newsfirstkannada.com

WATCH: ಯಶ್ 19 ಸಿನಿಮಾ ಬಗ್ಗೆ ಶೀಘ್ರದಲ್ಲೇ ಬಿಗ್ ಅಪ್ಡೇಟ್‌; ನಂಜನಗೂಡು ದೇವಸ್ಥಾನದಲ್ಲಿ ರಾಕಿಂಗ್ ಸ್ಟಾರ್ ಸುಳಿವು

Share :

21-06-2023

    ಕೆಜಿಎಫ್ 2 ಬಳಿಕ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವ್ದು ಗೊತ್ತಾ

    ಬಾಲಿವುಡ್‌ ನಟರನ್ನು ಇಲ್ಲಿಗೆ ಕರೆಸಿಕೊಂಡಿದ್ದೇನೆ ನಾನು ಅಲ್ಲಿಗೆ ಹೋಗಬೇಕಾ?

    ಮಕ್ಕಳ ಸಮೇತ ನಂಜನಗೂಡಿಗೆ ಆಗಮಿಸಿದ ರಾಕಿಂಗ್‌ ಸ್ಟಾರ್ ಯಶ್ ದಂಪತಿ

ಮೈಸೂರು: ಕೆಜಿಎಫ್ 2 ಸಕ್ಸಸ್ ಬಳಿಕ ರಾಕಿಂಗ್ ಸ್ಟಾರ್ ಯಶ್ ಮಾಡೋ ಸಿನಿಮಾ ಯಾವ್ದು. ಕಳೆದೊಂದು ವರ್ಷದಿಂದ ಯಶ್ 19 ಸಿನಿಮಾದ ಸಸ್ಪೆನ್ಸ್ ಹಾಗೇ ಉಳಿದಿದೆ. ದಿನಕಳೆದಂತೆ ರಾಕಿಂಗ್ ನೆಕ್ಸ್ಟ್‌ ಸಿನಿಮಾದ ಕ್ರೇಜ್ ಹೆಚ್ಚಾಗ್ತಿದೆ. ಈ ಕುತೂಹಲದ ಮಧ್ಯೆ ನಂಜನಗೂಡು ಶ್ರೀಕಂಠೇಶ್ವರನ ದರ್ಶನ ಪಡೆದ ರಾಕಿಂಗ್ ಸ್ಟಾರ್ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

ದಕ್ಷಿಣ ಕಾಶಿ ನಂಜನಗೂಡು ಶ್ರೀಕಂಠೇಶ್ವರನ ದೇವಾಲಯಕ್ಕೆ ಭೇಟಿ ನೀಡಿದ ನಟ ಯಶ್ ದಂಪತಿ ವಿಶೇಷ ಪೂಜೆ ಸಲ್ಲಿಸಿದರು. ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾತನಾಡಿದ ಯಶ್, ದೇವರ ಸನ್ನಿದಿಯಲ್ಲೇ ಇದ್ದೀನಿ. ಸುಖಾ ಸುಮ್ಮನೆ ತೇಲಿಸುವ ಮಾತುಗಳನ್ನು ಆಡುವುದಿಲ್ಲ. ಚಿತ್ರಮಂದಿರಕ್ಕೆ ಜನರು ದುಡ್ಡು ಕೊಟ್ಟು ಸಿನಿಮಾ ನೋಡಲು ಬರುತ್ತಾರೆ. ಉಚಿತವಾಗಿ ಸಿನಿಮಾ ನೋಡುವುದಿಲ್ಲ. ಅವರು ಕೊಡುವ ದುಡ್ಡಿಗೆ ನ್ಯಾಯ ಒದಗಿಸುವಂತೆ ಸಿನಿಮಾ ಮಾಡಬೇಕು. ನಾನು ಒಂದು ಕ್ಷಣವನ್ನೂ ವ್ಯರ್ಥ ಮಾಡುತ್ತಿಲ್ಲ. ಹೊಸ ಸಿನಿಮಾಗಾಗಿ ನಿರಂತರ ಕೆಲಸ ಮಾಡುತ್ತಿದ್ದೇನೆ. ಶೀಘ್ರದಲ್ಲೇ ನನ್ನ ಮುಂದಿನ ಚಿತ್ರ ಅನೌನ್ಸ್ ಮಾಡುವೆ ಎಂದು ಯಶ್ ಹೇಳಿದರು.

ಇನ್ನು ಬಾಲಿವುಡ್‌ಗೆ ಹೋಗಿದ್ದೀರಾ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಯಶ್, ನಾನು ಇರುವ ಕಡೆ ಎಲ್ಲರನ್ನೂ ಕರೆಸಿಕೊಂಡಿದ್ದೇನೆ. ನಾನು ಎಲ್ಲೂ ಹೋಗುವುದಿಲ್ಲ ಡೋಂಟ್ ವರಿ ಎಂದಿದ್ದಾರೆ. ಇದಕ್ಕೂ ಮುನ್ನ ಮಕ್ಕಳ ಸಮೇತ ನಂಜನಗೂಡು ದೇವಸ್ಥಾನಕ್ಕೆ ಆಗಮಿಸಿದ ಯಶ್ ದಂಪತಿ ವಿಶೇಷ ಪೂಜೆ ಸಲ್ಲಿಸಿದರು. ಮನೆ ದೇವರ ದರ್ಶನಕ್ಕಾಗಿ ಬಂದಿದ್ದೆವು. ಕೊರೊನಾ ಕಾರಣಕ್ಕಾಗಿ ನಾವು ಇಲ್ಲಿಗೆ ಬಂದಿರಲಿಲ್ಲ. ಇದು ನಮ್ಮ ಮನೆಯ ದೇವರು ಹೀಗಾಗಿ ಪ್ರಾರ್ಥನೆ ಸಲ್ಲಿಸಿದ್ದೇವೆ. ಯಾವುದೇ ವಿಶೇಷ ಹರಕೆ ಇರಲಿಲ್ಲ ಎಂದು ಯಶ್ ಸ್ಪಷ್ಟಪಡಿಸಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ 

WATCH: ಯಶ್ 19 ಸಿನಿಮಾ ಬಗ್ಗೆ ಶೀಘ್ರದಲ್ಲೇ ಬಿಗ್ ಅಪ್ಡೇಟ್‌; ನಂಜನಗೂಡು ದೇವಸ್ಥಾನದಲ್ಲಿ ರಾಕಿಂಗ್ ಸ್ಟಾರ್ ಸುಳಿವು

https://newsfirstlive.com/wp-content/uploads/2023/06/Yash-Family.jpg

Load More