newsfirstkannada.com

ನಟಿ ರಮ್ಯಾ ಆರೋಗ್ಯಕ್ಕೆ ಏನಾಯ್ತು? ಸಾವಿನ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಕೊಟ್ರು ಖಡಕ್‌ ಉತ್ತರ

Share :

06-09-2023

    ಕಾಡ್ಗಿಚ್ಚಿನಂತೆ ಹಬ್ಬಿದ ನಟಿ ರಮ್ಯಾ ಸಾವಿನ ಸುಳ್ಳು ಸುದ್ದಿ

    ರಮ್ಯಾಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ ಅನ್ನೋದು ಸುಳ್ಳು

    ಆರೋಗ್ಯದ ವದಂತಿ, ಗೊಂದಲಗಳಿಗೆಲ್ಲಾ ತೆರೆ ಎಳೆದ ರಮ್ಯಾ

ಸ್ಯಾಂಡಲ್‌ವುಡ್ ಮೋಹಕ ತಾರೆ ರಮ್ಯಾ ಅಭಿಮಾನಿಗಳು ಇವತ್ತು ಶಾಕ್ ಆಗಿದ್ರು. ಯಾರೋ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ರಮ್ಯಾಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ. ರಮ್ಯಾ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ರಮ್ಯಾ ಸಾವನ್ನಪ್ಪಿರೋ ಸುಳ್ಳು ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಈ ಸುಳ್ಳು ಸುದ್ದಿಗೆ ಇದೀಗ ಖುದ್ದು ರಮ್ಯಾ ಅವರೇ ಸ್ಪಷ್ಟನೆ ನೀಡಿದ್ದಾರೆ. ನಾನು ಇನ್ನೂ ಬದುಕಿದ್ದೇನೆ. ಆದಷ್ಟೂ ಬೇಗ ನಮ್ಮೂರಿಗೆ ಬರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಮೋಹಕ ತಾರೆ ಸಾವಿನ ಬಗ್ಗೆ ವದಂತಿ; ನಟಿ ರಮ್ಯಾ ಈಗ ಎಲ್ಲಿದ್ದಾರೆ? ಜೊತೆಗಿರೋ ಸ್ನೇಹಿತೆ ಹೇಳಿದ್ದೇನು?

ನಟಿ ರಮ್ಯಾ ಆರೋಗ್ಯದ ಬಗ್ಗೆ ಇಂದು ವದಂತಿಯನ್ನು ಹಬ್ಬಿಸಲಾಗಿದೆ. ಸದ್ಯ ಜಿನೆವಾದಲ್ಲಿರುವ ನಟಿ ರಮ್ಯಾ ಬಿಂದಾಸ್ ಆಗಿದ್ದಾರೆ. ಈ ಬಗ್ಗೆ ಪತ್ರಕರ್ತೆ ಚೈತ್ರಾ ಸುಬ್ರಮಣ್ಯನ್ ಅವರು ಟ್ವೀಟ್ ಮಾಡಿದ್ದು, ರಮ್ಯಾ ಅವರಿಗೆ ಏನೂ ಆಗಿಲ್ಲ. ಅವರು ಆರೋಗ್ಯವಾಗಿದ್ದಾರೆ ಎಂದು ಅವರ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದರು.

ತಮ್ಮ ಆರೋಗ್ಯದ ಬಗ್ಗೆ ವದಂತಿ ಕೇಳಿ ಬಂದ ಬೆನ್ನಲ್ಲೇ ಮೋಹಕ ತಾರೆ ರಮ್ಯಾ ಕೂಡ ಟ್ವೀಟ್ ಮಾಡಿದ್ದಾರೆ. ಚೈತ್ರಾ ಸುಬ್ರಮಣ್ಯನ್ ಅವರ ಟ್ವೀಟ್‌ಗೆ ರಿಪ್ಲೈ ಮಾಡಿರುವ ರಮ್ಯಾ ಅವರು, ಆದಷ್ಟು ಬೇಗ ನಮ್ಮ ಊರಿನಲ್ಲಿ ಭೇಟಿಯಾಗೋಣ ಎಂದಿದ್ದಾರೆ. ಈ ಮೂಲಕ ತಮ್ಮ ಆರೋಗ್ಯದ ಸುಳ್ಳು ಸುದ್ದಿ, ಗೊಂದಲಗಳಿಗೆಲ್ಲಾ ರಮ್ಯಾ ಅವರೇ ತೆರೆ ಎಳೆದಿದ್ದಾರೆ. ಸದ್ಯ ನಮ್ಮ ಊರಿಗೆ ಬರುತ್ತಿದ್ದೇನೆ ಎಂದಿರುವ ರಮ್ಯಾ ಅವರು ನಾಳೆ ಬೆಂಗಳೂರಿಗೆ ಬರಲಿದ್ದಾರೆ. ನಾಳೆ ನಮ್ಮೂರಿನಲ್ಲೇ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ತಿರುಗೇಟು ಕೊಡುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

ನಟಿ ರಮ್ಯಾ ಆರೋಗ್ಯಕ್ಕೆ ಏನಾಯ್ತು? ಸಾವಿನ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಕೊಟ್ರು ಖಡಕ್‌ ಉತ್ತರ

https://newsfirstlive.com/wp-content/uploads/2023/09/Ramya-2.jpg

Load More