧಾರ ತೆಗೆದುಕೊಂಡ ಮೇಲೆ 2000 ಮುಖಬೆಲೆಯ ನೋಟ್ ಮುದ್ರಣ ಆರಂಭವಾಗಿತ್ತು. 2000 ನೋಟು ಚಾಲ್ತಿಗೆ ಬಂದ ಮೇಲೆ ಹಳೆಯ 500 ಹಾಗೂ 1000 ನೋಟು ಅನ್ನು ರಾತ್ರೋರಾತ್ರಿ ಬ್ಯಾನ್ ಮಾಡಲಾಗಿತ್ತು. 2018-19ರಲ್ಲೇ RBI 2000 ಮುಖಬೆಲೆಯ ನೋಟ್‌ ಅನ್ನ ಮುದ್ರಿಸುವ ಕಾರ್ಯ ಸ್ಥಗಿತಗೊಳಿಸಲಾಗಿತ್ತು.

ಪಿಂಕ್ ನೋಟ್‌ ಬ್ಯಾನ್ ಯಾಕೆ?
2000 ಮುಖಬೆಲೆಯ ನೋಟ್ ಚಲಾವಣೆಯಿಂದ ವಾಪಸ್ ಪಡೆದಿದ್ದು ಯಾಕೆ? ಈ ಪ್ರಶ್ನೆಗೂ RBI ಕೆಲವೊಂದು ಕಾರಣಗಳನ್ನ ನೀಡಿದೆ. 2000 ನೋಟು ಜನಸಾಮಾನ್ಯರ ಬಳಿ ಚಲಾವಣೆಯಲ್ಲಿ ಇರಲಿಲ್ಲ. 2000 ರೂಪಾಯಿ ನೋಟು ಇದ್ದ ಸಾಮಾನ್ಯ ಜನ ಚಿಲ್ಲರೆಗಾಗಿ ಒದ್ದಾಡಿದ ಸಾಕಷ್ಟು ಉದಾಹರಣೆಗಳಿವೆ. ಇನ್ನು 2000 ರೂಪಾಯಿ ನೋಟಿನಿಂದ ಕಪ್ಪು ಹಣ ಶೇಖರಿಸೋ ಅನುಮಾನಗಳಿದ್ದು ಇದಕ್ಕೆ ಕಡಿವಾಣ ಹಾಕಲು ಈ ನಿರ್ಧಾರ ಕೈಗೊಂಡಿರೋ ಸಾಧ್ಯತೆ ಇದೆ. ಹೀಗಾಗಿ 2000 ನೋಟು ವಾಪಸ್ ಪಡೆದ ತೀರ್ಮಾನ ಜನಸಾಮಾನ್ಯರಿಗೆ ತೊಂದರೆ ಆಗುವುದಿಲ್ಲ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗುಲಾಬಿ ನೋಟಿಗೆ ಟಾಟಾ ಬೈ, ಬೈ.. ₹2000 ನೋಟ್‌ ಬ್ಯಾನ್ ಮಾಡಲು ಕಾರಣವೇನು?

https://newsfirstlive.com/wp-content/uploads/2023/05/Modi-2000-note.jpg

Load More